‘ನಿನ್ನ ಪ್ರೀತಿ ಬೇಕಿದೆ’ ಯುವಜನರಲ್ಲಿ ಸಂಚಲನ ಮೂಡಿಸಿದ ಆಲ್ಬಂ ಸಾಂಗ್

ಪ್ರಸ್ತುತ ಸ್ಯಾಂಡಲ್‌ವುಡ್, ಬಾಲಿವುಡ್‌ಗಳಲ್ಲಿ ಡ್ರಗ್ ಮಾಫಿಯಾದ ಕರ್ಕಶ ಧ್ವನಿ ಮಾರ್ಧನಿಸುತ್ತಿದೆ. ಇದೇ ಹೊತ್ತಿಗೆ ವ್ಯಸನಮಕ್ತ ಸಮಾಜ ನಿರ್ಮಾಣದ ಅನಿವಾರ್ಯತೆ ಬಗ್ಗೆಯೂ ಸಾಲು ಸಾಲು ಸಲಹೆಗಳು ಕೇಳಿಬರುತ್ತಿವೆ. ಇದೇ ಸಂದರ್ಭದಲ್ಲಿ ಕರಾವಳಿಯ ಹುಡುಗರು ಡ್ರಗ್ ಹಾವಳಿ ಮತ್ತು ವ್ಯಸನ ಸಮಾಜಿಕ ಸ್ವಾಸ್ಥ್ಯಕ್ಕೆ ಯಾವ ರೀತಿ ಸವಾಲಾಗಿದೆ ಎಂಬುದನ್ನು ಹಾಡಿನ ಮೂಲಕ ಸಾರಿದ್ದಾರೆ. ‘ನಿನ್ನ ಪ್ರೀತಿ ಬೇಕಿದೆ’ ಎಂಬ ಆಲ್ಬಂ ಸಾಂಗ್ ಯೂಟ್ಯೂಬ್‌ನಲ್ಲಿ ಅಪ್ಲೋಡ್ ಆದ ಕೆಲವೇ ತಾಸುಗಳಲ್ಲಿ ಸಾವಿರಾರು ಮಂದಿಯ ಚಿತ್ತ ಸೆಳೆದಿದೆ. ಬಹಳಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿರುವುದು ವಿಶೇಷ. ‘ಟೀಮ್ ಶ್ಲಾಘನಾ’ ಹೆಸರಲ್ಲಿ ಅಶೋಕ್ ಆಂಚನ್, ಪ್ರಣೀತ್ ಸುವರ್ಣ ಮೊದಲಾದವರು ಈ ಹಾಡಿನ ಹಿಂದಿನ ಯುವ ಪ್ರತಿಭೆಗಳು. ‘ಕನಸು ಮಾರಾಟಕ್ಕಿದೆ’ ಚಿತ್ರದ ನಿರ್ದೇಶಕ ಸ್ಮಿತೇಶ್ ಎಸ್ ಬಾರ್ಯ ಅವರು ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ.    

ದಳಪತಿ ವಿಜಯ್ ಅಭಿನಯದ ‘ಮಾಸ್ಟರ್ ‘ ಟೀಸರ್

ದೀಪಾವಳಿ ಸಂದರ್ಭದಲ್ಲಿ ದಳಪತಿ ವಿಜಯ್ ಅಭಿಮಾನಿಗಳಿಗೆ ಇಹಿ ಸುದ್ದಿ ಸಿಕ್ಕಿದೆ. ವಿಜಯ್ ಅಭಿನಯದ ತಮಿಳು ಸಿನಿಮಾ ‘ಮಾಸ್ಟರ್ ‘ ಟೀಸರ್ ಬಿಡುಗಡೆಯಾಗಿದೆ. ಲೋಕೇಶ್ ಕನಗರಾಜ್ ನಿರ್ಮಾಣದ ಈ ಚಿತ್ರ ಭೂ ಭಾಷೆಗಳಲ್ಲಿ ಸಿದ್ಧವಾಗುತ್ತಿದೆ.    

“ಪಟಾಕಿ ಪೋರಿಯೋ..” ಕಿಚ್ಚನ ಸಿನಿಮಾದ ಹಾಡಿನ ಮೋದಿ ಹೀಗಿದೆ ನೋಡಿ

ನಿರೀಕ್ಷೆಯಂತೆ ದೀಪವಾಳಿ ಹಬ್ಬದ ಸಡಗರದ ನಡುವೆಯೇ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಕೋಟಿಗೊಬ್ಬ 3’ ಸಿನಿಮಾದ ವಿಶೇಷ ವೀಡಿಯೋ ರಿಲೀಸ್ ಆಗಿದೆ. “ಪಟಾಕಿ ಪೋರಿಯೋ” ಹಾಡು ದೀಪಾವಳಿ ಹಬ್ಬದ ವಿಶೇಷ ದಿನ ರಿಲೀಸ್ ಆಗಿದ್ದು ಇದು ಸಿನಿ ರಸಿಕರ ಚಿತ್ತ ಸೆಳೆಯುವಲ್ಲಿ ಯಶಸ್ಸಾಗಿದೆ.  

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ವಿಳಂಬ ವಿಚಾರ; ಸಿಎಂ ವಿರುದ್ಧ ಆಕ್ರೋಶ

ಬೆಂಗಳೂರು: ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ರಾಜ್ಯ ಸರ್ಕಾರ ಮುನ್ನುಡಿ ಬರೆಯುತ್ತಿದ್ದಂತೆಯೇ ಇತರ ಸಮುದಾಯಗಳೂ ಹಕ್ಕೊತ್ತಾಯ ಮಂಡಿಸಲು ಮುಂದಾಗಿವೆ. ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆಯೊಂದಿಗೆ ಪ್ರಬಲ ಸಮುದಾಯವಾಗಿರುವ ವೀರಶೈವ ಲಿಂಗಾಯತ ಏಳಿಗೆಗೆ ಶೀಘ್ರವೇ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಮುಖ್ಯಮಂತ್ರಿ ಮುಂದೆ ಆ ಸಮುದಾಯದ ಮುಖಂಡರು ಬೇಡಿಕೆ ಇಟ್ಟಿದ್ದಾರೆ. ವೀರಶೈವ ಲಿಂಗಾಯತ ಸಮುದಾಯ ಚುನಾವಣೆ ಬಂದಾಗ ಮಾತ್ರ ಆಶ್ವಾಸನೆ ಕೊಡುವುದಕ್ಕೆ ನೆನಪಾಗುತ್ತದಾ? ಅತಿ ಹೆಚ್ಚು ಜನಸಂಖ್ಯೆ ಮತ್ತು ಮತದಾರರಿರುವ ಸಮುದಾಯ ಸರ್ಕಾರದ ಮುಂದೆ ಭಿಕ್ಷೆ ಕೇಳಬೇಕಾ ಎಂದುವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ ಕಂಕಣವಾಡಿ ಹೇಳಿದ್ದಾರೆ. ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ಕಳೆದ ಹಲವು ವರ್ಷಗಳಿಂದ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಮುದಾಯದ ಹಲವು ಸಂಘಟನೆಗಳು, ಮಠಾಧಿಪತಿಗಳು ಸರ್ಕಾರದ ಮೇಲೆ ಸತತ ಒತ್ತಡ ಹಾಕುತ್ತಿದ್ದರೂ ತಾವು ಕಡೆಗಣಿಸುತ್ತಿರುವುದು ಸರಿಯಲ್ಲ. ಇದು ಸಮುದಾಯಕ್ಕೆ ಮಾಡುತ್ತಿರುವ ದೊಡ್ಡ…

ದಕ್ಷಿಣ ಭಾರತದಲ್ಲಿ ಪಾರುಪತ್ಯಕ್ಕೆ ಬಿಜೆಪಿ ರಣನೀತಿ ; ಸುಧಾಕರ್’ಗೆ ಹೊಣೆ

ಬೆಂಗಳೂರು: ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರಿಗೆ ಬಿಜೆಪಿ ಹೈಕಮಾಂಡ್ ಮಹತ್ವದ ಜವಾಬ್ಧಾರಿ ವಹಿಸಿದೆ. ದಕ್ಷಿಣ ಭಾರತದಲ್ಲಿ ಪಾರುಪಥ್ಯ ಸ್ಥಾಪಿಸಲು ರಣತಂತ್ರ ರೂಪಿಸುತ್ತಿರುವ ಕೇಸರಿ ಪಡೆ ಈ ಬಾರಿ ತೆಲುಗಿನ ರಾಜ್ಯಗಳತ್ತ ಗಮನ ಕೇಂದ್ರೀ ಕರಿಸಿದೆ. ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ಸದ್ಯದಲ್ಲೇ ನಡೆಯಲಿದ್ದು ಅದರಲ್ಲಿ ಜಯಭೇರಿ ಭಾರಿಸಿ ಆ ಭಾಗದಲ್ಲಿ ಅಧಿಪತ್ಯ ಸ್ಥಾಪಿಸಲು ಕಾರ್ಯತಂತ್ರ ರೂಪಿಸಿದೆ. ಇದಕ್ಕಾಗಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರ ಉಸ್ತುವಾರಿಯ ಅಗತ್ಯದ ಬಗ್ಗೆ ಪಕ್ಷದ ವರಿಷ್ಠರು ಗಮನ ಕೇಂದ್ರೀಕರಿಸಿದ್ದಾರೆ. ಈ ಬಗ್ಗೆ ಪ್ರಕಟಣೆಯೊಂದನ್ನು ಹೊರಡಿಸಿರುವ ಬಿಜೆಪಿ ಹೈಕಮಾಂಡ್, ಸಚಿವ ಸುಧಾಕರ್ ಅವರಿಗೆ ಈ ಮಹತ್ವದ ಜವಾಬ್ದಾರಿ ನೀಡಿದೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆದೇಶ ಹೊರಡಿಸಿದ್ದಾರೆ. ಸಚಿವ ಸುಧಾಕರ್ ಜೊತೆಗೆ ಮಹಾರಾಷ್ಟ್ರ ಶಾಸಕ ಅಶೀಶ್, ಗುಜರಾತಿನ ಬಿಜೆಪಿ ಮುಖಂಡ ಪ್ರದೀಪ್ ಸಿಂಗ್ ವಾಘೇಲಾ…

ಕೊರೋನಾ ಹಾವಳಿ; ಇನ್ನೂ ದೂರವಾಗದ ಆತಂಕ

ಬೆಂಗಳೂರು : ರಾಜ್ಯದಲ್ಲಿ ವೈರಾಣು ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಭಾನುವಾರ ಕೂಡಾ ಒಂದೂವರೆ ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಕುರಿತಂತೆ ಆರೋಗ್ಯ ಸಚಿವ ಡಾ.ಸುಧಾಕರ್ ಅವರೇ ಟ್ವೀಟ್ ಮಾಡಿ ಮಾಹಿತಿ ಬಹಿರಂಗಪಡಿಸಿದ್ದಾರೆ. ಭಾನುವಾರ 1,565 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 2,363 ಜನ ಗುಣಮುಖ ಹೊಂದಿದ್ದಾರೆ. ರಾಜ್ಯದಲ್ಲಿ ಈವರೆಗೂ ಒಟ್ಟು 8,22,953 ಜನ ಗುಣಮುಖ ಹೊಂದಿದ್ದು ಪಾಸಿಟಿವಿಟಿ ದರ ಶೇ.1.57% ಮತ್ತು ಮರಣ ಪ್ರಮಾಣ ಶೇ.1.34%ರಷ್ಟಿದೆ. ಭಾನುವಾರ 99,606 ಟೆಸ್ಟ್ ನಡೆಸಲಾಗಿದ್ದು, ಅವುಗಳಲ್ಲಿ 82,531(82.85%) ಆರ್ ಟಿ-ಪಿಸಿಆರ್ ಟೆಸ್ಟ್ ಆಗಿವೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ. ರಾಜ್ಯದಲ್ಲಿ ಇಂದು 1,565 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 2,363 ಜನ ಗುಣಮುಖ ಹೊಂದಿದ್ದಾರೆ. ರಾಜ್ಯದಲ್ಲಿ ಈವರೆಗೂ ಒಟ್ಟು 8,22,953 ಜನ ಗುಣಮುಖ ಹೊಂದಿದ್ದು ಪಾಸಿಟಿವಿಟಿ ದರ ಶೇ.1.57% ಮತ್ತು ಮರಣ ಪ್ರಮಾಣ ಶೇ.1.34%ರಷ್ಟಿದೆ.…

ಖ್ಯಾತ ಬಂಗಾಳಿ ನಟ ಸೌಮಿತ್ರಾ ಚಟರ್ಜಿ ವಿಧಿವಶ

ಕೋಲ್ಕತಾ: ಖ್ಯಾತ ಬಂಗಾಳಿ ನಟ ಸೌಮಿತ್ರಾ ಚಟರ್ಜಿ ವಿಧಿವಶರಾಗಿದ್ದಾರೆ. 85 ವರ್ಷದ ಸೌಮಿತ್ರ ಚಟರ್ಜಿಯವರು ಅನಾರೋಗ್ಯ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸೌಮಿತ್ರ ಚಟರ್ಜಿ ಅವರಿಗೆ ಇತ್ತೀಚೆಗೆ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಕೊನೆಯುಸಿರೆಳೆದಿದ್ದಾರೆ.