ಬಂಟ್ವಾಳದಲ್ಲಿ ಶಾಸಕ ರಾಜೇಶ್ ನಾಯ್ಕ್‌ ಅವರೇ ಹೀರೋ.. ಮುಗಿಲೆತ್ತರ ರಾಚಿದ ಬೆಂಬಲಿಗರ ಸಂಭ್ರಮ

ಮಂಗಳೂರು: ಕರಾವಳಿಯಲ್ಲಿ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ಮತ್ತೊಮ್ಮೆ ಹೀರೋ ಆಗಿ ಹೊರಹೊಮ್ಮಿದ್ದಾರೆ. ಹೀಗೆಂದು ಘೋಷಣೆ ಮೊಳಗುತ್ತಿರುವುದು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ. ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಹುತೇಕ ಕಡೆ ಕಮಲ ಕಾರ್ಯಕರ್ತರೇ ಪಾರುಪತ್ಯ ಸಾಧಿಸಿದ್ದಾರೆ. ಬಂಟ್ವಾಳ ಕ್ಷೇತ್ರದಲ್ಲಿ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಸಮರದ ಅಖಾಡದಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಂಡಿದ್ದರು. ಮತದಾರರ ಮಹಾತಿರ್ಪು ಕೂಡಾ ಈ ಶಾಸಕರ ಬೆಂಬಲಿಗರ ಪರವಾಗಿಯೇ ಬಂದಿದ್ದು ಕರಾವಳಿಯಲ್ಲಿ ಕೇಸರಿ ಪಾಳಯದ ಗೆಲುವಿನ ಸಂಭ್ರಮ ಮುಗಿಲೆತ್ತರ ರಾಚಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿನ 39 ಪಂಚಾಯತ್‌ಗಳ ಪೈಕಿ 20 ಕಡೆ ಬಿಜೆಪಿ ಬೆಂಬಲಿಗರ ಗುಂಪು ನಿಚ್ಚಲ ಬಹುಮತ ಪಡೆದಿವೆ. ಕಾಂಗ್ರೆಸ್ ಬೆಂಬಲಿಗರ ಪಾರುಪತ್ಯ 12 ಪಂಚಾಯತ್‌ಗಳಿಗಷ್ಟೇ ಸೀಮಿತವಾಗಿದೆ. 4 ಪಂಚಾಯತ್‌ಗಳಲ್ಲಿ ಕೈ-ಕಮಲ ಬೆಂಬಲಿಗರ ನಡುವೆ ಸಮಬಲದ ಫಲಿತಾಂಶ ವ್ಯಕ್ತವಾಗಿದ್ದು, 3…

ನಾಳೆಯಿಂದ ಶಾಲೆ ಪುನರಾರಂಭ

  ಬೆಂಗಳೂರು: ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಮಾರ್ಗದರ್ಶನದಂತೆ ಶಿಕ್ಷಣ ಇಲಾಖೆ ರೂಪಿಸಿದ  ಎಸ್.ಒ.ಪಿ.ಯನ್ನು ಆಧರಿಸಿ ಶಾಲಾ ಕಾಲೇಜುಗಳು ಜ.1ರಿಂದ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲಾಕಾಲೇಜುಗಳ ಆರಂಭದ ಪೂರ್ವ ಸಿದ್ಧತೆಯನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ  ಸಚಿವ ಎಸ್. ಸುರೇಶ್ ಕುಮಾರ್ ಪರಿಶೀಲಿಸಿದರು. ಬುಧವಾರ ನಗರದ ವಿವಿಧ ಸರ್ಕಾರಿ ಹಾಗೂ ಖಾಸಗಿ ಪದವಿ ಪೂರ್ವ ಕಾಲೇಜು ಮತ್ತು ಸರ್ಕಾರಿ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಸಿದ್ಧತೆಗಳನ್ನು ಅವಲೋಕಿಸಿದರು. ಪ್ರತಿಯೊಂದು ಶಾಲೆಗಳಲ್ಲಿ ತರಗತಿ ಕೊಠಡಿಗಳಿಗೆ ಭೇಟಿ ನೀಡುವ ಮೊದಲು ಶಾಲೆಯಲ್ಲಿ ಹಾಜರಿದ್ದ ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕರನ್ನುದ್ದೇಶಿಸಿ ಮಾತನಾಡಿ, ತರಗತಿಗಳನ್ನು ಆರಂಭಿಸುವಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ವಿವರಿಸಿದರು. ಮೊದಲ ದಿನದ ಮೊದಲ ತರಗತಿ ಅವಧಿಯಲ್ಲಿ ಕೊರೋನಾ ಕುರಿತು ಮುನ್ನೆಚ್ಚರಿಕೆ ಕ್ರಮಗಳು, ಪಾಲಿಸಬೇಕಾದ ನಿಯಮಗಳು ಮತ್ತು ವಿಶೇಷವಾಗಿ ಎಸ್ಸೆಸ್ಸೆಲ್ಸಿ  ಮತ್ತು ದ್ವಿತೀಯ ಪಿಯು ತರಗತಿಗಳ ಮಹತ್ವ ಮತ್ತು ಈ ಪರೀಕ್ಷೆಗಳಲ್ಲಿ ಕಷ್ಟಪಟ್ಟು ಓದಿ…

ಪಂಚಾಯ್ತಿ ಫಲಿತಾಂಶ; ನಾಯಕರಿಂದ ಅಭಿನಂಧನೆ

ಬೆಂಗಳೂರು: ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಗೆಲುವು ಸಾಧಿಸಿರುವ ಜೆಡಿಎಸ್ ಅಭ್ಯರ್ಥಿಗಳಿಗೆ ಪಕ್ಷದ ನಾಯಕ ಬಾಗೇಗೌಡರು ಆಭಿನಂದನೆ ಸಲ್ಲಿಸಿದ್ದಾರೆ. ಪಂಚಾಯ್ತಿ ಚುನಾವಣೆಯಲ್ಲಿ ಗೆದ್ದ ನಾಯಕರ ಮೂಲಕ ಜನರಿಗೆ ನೀಡಿರುವ ಭರವಸೆ ಈಡೇರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮತದಾರರಿಗೂ ಜೆಡಿಎಸ್ ನಾಯಕ ಬಾಗೇಗೌಡರು ತಮ್ಮದೇ ಶೈಲಿಯಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ. ಫಲಿತಾಂಶ ಕುರಿತಂತೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಬಾಗೇಗೌಡರು, ಪಂಚಾಯ್ತಿಯಲ್ಲಿನ ಗೆಲುವೇ ಸಮಾಜ ಪರಿವರ್ತನಾ ಕಾರ್ಯಕ್ಕೆ ವೇದಿಕೆಯಾಗಿರುತ್ತದೆ. ಗ್ರಾಮದಲ್ಲೇ ರಾಮರಾಜ್ಯ ಕಟ್ಟುವ ಕೆಲಸ ಮಾಡಲು ನಿಮಗೆ ಅವಕಾಶ ಸಿಕ್ಕಿದ್ದು ಜನಹಿತ ಕೆಲಸದಲ್ಲಿ ಯಶಸ್ವಿಯಾಗಿ ಎಂದು ವಿಜೇತರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ, ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಜನಸೇವೆಯ ಅವಕಾಶ ದೂರವಾಗಿದೆ ಎಂದು ತಿಳಿಯಬಾರದು. ಅನೇಕ ರಾಷ್ಟ್ರ ನಾಯಕರೂ ಸೋತು ಗೆದದವರೇ ಆಗಿದ್ದಾರೆ ಎಂದು ಅವರು ವೀರೋಚಿತ ಸೋಲುಂಡವರಿಗೆ ಸಾಂತ್ವಾನ ಹೇಳಿದ್ದಾರೆ. ನೂತನ ವರ್ಷವನ್ನು ಸಂತಸದಿಂದಲೇ ಸ್ವಾಗತಿಸೋಣ ಎಂದು…

ಚಿಕ್ಕಬಳ್ಳಾಪುರದಲ್ಲಿ ಇತಿಹಾಸ; ಎಲ್ಲಾ ಗ್ರಾಮಗಳಲ್ಲಿ ಅರಳಿದ ಕಮಲ

ಚಿಕ್ಕಬಳ್ಳಾಪುರ: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಎಲ್ಲಾ 29 ಗ್ರಾಮ ಪಂಚಯಿತಿಗಳಲ್ಲೂ ಕಮಲ ಅರಳಿದೆ. ಈ ಪಂಚಾಯತ್ ಚುನಾವಣಾ ಫಲಿತಾಂಶ ಕುರಿತಂತೆ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿರುವ ಆರೋಗ್ಯ ಸಚಿವ ಡಾ.ಸುಧಾಕರ್, ಈ ಅಭೂತಪೂರ್ವ ಗೆಲುವು ಚಿಕ್ಕಬಳ್ಳಾಪುರದ ಜನತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಾಯಕತ್ವ ಮತ್ತು ಕೇಂದ್ರ, ರಾಜ್ಯ ಸರ್ಕಾರಗಳ ರೈತಪರ, ಅಭಿವೃದ್ಧಿ ಪರ ಕಾರ್ಯಗಳ ಮೇಲಿಟ್ಟಿರುವ ಅಚಲ ವಿಶ್ವಾಸವನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ ಎಂದು ಬಣ್ಣಿಸಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸಿ ಆಶೀರ್ವದಿಸಿದ ಜಿಲ್ಲೆಯ ಮಹಾ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಎಲ್ಲಾ 29 ಗ್ರಾಮ ಪಂಚಯಿತಿಗಳಲ್ಲೂ ಕಮಲ ಅರಳಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸಿ ಆಶೀರ್ವದಿಸಿದ ಜಿಲ್ಲೆಯ ಮಹಾ ಜನತೆಗೆ ನನ್ನ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ.…

ಬಸ್ಯಾ ಪತ್ನಿ ಈಗ ಗ್ರಾ.ಪಂ. ಸದಸ್ಯೆ; ಯಾರು ಈ ಶಿಗ್ಲಿ ಬಸ್ಯಾ ಗೊತ್ತಾ?

ರಾಜ್ಯದ ಹಲವು ಕಡೆ 200ಕ್ಕೂ ಹೆಚ್ಚು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ, ಅವುಗಳಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟು, ಅವುಗಳಿಗೆ ವಕೀಲರನ್ನಿಡದೇ ತಾನೇ ನಿಬಾಯಿಸಿ ಗೆಲ್ಲುತ್ತಿದ್ದ ಶಿಗ್ಲಿ ಬಸ್ಯಾ ಅಲಿಯಾಸ್ ಬಸವರಾಜ ಗಡ್ಡಿ ಇದೀಗ ಗ್ರಾಮ ಪಂಚಾಯತಿ ಮೆಂಬರ್’ನ ಪತಿ. ತನ್ನ ಬೇಡಿಕೆಗಾಗಿ ಕಂಡ ಕಂಡಲ್ಲಿ ಟವರ್ ಗಳನ್ನ ಏರುತ್ತಿದ್ದವನ ಮಡದಿ ಗುಲ್ಜಾರಭಾನು ಶಿಗ್ಲಿ, ಲಕ್ಷ್ಮೀಶ್ವರ ಪಟ್ಟಣದ ಸಮೀಪದ ಶಿಗ್ಲಿ ಗ್ರಾಮ ವಾರ್ಡ್ ನಂಬರ 1ರಿಂದ ಕಣಕ್ಕೆ ಇಳಿದಿದ್ದರು. ಇದೀಗ ಶಿಗ್ಲಿ ಬಸುನ ಮಡದಿ 2 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಬ್ಬಿನ ರೈತನ ಚಿತ್ರದಡಿ ಚುನಾವಣೆ ಎದುರಿಸಿದ್ದ ಗುಲ್ಜಾರಭಾನುಗೆ ಮೂವರು ಮಹಿಳೆಯರು ಸ್ಪರ್ಧೆಯೊಡ್ಡಿದ್ದರು. ತೀವ್ರ ಪೈಪೋಟಿ ಏರ್ಪಟ್ಟಿದ್ದ ಅಖಾಡದಲ್ಲಿ ಚುನಾವಣೆಯಲ್ಲಿ ಕೊನೆಗೂ ಶಿಗ್ಲಿ ಬಸ್ಯಾನ ಪತ್ನಿ ಗೆದ್ದು ಬೀಗಿದ್ದಾರೆ.

ಪಂಚಾಯತ್ ಫಲಿತಾಂಶವು ಬಿಜೆಪಿಗೆ ಜನತೆಯ ಶ್ರೀರಕ್ಷೆ; ಸಿ.ಟಿ.ರವಿ

ಬೆಂಗಳೂರು: ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶ ಕೇಂದ್ರದ ಮೋದಿ ಸರ್ಕಾರ ಹಾಗೂ ರಾಜ್ಯದಲ್ಲಿನ ಬಿಎಸ್’ವೈ ಆಡಳಿತಕ್ಕೆ ಜನರ ಶ್ರೀರಕ್ಷೆ ಇದೆ ಎಂಬುದನ್ನು ಸಾಬೀತು ಮಾಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬಣ್ಣಿಸಿದ್ದಾರೆ. ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿರುವ ಕೆಲವು ಪಕ್ಷಗಳು “ಕೃಷಿ ಮಸೂದೆ”ಗಳ ಕುರಿತು ನಡೆಸುತ್ತಿರುವ ಅಪಪ್ರಚಾರಗಳನ್ನು ಗಣನೆಗೆ ತೆಗೆದುಕೊಳ್ಳದೆ ರಾಜ್ಯದ ಮಹಾಜನತೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸಿದ್ದಾರೆ. ಇದು ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಉತ್ತಮ ಆಡಳಿತದ ಫಲಶ್ರುತಿ ಎಂದು ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ. ಈ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜನಪರ ಆಡಳಿತಕ್ಕೆ ಕರ್ನಾಟಕದ ಮಹಾಜನತೆ ನೀಡಿದ ಶ್ರೀರಕ್ಷೆಯಾಗಿದೆ ಎಂದು ಸಿ.ಟಿ.ರವಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿರುವ ಕೆಲವು ಪಕ್ಷಗಳು "ಕೃಷಿ ಮಸೂದೆ"ಗಳ ಕುರಿತು ನಡೆಸುತ್ತಿರುವ ಅಪಪ್ರಚಾರಗಳನ್ನು ಗಣನೆಗೆ…

ರಾಜ್ಯದಲ್ಲಿ ಶೀಘ್ರವೇ ಹೊಸ ಮರಳು ನೀತಿಯನ್ನು ಜಾರಿಗೆ

ಚಾಮರಾಜನಗರ: ರಾಜ್ಯದಲ್ಲಿ ಸದ್ಯದಲ್ಲಿಯೇ ಹೊಸ ಮರಳು ನೀತಿಯನ್ನು ಜಾರಿಗೆ ತರಲಾಗುವುದು ಎಂದು ಗಣಿ ಇಲಾಖೆ ಸಚಿವ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ. ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸಿ.ಸಿ.ಪಾಟೀಲ್, ಹೊಸ ನೀತಿ ಜನಸ್ನೇಹಿಯಾಗಿರಲಿದೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಮೂರು ಹಂತಗಳಲ್ಲಿ ಮರಳನ್ನು ಮಾರಾಟ ಮಾಡುವುದಕ್ಕೆ ಇದು ಅವಕಾಶ ಸಿಗಲಿದೆ ಎಂದು ಮಾಹಿತಿ ಹಂಚಿಕೊಂಡರು. ಈ ಮಾರಲ್ ನೀತಿ ಜಾರಿಯಾದರೆ ಒಂದು ಟನ್ ಮರಳು 300ರಿಂದ 350 ರೂಪಾಯಿಗೆ ಲಭ್ಯವಾಗಲಿದೆ ಎಂದು ಅವರಿ ವಿಸ್ವಾಸ ವ್ಯಕ್ತಪಡಿಸಿದರು.

ಹೊಸ ವರ್ಷದ ಹರುಷಕ್ಕೆ ಚಂದನ್ ಶೆಟ್ಟಿ ‘ಪಾರ್ಟಿ ಫ್ರೀಕ್’ ಕಿಕ್

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಚಂದನ್ ಶೆಟ್ಟಿಯ ‘ಪಾರ್ಟಿ ಫ್ರೀಕ್’ ವಿಡಿಯೋ ಸಾಂಗ್ ರಿಲೀಸ್ ಆಗಿದೆ. ಯುವ ಜನರನ್ನು ರಂಜಿಸುವ ಈ ವೀಡಿಯೊ ಸಾಂಗ್ ಎಲ್ಲರ ಗಮನಸೆಳೆದಿದೆ. ಯೂನೈಟೆಡ್ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ಪಾರ್ಟಿ ಫ್ರೀಕ್ ವಿಡಿಯೋ ಸಾಂಗ್ ಅನಾವರಣಗೊಂಡಿದ್ದು, ಇದರಲ್ಲಿ ಚಂದನ್ ಶೆಟ್ಟಿ ಅಭಿನಯ ಕೂಡಾ ಸಕತ್ತಾಗಿದೆ. ಸಾಕಷ್ಟು ಲೈಕ್’ನ್ನೂ ಗಿಟ್ಟಿಸಿಕೊಂಡಿದೆ.  

ಹುಷಾರ್.. ಈ ಪ್ರದೇಶಗಳಲ್ಲಿ ಶನಿವಾರದವರೆಗೆ ಸಂಚಾರ ನಿರ್ಬಂಧ

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಅನಾಹುತಗಳನ್ನು ತಪ್ಪಿಸಲು ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಡಿ. 31ರ ರಾತ್ರಿ 8 ರಿಂದ ಜ. 1ರ ಮುಂಜಾನೆ 2ರವರೆಗೆ ಬೆಂಗಳೂರಿನ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಮ್ಯೂಸಿಯಂ ರಸ್ತೆ, ರೆಸ್ಟ್ ಹೌಸ್ ಪಾರ್ಕ್ ರಸ್ತೆ, ರೆಸಿಡೆನ್ಸಿ ರಸ್ತೆಗಳಲ್ಲಿ ವಾಹನಗಳ ಸಂಚಾರ ಮತ್ತು ಪ್ರವೇಶ ನಿಷೇಧ ಮಾಡಲಾಗಿದೆ. ಡಿ. 31ರ ರಾತ್ರಿ 10 ರಿಂದ ಬೆಳಗ್ಗೆ 6ರವರೆಗೆ ಬೆಂಗಳೂರಿನ ಪ್ರಮುಖ ಮೇಲ್ಸೇತುವೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಮೈಕೋ ಲೇಔಟ್, ಏರ್ಪೋರ್ಟ್, ವೈಟ್​​ ಫೀಲ್ಡ್​​, ಹೆಚ್ಎಸ್ಆರ್ ಲೇಔಟ್, ಹಲಸೂರು, ಕೆ.ಆರ್.ಪುರ, ಪುಲಿಕೇಶಿನಗರ, ಬಾಣಸವಾಡಿ, ಆಡುಗೋಡಿ, ಮೈಸೂರು ರಸ್ತೆ, ಬಸವನಗುಡಿ, ಜಯನಗರ, ಮಲ್ಲೇಶ್ವರಂ, ಬನಶಂಕರಿ, ಕೆಂಗೇರಿ, ಯಶವಂತಪುರ, ಹೆಬ್ಬಾಳ, ಹಾಗೂ ಪೀಣ್ಯ ಪ್ರದೇಶಗಳಲ್ಲಿರುವ ಮೇಲ್ಸೇತುವೆಗಳಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.ಬೆಂಗಳೂರಿನ ಒಟ್ಟು 44 ಮೇಲ್ಸೇತುವೆಗಳನ್ನು ಬಂದ್ ಮಾಡಲು…

ಸಾಹಸಸಿಂಹ ಡಾ.ವಿಷ್ಣುವರ್ಧನ್ ಪುಣ್ಯತಿಥಿ; ಶ್ರೇಷ್ಠ ಕಲಾವಿದನ ಸ್ಮರಣೆ

ಬೆಂಗಳೂರು: ಕನ್ನಡ ಚಲನಚಿತ್ರ ರಂಗದ ಧೃವತಾರೆಯಾಗಿ ಮಿಂಚಿದ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಪುಣ್ಯತಿಥಿಯನ್ನು ಇಂದು ಅಭಿಮಾನಿಗಳು ಶ್ರದ್ದೆ, ಗೌರವಗಳಿಂದ ಆಚರಿಸುತ್ತಿದ್ದಾರೆ. ಈ ಮೂಲಕ ಈ ಮೇರುನಟನನ್ನು ಗೌರವಪೂರ್ವಕವಾಗಿ ಸ್ಮರಿಸುತ್ತಿದ್ದಾರೆ. ಬಹುಭಾಷಾ ತಾರೆಯಾಗಿ ಕಲಾ ರಸಿಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಡಾ. ವಿಷ್ಣುವರ್ಧನ್ ಅವರ ಕಲಾ ಪ್ರೌಢಿಮೆ, ನಟನಾ ಶ್ರೀಮಂತಿಕೆ ಹಾಗೂ ಸರ್ವಶ್ರೇಷ್ಠ ವ್ಯಕ್ತಿತ್ವದ ಪ್ರಭಾವ ಸದಾ ಜೀವಂತವಾಗಿದೆ. ಈ ಶ್ರೇಷ್ಠ ಕಲಾವಿದನನ್ನು ಸ್ಮರಿಸಿರುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಸಾಮಾಜಿಕ ಸಂದೇಶಗಳನ್ನು ಸಾರುವ ಚಲನಚಿತ್ರಗಳಲ್ಲಿ ನಟಿಸುವ ಮೂಲಕ ರಾಜ್ಯದ ಜನಮನಗೆದ್ದ ಡಾ. ವಿಷ್ಣುವರ್ಧನ್ ಅವರು ಇಂದಿಗೂ ನಮ್ಮ ಮನೆ, ಮನದಲ್ಲಿ ಹಚ್ಚಹಸಿರಾಗಿ ಉಳಿದಿದ್ದಾರೆ ಎಂದು ಬಣ್ಣಿಸಿದ್ದಾರೆ. ಡಾ. ವಿಷ್ಣುವರ್ಧನ್ ಅವರ 11 ನೇ ಪುಣ್ಯಸ್ಮರಣೆ ಯ ಈ‌ ದಿನ‌ ಅವರ ಪಾದಪದ್ಮಗಳಿಗೆ ಪ್ರಣಾಮಗಳು ಎಂದು ಅವರು ಹೇಳಿದ್ದಾರೆ.