ಬಿಡುಗಡೆಗೂ ಮುನ್ನವೇ ಇತಿಹಾಸ ನಿರ್ಮಿಸಿದ ‘ಕೆಜಿಎಫ್-2’

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ 2’ ಚಿತ್ರ ಬಿಡುಗಡೆಗೆ ಮುನ್ನವೇ ದಾಖಲೆ ಬರೆದಿದೆ. ನಟ ಯಶ್ ಜನ್ಮದಿನಕ್ಕೂ ಮೊದಲೇ ಲೀಕ್ ಆಗಿ ಕನ್ನಡ ಸಿನಿಮಾ ಲೋಕದಲ್ಲಿ ಸಂಚಲನ ಮೂಡಿಸಿದ್ದ ‘ಕೆಜಿಎಫ್ 2’ ಚಿತ್ರದ ಟೀಸರ್ ಗುರುವಾರ ಯೂಟ್ಯೂಬ್‌ನಲ್ಲಿ ಅನಾವರಣಗೊಂಡಿತ್ತು.ಇದು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ದಾಖಲೆ ನಿರ್ಮಿಸಿದೆ.

ಕಡಿಮೆ ಅವಧಿಯಲ್ಲಿ ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದ ವಿಶ್ವದ ಮೊದಲ ಟೀಸರ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ‘ಕೆಜಿಎಫ್ 2’ ಟೀಸರ್ ಬಿಡುಗಡೆಯಾದ 10 ತಾಸುಗಳಲ್ಲೇ 20 ಲಕ್ಷಕ್ಕೂ ಹೆಚ್ಚು ಲಕ್ಷ ಲೈಕ್ಸ್ ಪಡೆದುಕೊಂಡಿದೆ. ಅಷ್ಟೇ ಅಲ್ಲ ಬಿಡುಗಡೆಯಾದ ಒಂದೇ ದಿನದಲ್ಲಿ ಇದು 8 ಕೋಟಿಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ವಿಜಯ್ ನಟನೆಯ ‘ಮಾಸ್ಟರ್’ ಸಿನಿಮಾದ ಟೀಸರ್ 16 ಗಂಟೆಗಳಲ್ಲಿ 16 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿತ್ತು. ಆ ದಾಖಲೆಯನ್ನು ಮುರಿದ ‘ಕೆಜಿಎಫ್ 2’ ಬಾಲಿವುಡ್, ಹಾಲಿವುಡ್ ಸಿನಿಮಾಗಳ ವೀಡಿಯೋಗಳ ದಾಖಲೆಗಳನ್ನು ಮೀರಿಸುವತ್ತು ಸಾಗುತ್ತಿರುವುದು ಚಿತ್ರರಂಗಕ್ಕೂ ಸಂತಸ ತಂದಿದೆ.

Related posts