ಭಾಲ್ಕಿಯಲ್ಲಿ ಬಾಲಯೇಸು ಮಹೋತ್ಸವ; ಕಣ್ಮನ ಸೆಳೆದ ದೃಶ್ಯ ವೈಭಾವ

ಬೀದರ್: ಗುಲ್ಬರ್ಗಾ ಧರ್ಮಪ್ರಾಂತ್ಯದ ಪುಣ್ಯಕ್ಷೇತ್ರ ಭಾಲ್ಕಿ ನಗರದ ಬಾಲ ಯೇಸು ದೇವಾಲಯದಲ್ಲಿ ವಾರ್ಷಿಕ ಮಹೋತ್ಸವವು ಅದ್ದೂರಿಯಾಗಿ ನೆರವೇರಿತು. ನಾಡಿನಾದ್ಯಂತ ಬಾಲ ಎಸು ದೇವಾಲಯಗಳಲ್ಲಿ ವಾರ್ಷಿಕ ಉತ್ಸವ ಜರುಗಿದ್ದು ಬಾಲ್ಕಿಯಲ್ಲಿನ ಈ ಮಹೋತ್ಸವವು ವಿಶೇಷತೆಗಳಿಂದಾಗಿ ಗಮನಸೆಳೆಯಿತು. ಈ ಉತ್ಸವ ಧಾರ್ಮಿಕ ಕೈಂಕರ್ಯಕ್ಕಷ್ಟೇ ಅಲ್ಲ ಸಾಮಾಜಿಕ ಕಾರ್ಯಕ್ರಮದಿಂದಲೂ ಸಾರ್ವಜನಿಕರ ಗಮನ ಕೇಂದ್ರೀಕರಿಸಿತು. ಪ್ರತೀ ವರ್ಷವೂ ಈ ಬಾಲ ಯೇಸು ದೇಗುಲದಲ್ಲಿ ವಾರ್ಷಿಕ ಮಹೋತ್ಸವ ವಿರಂಭಣೆಯಿಂದ ನೆರವೇರುತ್ತಿದೆ. ಈ ಬಾರಿ ಕೊರೋನಾ ಕಾರಣದಿಂದಾಗಿ ಕೆಲವು ಮಾನದಂಡಗಳನ್ನು ಅನುಸರಿಸಿದ್ದರಿಂದಾಗಿ ಭಕ್ತರಿಗೆ ಅಲ್ಪ ಮಟ್ಟಿನ ಅನಾನುಕೂಲತೆಗಳು ಉಂಟಾಗಿದೆಯಾದರೂ ಭಕ್ತ ಸಮೂಹವು ದೇವಾಲಯದ ನಿಯಮಗಳನ್ನು ಪಾಲಿಸಿ ಸಹಕಾರ ನೀಡಿದ್ದಾರೆ. ಅನನ್ಯ ಪೂಜಾ ವೈವಿಧ್ಯ ಬಾಲ ಎಸು ಮಹೋತ್ಸವ ಸಂದರ್ಭದಲ್ಲಿ ಫಾದರ್ ಕರುನೇಶ್ ದೇವರ ವಾಕ್ಯವನ್ನು ಬೋಧಿಸಿದರೆ, ನಂತರ ಫಾದರ್ ಜಾರ್ಜ್ ಮಾರ್ಗದರ್ಶನದಲ್ಲಿ ಆರಾಧನೆ ವೈಭವ ಭಕ್ತರ ಮನಸೆಳೆಯಿತು. ಪ್ರಧಾನ ಯಾಜಕ ರಾಗಿ ಫಾದರ್ ಸ್ಟ್ಯಾನಿ ಲೋಬೊ…

ಕೋಬ್ರಾದಲ್ಲಿ ‘ಶ್ರೀನಿಧಿ ಶೆಟ್ಟಿ’ ಸಕತ್ ಮಿಂಚಿಂಗ್

ಕನ್ನಡದ ನಟಿ ಶ್ರೀನಿಧಿ ಶೆಟ್ಟಿ ‘ಕೋಬ್ರಾ’ದಲ್ಲಿ ಸಕತ್ ಲುಕ್ ಕೊಟ್ಟಿದ್ದಾರೆ. ಅವರ ಅಭಿನಯದ ಕೊಬ್ರಾ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಚಿಯಾನ್ ವಿಕ್ರಂ ಮತ್ತು ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡಾ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು ಚಿತ್ರವನ್ನು ಅಜಯ್ ಜ್ಞಾನಮೂರ್ತಿ ನಿರ್ದೇಶಿಸಿದ್ದಾರೆ.

ಬಾಲಿವುಡ್ ಅಂಗಳದಲ್ಲಿ ರಶ್ಮಿಕಾ ಕೌತುಕ

ಬಾಲಿವುಡ್​ನ ಗಾಯಕ ಹಾಗೂ ರ‍್ಯಾಪರ್​​ ಬಾದ್​ ಶಾ ಅವರ ಹೊಸ ಮ್ಯೂಸಿಕ್​ ಆಲ್ಬಂ ‘ಟಾಪ್​ ಟಕ್ಕರ್​’ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ಮ್ಯೂಸಿಕ್​ ವಿಡಿಯೋ ವಿಶೇಷತೆ ಏನೆಂದರೆ ಬಹುಬಾಷಾ ತಾರೆ ರಶ್ಮಿಕಾ ಮಂದಣ್ಣ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೀಡಿಯೋ ಸಾಂಗ್ ಸದ್ಯದಲ್ಲೇ ಯೂಟ್ಯೂಬ್​ನಲ್ಲಿ ರಿಲೀಸ್​ ಆಗಲಿದೆ. ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯಕ್ಷವಾಗಿರುವ ಪೋಸ್ಟರ್​ನಲ್ಲಿ ರಶ್ಮಿಕಾ ಮಂದಣ್ಣ ಸಖತ್​ ಟ್ರೆಂಡಿಯಾಗಿ ಕಾಣಿಸಿಕೊಂಡಿದ್ದಾರೆ. ರ‍್ಯಾಪರ್​​ ಬಾದ್​ ಶಾ ಅವರ ಹಿಂದಿನ ಆಲ್ಬಂಗಳು ಸೂಪರ್​ ಹಿಟ್​ ಆಗಿವೆ. ಈ ಹಿಂದೆ ಸೋನಮ್​ ಕಪೂರ್​, ಜಾಕ್ವೆಲಿನ್​ ನಂತಹ ಬಾಲಿವುಡ್​ ಹಾಟ್​ ನಾಯಕಿಯರು ಮ್ಯೂಸಿಕ್​ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಷಯವನ್ನು ರಶ್ಮಿಕಾ ಮಂದಣ್ಣ ಅವರು ತಮ್ಮ ಇನ್​ಸ್ಟಾ ಸ್ಟೋರೀಸ್’ನಲ್ಲಿ ಹಂಚಿಕೊಂಡಿದ್ದಾರೆ. Ladies and gentlemen presenting to you. 🗣 🥳✨@Its_Badshah @jonitamusic @AmitUchana @Saga_Hits @SumeetSinghM @thisisysr @yrf @MTVBeats @FeverFMOfficial pic.twitter.com/0xBJymd1Td…

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 150 ಸ್ಥಾನಗಳ ಗುರಿ

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲೂ 140 ರಿಂದ 150 ಸ್ಥಾನಗಳನ್ನು ಗೆಲ್ಲುವ ಫ್ಯೂರಿ ನಮ್ಮದಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಕಲ್ಪ ಮಾಡಿದ್ದಾರೆ. ರಾಜ್ಯದಲ್ಲಿ ಜನಸೇವಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದೆ. ಮುಂದಿನ ಚುನಾವಣೆಗಳಲ್ಲೂ ನಾವು ಅಭೂತಪೂರ್ವ ಗೆಲುವು ಸಾಧಿಸಬೇಕು. ವಿಧಾನಸಭಾ ಚುನಾವಣೆಯಲ್ಲೂ 140 ರಿಂದ 150 ಸ್ಥಾನಗಳನ್ನು ಗೆಲ್ಲುವ ಪ್ರತಿಜ್ಞೆ ನಮ್ಮದಾಗಲಿ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಮಾತನಾಡಿ, ಗ್ರಾಮ ಪಂಚಾಯತ್‍ಗಳಲ್ಲಿ 45 ಸಾವಿರ ಜನ ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದಾರೆ. ಕನಕಪುರದಲ್ಲೂ ಬಿಜೆಪಿ ಗೆದ್ದಿದೆ. ಬಾದಾಮಿಯಲ್ಲೂ ಉತ್ತಮ ಸಾಧನೆ ಮಾಡಿದೆ. ಹಾಸನ ಮತ್ತು ಮಂಡ್ಯದಲ್ಲೂ ಕೇಸರಿ ಧ್ವಜ ಹಾರಾಡುತ್ತಿದೆ. ಮುಂದಿನ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ 150 ಸ್ಥಾನಗಳನ್ನು ಬಿಜೆಪಿ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ, ಸಚಿವರಾದ ಆರ್.ಅಶೋಕ್, ಸುರೇಶ್‍ಕುಮಾರ್, ಗೋಪಾಲಯ್ಯ, ಎಸ್.ಟಿ.ಸೋಮಶೇಖರ್,…

ಬಿಜೆಪಿ ಗೆಲುವಿನ ಓಟ ನಿರಂತರ; ಅರುಣ್ ಸಿಂಗ್

ಬೆಂಗಳೂರು: ಕರ್ನಾಟಕದಲ್ಲಿ ಗ್ರಾಮ ಪಂಚಾಯತ್‍ಗಳಲ್ಲಿ ಬಿಜೆಪಿ ಸಾಧಿಸಿದ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಡಳಿತವೇ ಕಾರಣ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ರಾಜ್ಯದಲ್ಲಿ ಜನಸೇವಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯತ್‍ಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಗೆಲುವಿನ ಪ್ರಮಾಣ ಕುಸಿದಿದೆ. ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಇದಕ್ಕಾಗಿ ಪಕ್ಷದ ವತಿಯಿಂದ ಮುಖ್ಯಮಂತ್ರಿಗಳು, ರಾಜ್ಯಾಧ್ಯಕ್ಷರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ಅಭಿನಂದಿಸುವುದಾಗಿ ತಿಳಿಸಿದರು. ಭಾರತೀಯ ಜನತಾ ಪಕ್ಷವು ಜನರ ಸೇವೆಗೆ ಬದ್ಧವಾದ ಪಕ್ಷ. ಇತರ ಪಕ್ಷಗಳಂತಲ್ಲ. “ಸಬ್ ಕಾ ಸಾಥ್ ಸಬ್ ಕಾ ವಿಕಾಸ್” ಧ್ಯೇಯವಾಕ್ಯದೊಂದಿಗೆ ಅದು ಕಾರ್ಯ ನಿರ್ವಹಿಸುತ್ತದೆ. ಬಿಜೆಪಿ ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳಲ್ಲೂ ತನ್ನ ಗೆಲುವಿನ ಓಟವನ್ನು ಮುಂದುವರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಪುಟದಿಂದ ನಿರ್ಗಮಿಸಿದ ನಾಗೇಶ್’ಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಾರಥ್ಯ

ಬೆಂಗಳೂರು: ಸಂಪುಟದಿಂದ ನಿರ್ಗಮಿಸಿರುವ ಅಬಕಾರಿ ಸಚಿವ ನಾಗೇಶ್ ಅವರಿಗೆ ಅಂಬೇಡ್ಕರ್​ ಅಭಿವೃದ್ಧಿ ನಿಗಮದ ಸಾರಥ್ಯ ಸಿಕ್ಕಿದೆ. ಸಿ.ಎಂ.ಯಡಿಯೂರಪ್ಪರವರು ರಾಜೀನಾಮೆ ಕೇಳಿದ ಸಂದರ್ಭದಲ್ಲಿ ಸಂಪುಟ ದರ್ಜೆ ಸ್ಥಾನಮಾನದ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ನೀಡುವ ಭರವಸೆ ನೀಡಿದ್ದರು. ಇದೆ ಸಂದರ್ಭದಲ್ಲಿ ಅಂಬೇಡ್ಕರ್​ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡುವಂತೆ ನಾಗೇಶ್ ಅವರುಮನವಿ ಮಾಡಿದ್ದಾರೆನ್ನಲಾಗಿದೆ. ಅದರಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾಜಿ ಸಚಿವ ಹೆಚ್.ನಾಗೇಶ್ ಅವರನ್ನು ಅಂಬೇಡ್ಕರ್​ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶಿಸಿದ್ದಾರೆ. ಈ ವರೆಗೂ ಅಂಬೇಡ್ಕರ್​ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ಮುನಿಕೃಷ್ಣ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅವರನ್ನು ಎಂಸಿ&ಎ ನಿಗಾಮಾಕ್ಕೆ ನೇಮಕ ಮಾಡಲಾಗಿದೆ. ​

ಯಾರಿಗೆ ಯಾವ ಖಾತೆ; ನೂತನ ಸಚಿವರಲ್ಲೂ ಕುತೂಹಲ

ಬೆಂಗಳೂರು: ಯಡಿಯೂರಪ್ಪ ಸಂಪುಟಕ್ಕೆ 7 ಮಂದಿ ಸೇರ್ಪಡೆಯಾಗಿದ್ದು ಇದೀಗ ರಾರಿಗೆ ಯಾವ ಖಾತೆ ಎಂಬ ಲೆಕ್ಕಾಚಾರ ಸಾಗಿದೆ. ಆದರೆ ತಕ್ಷಣಕ್ಕೆ ಈ ನೂತನ ಸಚಿವರಿಗೆ ಖಾತೆಗಳನ್ನು ಯಡಿಯೂರಪ್ಪ ಅವರು ಹಂಚಿಕೆ ಮಾಡಿಲ್ಲ. ಈ ನಡುವೆ ನೂತನ ಸಚಿವರಿಗೆ ವಿಧಾನಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ ಸಚಿವರಿಗೆ ಹಂಚಿಕೆ ಮಾಡಲಾದ ಕೊಠಡಿಗಳ ಸಂಖ್ಯೆ ಹೀಗಿದೆ: ಎಸ್ ಅಂಗಾರ: ವಿಧಾನಸೌಧ – ಕೊಠಡಿ ಸಂಖ್ಯೆ 252, 253ಎ ಅರವಿಂದ್ ಲಿಂಬಾವಳಿ: ವಿಧಾನಸೌಧ – ಕೊಠಡಿ ಸಂಖ್ಯೆ 344,344ಎ ಸಿ.ಪಿ. ಯೋಗೇಶ್ವರ್: ವಿಧಾನಸೌಧ – ಕೊಠಡಿ ಸಂಖ್ಯೆ 336, 336ಎ ಮುರುಗೇಶ್ ನಿರಾಣಿ: ವಿಧಾನಸೌಧ – ಕೊಠಡಿ ಸಂಖ್ಯೆ 307, 307ಎ ಆರ್ ಶಂಕರ್: ವಿಧಾನಸೌಧ – ಕೊಠಡಿ ಸಂಖ್ಯೆ 305, 305ಎ ಎಂಟಿಬಿ ನಾಗರಾಜ್: ವಿಧಾನಸೌಧ – ಕೊಠಡಿ ಸಂಖ್ಯೆ 330, 330ಎ ಇನ್ನೊಂದೆಡೆ ಖಾತೆಗಳನ್ನು ಪಡೆಯಲೂ ನೂತನ ಸಚಿವರು ಲಾಭಿ…