ದೀಪಾವಳಿಗೆ ಶೀತಲ್ ‘ವಿಂಡೋ ಸೀಟ್’ ಟೀಸರ್ ರಂಜನೆ

ದೀಪಾವಳಿ ಸಂದರ್ಭದಲ್ಲಿ ಸಿನಿ ರಸಿಕರಿಗೂ ಸಂಭ್ರಮ ಉಣಬಡಿಸಲು ಸಿದ್ಧರಾಗಿದ್ದಾರೆ ಸಿನಿಮಾ ದಿಗ್ಗಜರು. ಇದೇ ಸಂದರ್ಭದಲ್ಲಿ ರಂಜನೆಯ ಸನ್ನಿವೇಶ ಸೃಷ್ಟಿಸಿದ್ದಾರೆ ಆ್ಯಂಕರ್ ಶೀತಲ್ ಶೆಟ್ಟಿ. ಶೀತಲ್ ಶೆಟ್ಟಿ ನಿರ್ದೇಶಿಸಿರುವ ‘ವಿಂಡೋ ಸೀಟ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ. ಈ ಚಿತ್ರದಲ್ಲಿ ನಿರೂಪ್ ಬಂಡಾರಿಗೆ ಜೋಡಿಯಾಗಿ ಅಮೃತ ಅಭಿನಯಿಸಿದ್ದಾರೆ.

ಮತ್ತೆ ಪಾಕ್ ಕಿರಿಕ್; ಭಾರತೀಯ ಯೋಧರ ಪ್ರಬಲ ಪ್ರತ್ಯುತ್ತರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಪಡೆ ಭಾರತದ ತಾಳ್ಮೆ ಪರೀಕ್ಷೆ ಮಾಡಲು ಮುಂದಾಗಿ ಮತ್ತೊಮ್ಮೆ ನಗೆಪಾಟಲಿಗೀಡಾಗಿದೆ. ಗಡಿ ಭಾಗದಲ್ಲಿ ಭಾತದತ್ತ ಗುಂಡಿನ ದಾಳಿಗೆ ಮುಂದಾದ ಪಾಕ್ ಸೇನೆಗೆ ಭಾರತೀಯ ಯೋಧರು ಇಂದು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಪಾಕಿಸ್ತಾನದ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಶಸ್ತ್ರಗಳಿಂದಲೇ ಪ್ರತಿಕ್ರಿಸಿದ್ದು, ಪಾಕ್ ಬಂಕರ್ ಗಳ ಮೇಲೆ ಸಾಲು ಸಾಲು ದಾಳಿ ನಡೆಸಿದೆ. ಭಾರತದ ಯೋಧರ ಪ್ರಬಲ ದಾಳಿಗೆ ನಲುಗಿದ ಪಾಕ್ ಪಡೆ ಲಾಂಚ್ ಪ್ಯಾಂಡ್ ಬಿಟ್ಟು ಓಡಿಹೋಗುವಂತಾಯಿತು. ಈ ಕಾದಾಟದಲ್ಲಿ ಐವರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಪಾಕಿಸ್ತಾನ ಪಡೆಯ 8 ಮಂದಿ ಯೋಧರು ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ.

ಈ ಬಾರಿಯ ದೀಪಾವಳಿ ಹೊಸ ಮನ್ವಂತರಕ್ಕೆ ಮುನ್ನುಡಿ

ಎಲ್ಲೆಲ್ಲೂ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಮನೆಮಾಡಿದೆ. ಕೊರೋನಾ ಕರಾಳತೆಯ ಸನ್ನಿವೇಶದಲ್ಲಿ ನಾಡು ಸಿಲುಕಿದ್ದರೂ ಈ ಬಾರಿಯ ದೀಪಾವಳಿಯ ಸಡಗರಕ್ಕೇನೂ ಅಡ್ಡಿಯಾಗಿಲ್ಲ. ಪಟಾಕಿ ಇಲ್ಲದೇ ದೀಪಗಳ ಬೆಳಕಿಗಷ್ಟೇ ಸೀಮಿತಗೊಳಿಸಲು ಪ್ರಜ್ಞಾವಂತ ಜನತೆ ನಿರ್ಧರಿಸುವ ಮೂಲಕ ಈ ದೀಪಾವಳಿ ಸಂದರ್ಭದಲ್ಲಿ ಹೊಸ ಮನ್ವಂತರಕ್ಕೂ ಮುನ್ನುಡಿ ಬರೆಯಲಾಗಿದೆ. ಈ ಬಾರಿಯ ದೀಪಾವಳಿ ಪ್ರಧಾನಿ ನರೇಂದ್ರ ಮೋದಿ ಪಾಲಿಗೂ ವಿಶೇಷ. ದೇಶ ಕಾಯುವ ಯೋಧರೊಂದಿಗೆ ಬೆಳಕಿನ ಹಬ್ಬ ಆಚರಿಸಿ ಸಿಹಿ ಸನ್ನಿವೇಶದಲ್ಲಿ ಅವರು ಪಾಲ್ಗೊಂಡು ಜಾಗತಿಕ ಗಮನಸೆಳೆದರು. ಇದೇ ವೇಳೆ ಟ್ವೀಟ್ ಮಾಡಿ ದೇಶದ ಜನತೆಗೆ ದೀಪಾವಳಿಯ ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ, ಈ ಬಾರಿ ದೀಪಾವಳಿ ಸಂದರ್ಭದಲ್ಲಿ ದೇಶದ ಗಡಿ ಕಾಯುತ್ತಿರುವ ನಮ್ಮ ವೀರ ಯೋಧರಿಗೆ ಸೆಲ್ಯೂಟ್ ಹೊಡೆಯಲು ದೀಪಗಳನ್ನು ಬೆಳಗಿಸಿ ಎಂದು ಕರೆ ಕೊಟ್ಟಿದ್ದಾರೆ. This Diwali, let us also light a Diya as…

ಗೆಲುವಿನ ಅಭಿಯಾನ ಮುಂದುವರಿಸಲು ಬಿಜೆಪಿ ಕಾರ್ಯತಂತ್ರ; ರಾಜ್ಯಗಳ ಉಸ್ತುವಾರಿಗೆ ಯುವ ತಂಡ

ದೆಹಲಿ: ಇತ್ತೀಚಿನ ಚುನಾವಣೆಗಳಲ್ಲಿ ಜಯಭೇರಿ ಭಾರಿಸಿರುವ ಬಿಜೆಪಿಯಲ್ಲಿ ಸಂಚಲನ ಉಂಟಾಗಿದೆ. ಗೆಲುವಿನ ಅಭಿಯಾನವನ್ನು ಮುಂದುವರಿಸಲು ಕಾರ್ಯತಂತ್ರ ರೂಪಿಸಿರುವ ಪಕ್ಷದ ಹೈಕಮಾಂಡ್ ವಿವಿಧ​ ರಾಜ್ಯಗಳಿಗೆ ಉಸ್ತುವಾರಿಯ ಹೊಸ ತಂಡವನ್ನು ಘೋಷಿಸಿದೆ. ಕರ್ನಾಟಕ ರಾಜ್ಯದ ಉಸ್ತುವಾರಿಯಾಗಿ ಅರುಣ್​​ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಅವರ ಜೊತೆ ಡಿಕೆ ಅರುಣಾ ಅವರನ್ನು ನೇಮಿಸಲಾಗಿದೆ. ರಾಜ್ಯದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಿ.ಟಿ. ರವಿ ಅವರಿಗೆ ತಮಿಳುನಾಡು, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಉಸ್ತುವಾರಿ ವಹಿಸಲಾಗಿದೆ. ಪಿ.ಮುರುಳೀಧರ ರಾವ್‌ ಅವರಿಗೆ ಮಧ್ಯಪ್ರದೇಶದ ಹೊಣೆ ವಹಿಸಲಾಗಿದೆ. ನಿರ್ಮಲಕುಮಾರ್‌ ಸುರಾನಾ ಅವರನ್ನು ನೆರೆಯ ಪುದುಚೇರಿ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗದೆ.

Uncategorized

ಕೃಷಿ ಬೆಲೆ ಆಯೋಗದಿಂದ ಕೃಷಿ ಮತ್ತು ತೋಟಗಾರಿಕಾ ಬೆಲೆ ಕುರಿತು ಸಿಎಂಗೆ ಶಿಫಾರಸು

ಬೆಂಗಳೂರು: ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮಗೌಡ ಬೆಳಗುರ್ಕಿ ಅವರು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ 2019-20 ಹಾಗೂ 2020-21 ನೆ ಸಾಲಿನ ಕೃಷಿ ಮತ್ತು ತೋಟಗಾರಿಕಾ ಬೆಲೆಗಳ ಕುರಿತು ಆಯೋಗದ ಶಿಫಾರಸುಗಳನ್ನು ಸಲ್ಲಿಸಿದರು. ಕೃಷಿ ಸಚಿವ ಬಿ. ಸಿ. ಪಾಟೀಲ್, ಪೌರಾಡಳಿತ, ತೋಟಗಾರಿಕೆ ಮತ್ತು ರೇಷ್ಮೆ ಸಚಿವ ನಾರಾಯಣ ಗೌಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬೆಂಗಳೂರಿನಲ್ಲಿ ಮಾದರಿ ಪಾರಂಪರಿಕ ಗ್ರಾಮ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ಮಾದರಿ ಪಾರಂಪರಿಕ ಗ್ರಾಮವನ್ನು ಉದ್ಘಾಟಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಬ್ಯಾಟರಾಯನಪುರ ಶಾಸಕ ಕೃಷ್ಣ ಬೈರೇಗೌಡ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಉಪಸ್ಥಿತರಿದ್ದರು.

ಎಲ್ಲರ ಗಮನ ಕೇಂದ್ರೀಕರಿಸುತ್ತಿರುವ ‘ಗಮನಂ’

ಬಹುಭಾಷಾ ಚಿತ್ರ “ಗಮನಂ” ಕನ್ನಡ ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಸದ್ದು ಮಾಡುತ್ತಿದೆ. ಶ್ರೀಯಾ ಶರಣ್​ ಹಾಗೂ ನಿತ್ಯಾ ಮೆನನ್​ ಅಭಿನಯದ “ಗಮನಂ” ಕನ್ನಡ ಟ್ರೇಲರನ್ನು ಶಿವರಾಜ್ ಕುಮಾರ್ ಬಿಡುಗಡೆ ಮಾಡಿದ್ದರು. ಸುಜನಾ​ ರಾವ್ ನಿರ್ದೇಶಿಸಿರುವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಇಳಯರಾಜ ಅವರ ಹಿನ್ನೆಲೆ ಸಂಗೀತದ ಥಳುಕು ಎಲ್ಲರ ಗಮನ ಕೇಂದ್ರೀಕರಿಸುವಂತೆ ಮಾಡಿದೆ.

ರಾಜ್ಯದಲ್ಲಿ ನಾಲ್ಕು ವೈದ್ಯಕೀಯ ಕಾಲೇಜುಗಳಿಗೆ ಮಂಜೂರಾತಿ

ಹಾವೇರಿ: ಉತ್ತಮ ಆರೋಗ್ಯ ಸೇವೆ ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದ್ದು, ಹಾವೇರಿಯಲ್ಲಿ ‘ಆರೋಗ್ಯ ನಗರ’ವನ್ನು ನಿರ್ಮಿಸುವ ಗುರಿ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಹಾವೇರಿಯಲ್ಲಿ 450 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ವೈದ್ಯಕೀಯ ಮಹಾವಿದ್ಯಾಲಯ ಕಟ್ಟಡದ ಕಾಮಗಾರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವೀಡಿಯೋ ಮೂಲಕ ಚಾಲನೆ ನೀಡಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, “ರಾಜ್ಯದಲ್ಲಿ ಇದೇ ವರ್ಷ 4 ಮೆಡಿಕಲ್ ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ. ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಯಾದಗಿರಿ, ಹಾವೇರಿ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜುಗಳ ನಿರ್ಮಾಣ ಪ್ರಕ್ರಿಯೆ ಶುರುವಾಗಿದೆ. ಹಾವೇರಿಯಲ್ಲಿ ಹೊಸ ಕಾಲೇಜು ಆವರಣದಲ್ಲಿ ಎಲ್ಲ ಬಗೆಯ ಕೋರ್ಸ್ ಗಳನ್ನು ಆರಂಭಿಸಲಾಗುತ್ತಿದ್ದು, ಹೆಚ್ಚು ಸಂಖ್ಯೆಯ ವೈದ್ಯರು ಆರೋಗ್ಯ ಕ್ಷೇತ್ರಕ್ಕೆ ಸಿಗಲಿದ್ದಾರೆ. ಇದರಿಂದ ಹಾವೇರಿಯಲ್ಲಿ ಆರೋಗ್ಯ ನಗರ ನಿರ್ಮಾಣವಾಗಲಿದೆ” ಎಂದರು. “ಕಳೆದ 6 ವರ್ಷಗಳ ಪ್ರಧಾನಿ ನರೇಂದ್ರ…