ಮೈಸೂರು ಅರಮನೆಗೆ ಆಗಮಿಸಿದ ಗಜಪಡೆ; ಸಾಂಪ್ರದಾಯಿಕ ಸ್ವಾಗತ

ಮೈಸೂರು: ಅರಮನೆಯ ಪೂರ್ವದಿಕ್ಕಿನ ಜಯಮಾರ್ತಾಂಡ ಮಹಾದ್ವಾರದಲ್ಲಿ ಕಾಡಿನಿಂದ ನಾಡಿಗೆ ಬಂದ ಗಜಪಡೆಗೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡ, ಎಲ್. ನಾಗೇಂದ್ರ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಪಾಲಿಕೆ ಮೇಯರ್ ತಸ್ನಿಂ, ಪಾಲಿಕೆ ಆಯುಕ್ತರಾರ ಗುರುದತ್ತ ಹೆಗಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬಳಿಕ ಪೊಲೀಸ್ ಇಲಾಖೆ ವತಿಯಿಂದ ಜಯಮಾರ್ತಾಂಡ ದ್ವಾರದಲ್ಲಿ ಗಜಪಡೆಗಳಿಗೆ ಗಾರ್ಡ್ ಆಫ್ ಆನರ್ ಸಲ್ಲಿಸಲಾಯಿತು. ಅಲ್ಲಿಂದ ಮಧ್ಯಾಹ್ನ 12.45 ರ ಸುಮಾರಿಗೆ ನಾದಸ್ವರ ಹಾಗೂ ಪೂರ್ಣಕುಂಭದ ಮೂಲಕ ಅರಮನೆಯ ಆನೆ ಬಾಗಿಲಿಗೆ ಗಜೆಪಡೆಗಳನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ಅಲ್ಲಿ ಗಜಪಡೆಗಳಿಗೆ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಪುಷ್ಪನಮನ ಸಲ್ಲಿಸಿದರು.  

ಪತ್ರಕರ್ತರು ಮತ್ತು ಅವರ ಕುಟುಂಬಕ್ಕೆ ಸರ್ಕಾರದಿಂದ ಉಚಿತ ಹೆಲ್ತ್ ಕಾರ್ಡ್

ಬೆಂಗಳೂರು: ಪತ್ರಕರ್ತರು ಮತ್ತು ಅವರ ಕುಟುಂಬಕ್ಕೆ ವಾರ್ತಾ ಇಲಾಖೆಯಿಂದ ನೀಡಲಾಗುವ ಉಚಿತ ಹೆಲ್ತ್ ಕಾರ್ಡ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಬೆಂಗಳೂರಿನಲ್ಲಿಂದು ಗಾಂಧೀ ಜಯಂತಿ ಕಾರ್ಯಕ್ರಮ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೆಲ್ತ್ ಕಾರ್ಡನ್ನು ಸಾಂಕೇತಿಕವಾಗಿ ವಿತರಿಸಿದರು. ವಿಧಾನಸೌಧ ಆವರಣದಲ್ಲಿ ಮಾಜಿ ಪ್ರಧಾನ ಮಂತ್ರಿಗಳಾದ ದಿ.ಲಾಲ್ ಬಹದ್ದೂರ್ ಶಾಸ್ತ್ರಿ 116ನೇ ಜನ್ಮದಿನ ಅಂಗವಾಗಿ ಅವರ ಪ್ರತಿಮೆ ಬಳಿಯ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 151 ನೇ ಜನ್ಮ ದಿನದದ ಅಂಗವಾಗಿ ಅವರ ಪ್ರತಿಮೆ ಬಳಿಯ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ಈ ವೇಳೆ, ಪತ್ರಕರ್ತರು ಮತ್ತು ಅವರ ಕುಟುಂಬಕ್ಕೆ ವಾರ್ತಾ ಇಲಾಖೆಯಿಂದ ನೀಡಲಾಗುವ ಉಚಿತ ಹೆಲ್ತ್ ಕಾರ್ಡ್’ನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮತ್ತು IFWJ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಅವರಿಗೆ ನೀಡುವ ಮೂಲಕ ಚಾಲನೆ…

ಪ್ರವಾಹ ಪರಿಹಾರ; ಅನ್ಯಾಯಕ್ಕೆ ಮತದಾರನೇ ಉತ್ತರ ಕೊಡಬೇಕು: ಡಿ.ಕೆಶಿ

ಬೆಳಗಾವಿ: ಬೆಳಗಾವಿ ಹಾಗೂ ಉತ್ತರ ಕರ್ನಾಟಕದಲ್ಲಿ ಅನೇಕ ಮಂತ್ರಿಗಳು, ಶಾಸಕರು, ಸಂಸದರು ಇದ್ದರೂ ಪ್ರವಾಹದಿಂದ ನೊಂದಿರುವ ಜನರಿಗೆ ನೆರವಾಗಲು ಸಾಧ್ಯವಾಗಲಿಲ್ಲ ಎಂದರೆ, ಇದಕ್ಕೆ ಮತದಾರನೇ ಉತ್ತರ ಕೊಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ಪ್ರವಾಹದಿಂದ ಈ ಭಾಗದ ಜನರ ಜೀವನ ಬೀದಿಗೆ ಬಿದ್ದಿದೆ. ತಮ್ಮದೇ ಸರ್ಕಾರ, ಇಷ್ಟು ಜನ ಸಂಸದರು, ಮಂತ್ರಿಗಳು, ಶಾಸಕರು ಇದ್ದರೂ ಇಲ್ಲಿನ ಜನರಿಗೆ ಪರಿಹಾರ ಹಾಗೂ ನ್ಯಾಯ ಕೊಡಿಸಲು ಅವರು ವಿಫಲರಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು. ಅಭ್ಯರ್ಥಿ ಕುರಿತು ಸಭೆ ನಡೆಸಿ ತೀರ್ಮಾನ: ಮುಂಬರುವ ಉಪಚುನಾವಣೆಗಳಿಗೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಚರ್ಚಿಸಲು ನಮ್ಮ ಎಲ್ಲ ನಾಯಕರು, ಶಾಸಕರು, ಜಿಲ್ಲಾ ಅಧ್ಯಕ್ಷರು, ಚುನಾವಣೆಯಲ್ಲಿ ಸ್ಪರ್ಧೆ ಮಾಡಿದವರ ಸಭೆ ಕರೆದು, ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ನಂತರ ತೀರ್ಮಾನ ಮಾಡಲಾಗುವುದು ಎಂದು ಡಿ.ಕೆ…

ಗಾಂಧಿ ಜಯಂತಿ ಅಂಗವಾಗಿ ಶಾಂತಿಗಾಗಿ ಸೈಕಲ್ ಜಾಥಾ

ಬೆಂಗಳೂರು: ಗಾಂಧಿ ಜಯಂತಿ ಅಂಗವಾಗಿ ಪಾಲಿಕೆ ಸಹಯೋಗದಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ವಿಧಾನಸೌಧದಿಂದ ಮಹಾತ್ಮಗಾಂಧಿ ರಸ್ತೆ ಕಬ್ಬನ್ ಪಾರ್ಕ್ ವರೆಗೆ ಶಾಂತಿಗಾಗಿ ಸೈಕಲ್ ಜಾಥಾ ನಡೆಸಲಾಯಿತು. ಪರಿಸರ ಸ್ನೇಹಿ ಸಂಚಾರ ಮತ್ತು ಸುರಕ್ಷತೆಗಾಗಿ ಸೈಕಲ್ ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸೈಕಲ್ ಜಾಥಾ ನಡೆಸಲಾಯಿತು. ಪಾಲಿಕೆ, ಬೆಂಗಳೂರು ಸ್ಮಾರ್ಟ್ ಸಿಟಿ ಮತ್ತು ಡಲ್ಟ್ ಸಹಯೋಗದಲ್ಲಿ ಮುಂಬರುವ ನವೆಂಬರ್ 1, 2020 ರ ವೇಳೆಗೆ 5 ಕಿಮಿ ಸೈಕಲ್ ಪಥ ನಿರ್ಮಾಣವಾಗಲಿದೆ. ಈ ವರ್ಷಾಂತ್ಯಕ್ಕೆ ಸೈಕಲ್ ಪಥವನ್ನು 25ಕಿಮಿ ವರೆಗೆ ವಿಸ್ತರಿಸುವ ಯೋಜನೆಯಿದೆ. ಸೈಕಲ್ ಬಳಕೆಯ ಮೂಲಕ ಕಸಮುಕ್ತ ರಸ್ತೆ, ಸಾರ್ವಜನಿಕ ಸ್ಥಳಗಳ ಸ್ವಚ್ಚತೆ, ಶಾಂತಿ-ಸೌಹಾರ್ಧ ಜಾಗೃತಿ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸುವುದು ಸೈಕಲ್ ಜಾಥ ಉದ್ದೇಶವಾಗಿದೆ.

ಕೆಪಿಸಿಸಿ ಕಚೇರಿಯಲ್ಲಿ  ಗಾಂಧಿ ಜಯಂತಿ ಆಚರಣೆ

ಬೆಂಗಳೂರು: ರಾಷ್ಟ್ರಪತಿ ಮಹಾತ್ಮ ಗಾಂಧೀಜಿಯವರ ಜನ್ಮದಿನವನ್ನು ಕೆಪಿಸಿಸಿ ಕಚೇರಿಯಲ್ಲಿ ಇಂದು ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ಸಲೀಂ ಅಹ್ಮದ್ ರವರ ಅಧ್ಯಕ್ಷತೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಯವರಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಹಿರಿಯ ನಾಯಕರು, ರಾಜ್ಯಸಭಾ ಸದಸ್ಯರೂ ಆದ ಶ್ರೀ ಮಲ್ಲಿಕಾರ್ಜುನ ಖರ್ಗೆ, ಮಾಜಿ ಕೇಂದ್ರ ಸಚಿವರಾದ ಕೆ.ಎಚ್. ಮುನಿಯಪ್ಪ, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ವಿ.ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎಂ.ನಾರಾಯಣ ಸ್ವಾಮಿ, ವಿ‌.ಪರಿಷತ್ ಸದಸ್ಯ ನಸೀರ್ ಅಹ್ಮದ್,ಯು.ಬಿ‌.ವೆಂಕಟೇಶ್ , ವಿ.ಎಸ್.ಉಗ್ರಪ್ಪ , ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಸಯೀದ್ ಅಹ್ಮದ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ: ಪುಷ್ಪಾ ಅಮರನಾಥ್, ಎನ್.ಎಸ್.ಯು.ಐ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಹಲವು ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು

ಲಾಕ್ ಚಿತ್ರದ ಟ್ರೈಲರ್; ಸಕತ್ ಸುದ್ದಿ

ಕೋವಿಡ್ ಕಾರಣಕ್ಕಾಗಿ ಜಾರಿಯಲ್ಲಿದ್ದ ಲಾಕ್’ಡೌನ್ ತೆರವಾಗಿದೆ. ಇದೀಗ ‘ಲಾಕ್’ ಬಗ್ಗೆ ಸುದ್ದಿಯಾಗುತ್ತಿದೆ. ನಾಗೇಂದ್ರ ಅರಸ್ ನಿರ್ದೇಶಿಸಿ, ನಟಿಸಿರುವ ಲಾಕ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಕನ್ನಡ ಸಿನಿಮಾ ರಂಗದಲ್ಲಿ ಸಕತ್ ಸುದ್ದಿಯಾಗುತ್ತಿದೆ.

ತೀವ್ರ ಕುತೂಹಲ ಮೂಡಿಸಿದ ‘ರೌಡಿ ಬೇಬಿ’

ಲಾಕ್’ಡೌನ್ ನಿಯಮಗಳು ಸಡಿಲವಾಗುತ್ತಿದ್ದಂತೆಯೇ ಸಿನಿಮಾ ರಂಗದಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ. ಒಂದೊಂದೇ ಸಿನಿಮಾಗಳ ಟೀಸರ್ ಟ್ರೇಲರ್’ಗಳು ಬಿಡುಗಡೆಯಾಗುತ್ತಿವೆ. ಈ ನಡುವೆ, ರವಿ ಗೌಡ ಮತ್ತು ದಿವ್ಯಾ ರಾವ್ ಅಭಿನಯದ ರೌಡಿ ಬೇಬಿ ಚಿತ್ರದ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ರೆಡ್ಡಿ ಕೃಷ್ಣ ನಿರ್ದೇಶನದ ರೌಡಿ ಬೇಬಿ ತೀವ್ರ ಕುತೂಹಲ ಮೂಡಿಸಿದೆ.

ಡ್ರಗ್ಸ್ ಕೇಸ್; ನಿರೂಪಕಿ ಅನುಶ್ರೀ ಮನೆಯಲ್ಲೂ ತಲ್ಲಣ

ಬೆಂಗಳೂರು: ರಾಜ್ಯದಲ್ಲಿನ ಡ್ರಗ್ ಮಾಫಿಯಾ ಬಗ್ಗೆ ಪೊಲೀಸರು ತನಿಖೆಯನ್ನು ಬಿರುಸುಗೊಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಿನಿಮಾ ತಾರೆಯರಿಗೂ ಈ ನಶಾ ಲೋಕದ ನಂಟು ಇರುವ ಸಂಗತಿಗಳು ಬೆಳಕಿಗೆ ಬರುತ್ತಿವೆ. ನಟಿಯರಾದ ರಾಗಿಣಿ ಹಾಗೂ ಸಂಜನಾ ಬಂಧನಕ್ಕೊಳಗಾದ ನಂತರವಂತೂ ಈ ಪ್ರಕರಣದ ತನಿಖೆ ಕುತೂಹಲಘಟ್ಟಕ್ಕೆ ತಲುಪಿದೆ. ಆದರೆ ಅನುಶ್ರೀ ಬಗ್ಗೆ..? ನಟಿ ಹಾಗೂ ನಿರೂಪಕಿ ಅನುಶ್ರೀ ಅವರಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ ವಿಚಾರದ ನಂತರ ಬಗೆಬಗೆಯ ಚರ್ಚೆಗಳು ಸಾಗಿವೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದನ್ನು ಹರಿಯಬಿಟ್ಟಿರುವ ಅನುಶ್ರೀ, ಇತ್ತೀಚಿನ ಬೆಳವಣಿಗೆ ಬಗ್ಗೆ ನೋವು ವ್ಯಕ್ತಪಡಿಸಿದ್ದಾರೆ. ತನಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ ಎನ್ನುತ್ತಿರುವ ಅವರು, ತಾನು ಸಿಸಿಬಿ ನೋಟಿಸ್ ಹಿನ್ನೆಲೆಯಲ್ಲಿ ಪೊಲೀಸರೆದುರು ಹಾಜರಾದ ಮಾತ್ರಕ್ಕೆ ಅಪರಾಧಿಯಲ್ಲ, ಆರೋಪಿಯೂ ಅಲ್ಲ ಎಂದು ಸ್ಪಷ್ಟಪಡಿಸಿದ ಅನುಶ್ರೀ, ತಮ್ಮ ಬಗ್ಗೆ ಹರಿದಾಡುತ್ತಿರುವ ಸುದ್ದಿಯಿಂದಾಗಿ ಮನೆಯವರಿಗೂ ನೆಮ್ಮದಿ ಇಲ್ಲದಂತಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.

ಪೊಳಲಿ ರಾಜರಾಜೇಶ್ವರಿ ದೇವಾಲಯ ಬಳಿ ಸ್ವಚ್ಛ ಭಾರತ್

ಮಂಗಳೂರು: ಗಾಂಧೀ ಜಯಂತಿ ದಿನವಾದ ಇಂದು ಮಂಗಳೂರು ಸಮೀಪದ ಪೊಳಲಿ ರಾಜರಾಜೇಶ್ವರಿ ದೇವಾಲಯ ಬಳಿ ಯುವಕರ ಸಮೂಹ ವಿಶಿಷ್ಟ ಕಾರ್ಯಕ್ರಮ ಆಯೋಜಿಸುವ ಮೂಲಕ ಗಮನಸೆಳೆದರು. ಪುರಾಣ ಪ್ರಸಿದ್ಧ ಪೊಳಲಿ ಕ್ಷೇತ್ರ ಸುತ್ತಮುತ್ತಲ ಪ್ರದೇಶಗಳನ್ನು ಸ್ವಚ್ಛ ಭಾರತ್ ಅಭಿಯಾನ ಮೂಲಕ ಶುಚಿಗೊಳಿಸಲಾಯಿತು. ಬಿಜೆಪಿ ಯುವಮೋರ್ಚಾ ಬಂಟ್ವಾಳ ಇದರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ವಠಾರವನ್ನು ಸ್ವಚ್ಛಗೊಳಿಸಿದ ಕೈಂಕರ್ಯದಲ್ಲಿ ಗ್ರಾಮಸ್ಥರೂ ಸಾಥ್ ನೀಡಿದರು.   ಬಿಜೆಪಿ ಮಂಡಲ ಉಪಾಧ್ಯಕ್ಷರಾದ ಚಂದ್ರವತಿ ಪೊಳಲಿ, ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ್ ಬಜ, ಯುವಮೋರ್ಚಾ ಅಧ್ಯಕ್ಷರಾದ ಪ್ರದೀಪ್ ಅಜ್ಜಿಬೆಟ್ಟು, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನೇಶ್ ದಂಬೆದಾರು, ಜಿಲ್ಲಾ ಯುವಮೋರ್ಚಾ ಸದಸ್ಯರಾದ ಕಿಶೋರ್ ಪಲ್ಲಿಪ್ಪಾಡಿ ಸೇರಿದಂತೆ ಅನೇಕ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ರಾಹುಲ್ ಗಾಂಧಿ, ಪ್ರಿಯಾಂಕಾ ವಿರುದ್ಧ ಕೇಸ್; ಯೋಗಿ ಸರ್ಕಾರದ ಅಚ್ಚರಿಯ ನಡೆ

ದೆಹಲಿ: ಉತ್ತರ ಪ್ರದೇಶದ ಹತ್ರಾಸ್’ನಲ್ಲಿನ ಯುವತಿಯ ಅತ್ಯಾಚಾರ ಕೊಲೆ ಪ್ರಕರಣ ದೇಶಾದ್ಯಂತ ಆಕ್ರೋಶದ ಏಲ್ ಎಬ್ಬಿಸಿದೆ. ಈ ಪ್ರಕರಣ ಖಂಡಿಸಿ ಹತ್ರಾಸ್’ಗೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪೊಲೀಸರಿಂದ ಬಂಧನಕ್ಕೊಳಗಾಗಿ ಬಿಡುಗಡೆಗೊಂಡಿದ್ದರು. ಇದೀಗ ಅವರ ಮೇಲೆ ಮತ್ತೊಂದು ಕೇಸ್ ದಾಖಲಾಗಿದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಸೇರಿದಂತೆ ನೂರಾರು ಕಾರ್ಯಕರ್ತರು, ಗ್ರೇಟರ್ ನೋಯ್ಡಾದ ಎಕ್ಸ್‌ಪ್ರೆಸ್‌ವೇಗಳಲ್ಲಿ ಪ್ಯಾರಿ ಚೌಕ್ ಬಳಿ ಮೆರವಣಿಗೆ ಆರಂಭಿಸಿದ್ದರು. ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಸಹಿತ ಹಲವರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ್ದರು. ಆ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದ ಮತ್ತು ಮಾಸ್ಕ್ ಧರಿಸದ ಕಾರಣಕ್ಕಾಗಿ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಸುಮಾರು 200 ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ ಎಂದು ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದ ಪೋಲೀಸರು…