ಟೀಮ್ ಇಂಡಿಯಾಗೆ ಅಭಿನಂದನೆಗಳ ಮಹಾಪೂರ

ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಟೆಸ್ಟ್ ಸರಣಿ ಗೆದ್ದಿರುವ ಟೀಮ್ ಇಂಡಿಯಾಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿವೆ.

ನಮ್ಮ ಯುವ ಆಟಗಾರರ ದೃಢ ಸಂಕಲ್ಪದಿಂದ ಗೆಲುವು ದಕ್ಕಿದೆ ಹೆಮ್ಮೆಯಾಗುತ್ತಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತದ ಗೆಲುವಿಗೆ ಟೀಮ್ ಇಂಡಿಯಾವನ್ನು ಅಭಿನಂದಿಸಿರುವ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಗಾಯಗಳು, ಅನಿಶ್ಚಿತತೆಯ ನಡುವೆಯೂ ಸಿಕ್ಕಿದ ಗೆಲುವು ಶ್ರೇಷ್ಠವಾದ ಸರಣಿ ಜಯ ಎಂದು ಬಣ್ಣಿಸಿದ್ದಾರೆ.

ಈ ಸಾಧನೆಯನ್ನು ಅಭಿನಂದಿಸಿರುವ ವಿವಿಎಸ್ ಲಕ್ಷ್ಮಣ್, ಅಜಿಂಕ್ಯಾ ರೆಹಾನೆಯವರ ಉತ್ತಮ ನಡೆ ಜಾಗತಿಕ ಗಮನಸೆಳೆದಿದೆ ಎಂದಿದ್ದಾರೆ.

Related posts