ಕೆಎಸ್ಸಾರ್ಟಿಸಿ ಅವಾಂತರ; ರಸ್ತೆಯಲ್ಲೇ ಪಾಠ ಹೇಳಿ ಚಾಲಕರ ಚಳಿ ಬಿಡಿಸಿದ ಶಿಕ್ಷಣ ಸಚಿವ

ತುಮಕೂರು: ಸಾರಿಗೆ ಬಸ್’ಗಳ ಅವಾಂತರಕ್ಕೆ ಬ್ರೇಕ್ ಬೀಳುತ್ತಿಲ್ಲ. ಸರ್ಕಾರಿ ಅಧೀನದ ಸಂಸ್ಥೆ ಎಂಬ ಮನಸ್ಥಿತಿಯಲ್ಲಿ ಕೆಲ ಸಿಬ್ಬಂದಿ ತಮ್ಮ ಸೇವೆಯ ಮಹತ್ವವನ್ನೇ ಮರೆತು ತಮಗೆ ಬೇಕಾದಂತೆ ವರ್ತಿಸುವ ಆರೋಪಗಳು ಕೇಳಿರುತ್ತಿವೆ. ಇಂತಹಾ ಘಟನೆಯನ್ನು ಕಣ್ಣಾರೆ ಕಂಡ ಶಿಕ್ಷಣ ಸಚಿವ ಸುರೇಶ ಕುಮಾರ್ ಅವರು ಕೆಎಸ್ಸಾರ್ಟಿಸಿ ಬಸ್ ಚಾಲಕನ ಚಳಿ ಬಿಡಿಸಿದ ಪ್ರಸಂಗ ಕಲ್ಪತರು ನಾಡು ತುಮಕೂರು ಬಳಿ ನಡೆದಿದೆ.   ಶಾಲಾ ವಿದ್ಯಾರ್ಥಿಗಳು ಬಸ್ ನಿಲ್ಲಿಸಲೆಂದು ಕೋರಿದಾಗ ಕೆಎಸ್ಸಾರ್ಟಿಸಿ ಚಾಲಕರ ಬಸ್ ನಿಲ್ಲಿಸುತ್ತಿರಲಿಲ್ಲ. ಇದೇ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಬೆಂಗಳೂರಿನಿಂದ ಮಧುಗಿರಿ ಕಡೆ ತೆರಳುತ್ತಿದ್ದ ಶಿಕ್ಷಣ ಸಚಿವರು ಶಾಲಾ ಮಕ್ಕಳ ಪರಿಸ್ಥಿತಿಯನ್ನು ಕಣ್ಣಾರೆ ಕಂಡರು. ಸಾರಿಗೆ ಬಸ್ ಚಾಲಕರ ವರ್ತನೆ ಬಗ್ಗೆ ಸಿಡಿಮಿಡಿಗೊಂಡ ಸಚಿವರು, ಬಸ್ ತಡೆದು ಚಾಲಕನನ್ನು ತರಾಟೆಗೆ ತೆಗೆದುಕೊಂಡರು. ಈ ರೀತಿಯ ವರ್ತನೆ ಪುನರಾವರ್ತನೆಯಾಗಬಾರದು ಎಂದು ಎಚ್ಚರಿಕೆ ನೀಡಿದ ಸಚಿವರು, ವಿದ್ಯಾರ್ಥಿಗಳ ಪ್ರಯಾಣಕ್ಕೆ ಅನುಕೂಲವಾಗುವಂತೆ…

ಬಿಡುಗಡೆಗೂ ಮುನ್ನವೇ ಇತಿಹಾಸ ನಿರ್ಮಿಸಿದ ‘ಕೆಜಿಎಫ್-2’

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ 2’ ಚಿತ್ರ ಬಿಡುಗಡೆಗೆ ಮುನ್ನವೇ ದಾಖಲೆ ಬರೆದಿದೆ. ನಟ ಯಶ್ ಜನ್ಮದಿನಕ್ಕೂ ಮೊದಲೇ ಲೀಕ್ ಆಗಿ ಕನ್ನಡ ಸಿನಿಮಾ ಲೋಕದಲ್ಲಿ ಸಂಚಲನ ಮೂಡಿಸಿದ್ದ ‘ಕೆಜಿಎಫ್ 2’ ಚಿತ್ರದ ಟೀಸರ್ ಗುರುವಾರ ಯೂಟ್ಯೂಬ್‌ನಲ್ಲಿ ಅನಾವರಣಗೊಂಡಿತ್ತು.ಇದು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ದಾಖಲೆ ನಿರ್ಮಿಸಿದೆ. ಕಡಿಮೆ ಅವಧಿಯಲ್ಲಿ ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದ ವಿಶ್ವದ ಮೊದಲ ಟೀಸರ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ‘ಕೆಜಿಎಫ್ 2’ ಟೀಸರ್ ಬಿಡುಗಡೆಯಾದ 10 ತಾಸುಗಳಲ್ಲೇ 20 ಲಕ್ಷಕ್ಕೂ ಹೆಚ್ಚು ಲಕ್ಷ ಲೈಕ್ಸ್ ಪಡೆದುಕೊಂಡಿದೆ. ಅಷ್ಟೇ ಅಲ್ಲ ಬಿಡುಗಡೆಯಾದ ಒಂದೇ ದಿನದಲ್ಲಿ ಇದು 8 ಕೋಟಿಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ವಿಜಯ್ ನಟನೆಯ ‘ಮಾಸ್ಟರ್’ ಸಿನಿಮಾದ ಟೀಸರ್ 16 ಗಂಟೆಗಳಲ್ಲಿ 16 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿತ್ತು. ಆ ದಾಖಲೆಯನ್ನು ಮುರಿದ…

ಸರಕಾರಿ ಕಾಲೇಜುಗಳ 1.6 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್‌

ರಾಮನಗರ: ರಾಜ್ಯದ ಸರಕಾರಿ ಪದವಿ, ಎಂಜನಿಯರಿಂಗ್‌ ಮತ್ತು ಪಾಲಿಟೆಕ್ನಿಕ್‌ ಕಾಲೇಜುಗಳುಗಳಲ್ಲಿ ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ 1.6 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್‌ ಪಿಸಿಗಳನ್ನು ನೀಡುವ ಮಹತ್ವದ ನಿರ್ಧಾರವನ್ನು ಸರಕಾರ ಕೈಗೊಂಡಿದೆ. ಡಿಜಿಟಲ್‌ ಯುಗದಲ್ಲಿ ಮಕ್ಕಳ ಸಮಗ್ರ ಕಲಿಕೆ ಹಾಗೂ ಖಾಸಗಿ-ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ನಡುವೆ ಡಿಜಿಟಲ್‌ ಅಂತರವನ್ನು ಅಳಸಿ ಹಾಕಲು ಉಚಿತ ಟ್ಯಾಬ್‌ಗಳನ್ನು ವಿತರಿಸಲಾಗುತ್ತಿದೆ. ಸಚಿವ ಸಂಪುಟದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಥಮ ವರ್ಷದ ವಿದ್ಯಾರ್ಥಿಗಳು, 14 ಸರಕಾರಿ ಎಂಜನಿಯರಿಂಗ್‌ ಕಾಲೇಜುಗಳಲ್ಲಿನ ಪ್ರಥಮ, ದ್ವಿತೀಯ, ತೃತೀಯ ವರ್ಷದ ವಿದ್ಯಾರ್ಥಿಗಳು ಹಾಗೂ 87 ಸರಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಓದುತ್ತಿರುವ ಪ್ರಥಮ, ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಈ ಟ್ಯಾಬ್ಲೆಟ್‌ ಪಿಸಿಗಳನ್ನು ನೀಡಲಾಗುತ್ತಿದೆ. ಇದಕ್ಕಾಗಿ ಸರಕಾರ 155.4 ಕೋಟಿ ರೂ. ವೆಚ್ಚ ಮಾಡುತ್ತಿದೆ ಎಂದು ಡಿಸಿಎಂ…

ಸಂಕ್ರಾಂತಿ ನಂತರ ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಫ್‌ಲೈನ್‌ ತರಗತಿ

ಬೆಂಗಳೂರು: ಈಗಾಗಲೇ ಪದವಿ, ಸ್ನಾತಕೋತ್ತರ, ಡಿಪ್ಲೊಮೋ ಮತ್ತು ಎಂಜಿನಿಯರಿಂಗ್‌ ತರಗತಿಗಳ ಅಂತಿಮ ವರ್ಷದ/ಸೆಮಿಸ್ಟರ್ ನ ಆಫ್‌ಲೈನ್‌ ತರಗತಿಗಳು ಯಶಸ್ವಿಯಾಗಿ ನಡೆಯುತ್ತಿರುವ ಬೆನ್ನಲ್ಲೇ ಇದೇ ತರಗತಿಗಳ ಪ್ರಥಮ- ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಆಫ್‌ಲೈನ್‌ ತರಗತಿಗಳನ್ನು ಸಂಕ್ರಾಂತಿ ಹಬ್ಬದ ನಂತರ ಆರಂಭವಾಗಲಿದೆ. ಈ ಸಂಬಂಧ ವರದಿ ನೀಡುವಂತೆ ಕುಲಪತಿಗಳಿಗೆ ಸೂಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಈ ಸಂಬಂಧ ಶುಕ್ರವಾರ ಸರಕಾರಿ- ಖಾಸಗಿ ವಲಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳು, ಉನ್ನತ ಶಿಕ್ಷಣ ಸೇರಿ ಸಂಬಂಧಿತ ಎಲ್ಲ ಇಲಾಖೆಗಳ ಅಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದ ಉಪ ಮುಖ್ಯಮಂತ್ರಿ ಈ ಬಗ್ಗೆ ನಿರ್ಧಾರ ಪ್ರಕಟಿಸಿದ್ದಾರೆ. ಬಹುತೇಕ ಕುಲಪತಿಗಳು ನೇರ ತರಗತಿಗಳನ್ನು ಆರಂಭಿಸುವಂತೆ ಸರಕಾರಕ್ಕೆ ಸಲಹೆ ನೀಡಿದರು. ಹೀಗಾಗಿ ಅದಕ್ಕೆ ಸಂಬಂಧಿಸಿದ ವರದಿಯನ್ನು ಕೂಡಲೇ ಕಳಿಸುವಂತೆ ಕೋರಲಾಗಿದೆ. ನಂತರ ಮೊದಲ ಮತ್ತು ದ್ವಿತೀಯ ವರ್ಷದ…

‘ಕಲಿಯುತ್ತಾ ನಲಿಯೋಣ’ ಶಾಲೆಗೇ ಹೋಗಲಾಗದ ಮಕ್ಕಳಿಗೆ ಆಕಾಶವಾಣಿ‌ಯಲ್ಲಿ ವಿನೂತನ ಕಾರ್ಯಕ್ರಮ

ಬೆಂಗಳೂರು: ಶಿಕ್ಷಣ ಇಲಾಖೆಯು ಆಕಾಶವಾಣಿ ಮೂಲಕ ಜನವರಿ 11 ರಿಂದ ‘ಕಲಿಯುತ್ತಾ ನಲಿಯೋಣ’ ಎಂಬ ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದೆ. ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ಶಾಲೆಗೆ ಹೋಗಲಾರದ ಮಕ್ಕಳಿಗಾಗಿ ಇರುವ ನಲಿಕಲಿ ಮತ್ತು ‘ಕಲಿನಲಿ ಕಾರ್ಯಕ್ರಮಗಳನ್ನು ಜನವರಿ 11ರಿಂದ ಏಪ್ರಿಲ್ 5 ರ ವರೆಗೆ ಆಕಾಶವಾಣಿ ಪ್ರಸಾರ ಮಾಡಲಿದೆ. ಪ್ರತಿ ವಾರ ಸೋಮವಾರದಿಂದ ಶುಕ್ರವಾರದವರೆಗೂ ಪ್ರತಿನಿತ್ಯ ಬೆಳಿಗ್ಗೆ 10 ಗಂಟೆಯಿಂದ 10.15ರವರೆಗೆ ಒಂದು ಮತ್ತು ಎರಡನೇ ತರಗತಿಗಳಿಗಾಗಿ ಹಾಗೂ 10:15 ರಿಂದ 10.30 ಗಂಟೆಯವರೆಗೂ 3 ಮತ್ತು 4ನೇ ತರಗತಿಗಳಿಗಾಗಿ ಹಾಡು,  ಕಥೆ, ನಾಟಕ, ಸಂಭಾಷಣೆ, ಒಗಟು, ಮತ್ತು ವಿವಿಧ ಆಸಕ್ತಿಕರ ಕಾರ್ಯಕ್ರಮಗಳ ಮೂಲಕ ಆಯಾ ತರಗತಿಗಳ ಮಕ್ಕಳ ಕಲಿಕೆ ಮುಂದುವರಿಯುವಂತೆ ಮಾಡಲು ಶಿಕ್ಷಣ‌ ಇಲಾಖೆ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಶಿಕ್ಷಣ ಸಚಿವ ಸುರೇಶ ಕುಮಾರ್ ವಿವರಿಸಿದ್ದಾರೆ. ಈ ಕಾರ್ಯಕ್ರಮಗಳ ಮೂಲಕ ನಲಿ-ಕಲಿಯ ಆಶಯಗಳಾದ ಆಲಿಸುವಿಕೆ,…

ಈ ಬಾರಿ ಭೌತಿಕ ಹಾಗೂ ಆನ್ಲೈನ್ ಮೂಲಕ ರಾಷ್ಟ್ರೀಯ ತೋಟಗಾರಿಕೆ ಮೇಳ

ಬೆಂಗಳೂರು: ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಫೆಬ್ರವರಿ 8 ರಿಂದ 12 ರವರೆಗೆ ನಡೆಸುತ್ತಿರುವ ರಾಷ್ಟ್ರೀಯ ತೋಟಗಾರಿಕೆ ಮೇಳವು ಈ ಬಾರಿ ಭೌತಿಕ ಹಾಗೂ ಆನ್ಲೈನ್ ಮೂಲಕ ನಡೆಯಲಿದೆ. ಈ ಬಾರಿ ಈ ಮೇಳದಲ್ಲಿ ಭಾಗವಹಿಸಲು ರೈತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು ಸುಮಾರು 30000ಕ ರೈತರು ಮಾತ್ರ ಭೌತಿಕವಾಗಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ರೈತರು ಆನ್ಲೈನ್ನಲ್ಲಿ ಮೇಳದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಳ್ಳಬಹುದು ಎಂದು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಎಂ ಆರ್ ದಿನೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಮೇಳದಲ್ಲಿ 211 ಕ್ಕೂ ಹೆಚ್ಚು ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಗುತ್ತದೆ. ರಾಷ್ಟ್ರೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು 23 ರಾಜ್ಯಗಳ ರೈತರಿಗೆ ಸೀಡ್ ಪೋರ್ಟಲ್ ಗಳ ಮೂಲಕ ಬೀಜಗಳನ್ನು ರೈತರು ಮನೆ ಬಾಗಿಲಿಗೆ ವಿತರಿಸಲಾಗಿದೆ ಎಂದು ಬಾ. ದಿನೇಶ್ ತಿಳಿಸಿದರು. ರಾಷ್ಟ್ರೀಯ ತೋಟಗಾರಿಕೆ ಮೇಳದ…

ಎಲೆಕ್ಟ್ರಿಕ್ ಆಟೋ ಪರಿಚಯಿಸಿದ ಒಮೆಗಾ ಸೀಕಿ ಮೊಬಿಲಿಟಿ.

ಬೆಂಗಳೂರು: ಆಂಗ್ಲಿಯನ್ ಒಮೆಗಾ ಗ್ರೂಪ್‌ ಹಾಗೂ ಸೀಕಿ ಮೊಬಿಲಿಟಿ (ಒಎಸ್‌ಎಂ) ಸಹಭಾಗಿತ್ವದಲ್ಲಿ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಗ್ರೀನ್‌ಡ್ರೈವ್ ಆಟೋ ಸರ್ವಿಸ್‌ (ಎಲೆಕ್ಟ್ರಿಕ್‌ ಆಟೋ ಸರ್ವಿಸ್‌)ನ ಶಾಖೆಯನ್ನು ನಗರದ ಸಿಂಗಸಂದ್ರದಲ್ಲಿ ತೆರೆಯಲಾಗಿದೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಎಲೆಕ್ಟ್ರಿಕ್ ದ್ವಿಚಕ್ರ ಹಾಗೂ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಹಾದಿಯಲ್ಲಿ ಇದೀಗ ಆಂಗ್ಲಿಯನ್‌ ಒಮೆಗಾ ಗ್ರೂಪ್ ಹಾಗೂ ಸೀಕೊ ಮೊಬಿಲಿಟಿ ಜೊತೆಗೂಡಿ ಗ್ರೀನ್‌ಡ್ರೈವ್ ಆಟೋ ಸರ್ವಿಸ್ ತೆರೆದಿದೆ. ದಕ್ಷಿಣ ಭಾಗದಲ್ಲಿ ಒಮೆಗಾ ಸೀಕಿ ಮೊಬಿಲಿಟಿ ಅವರ ಕಮರ್ಷಿಯಲ್ ಇವಿ ರೇಜ್+ ವಾಹನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಪ್ರತಿಕ್ರಿಯೆಯು ರಾಷ್ಟ್ರದಲ್ಲಿ ಸ್ಮಾರ್ಟ್ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯನ್ನು ಹೆಚ್ಚಿಸಿದೆ. ಇತ್ತೀಚೆಗೆ, ಅವರು ಸನ್-ರಿ (ತ್ರಿಚಕ್ರ ವಾಹನ), ರೈಡ್ (ಇ-ರಿಕ್ಷಾ) ಮತ್ತು ಸ್ಟ್ರೀಮ್ (ಇ-ಆಟೋ ರಿಕ್ಷಾ) ಎಂಬ ಹೊಸ ವಾಹನ ಶ್ರೇಣಿಯನ್ನು…

ಕುಂದಾನಗರಿಯಲ್ಲಿ ಕಸ ಎತ್ತುವ ನೂತನ ಆಟೋಗಳಿಗೆ ಹಸಿರು ನಿಶಾನೆ

ಬೆಳಗಾವಿ: ಕುಂದಾ ನಗರಿಯಲ್ಲಿ ನಗರದಲ್ಲಿ ಕಸ ಎತ್ತುವ ನೂತನ ಆಟೋ ಗಳಿಗೆ ನಗರಾಭಿವೃದ್ಧಿ ಸಚಿವಬಿ.ಎ.ಬಸವರಾಜ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಸೇವೆಗೆ ಮುಕ್ತಗೊಳಿಸಿದರು. ಬೆಳಗಾವಿಯಲ್ಲಿ ಶುಕ್ರವಾರ ಬೆಳಿಗ್ಗೆ ಬೆಳಗಾವಿ ನಗರದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಅರ್.ಅಂಬೇಡ್ಕರ್ ಅವರ ಪುತ್ಥಳಿ ಗೆ ಮಾಲಾರ್ಪಣೆ ಮಾಡಿದರು. ಬಳಿಕ ಈ ವಾಹನಗಳನ್ನು ಸೇವೆಗೆ ಮುಕ್ತಗೊಳಿಸಿದರು. ಇದೇ ಸಂದರ್ಭದಲ್ಲಿ ಅವರು, ಬೆಳಗಾವಿ ಮಹಾನಗರ ಪಾಲಿಕೆ, ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ನಗರದಲ್ಲಿ ನಡೆದಿರುವ ಕಾಮಗಾರಿಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಕಾಮಗಾರಿಗಳನ್ನು ಚುರುಕುಗೊಳಿಸುವಂತೆ ನಿರ್ದೇಶನ ನೀಡಿದರು. ಶಾಸಕರಾದ ಅಭಯ ಪಾಟೀಲ, ಅನಿಲ್ ಬೆನಕೆ, ಕರ್ನಾಟಕ ನಗರ ಮೂಲಭೂತ ಸೌಕರ್ಯ ಹಾಗೂ ಹಣಕಾಸು ಅಭಿವೃದ್ಧಿ ನಿಗಮದ ಅಧ್ಯಕ್ಷ ಶಂಕರ್ ಪಾಟೀಲ ಮುನೇನಕೊಪ್ಪ, ಬೆಳಗಾವಿ ಜಿಲ್ಲಾಧಿಕಾರಿ…