ದರ್ಶನ್ ಸಂಕ್ರಾಂತಿ.. ರೋಮಾಂಚಕ ಸನಿವೇಶದ ಫೋಟೋಗಳು

ಸಿನಿಮಾ ತಾರೆಯರ ಅಂಗಳದಲ್ಲೂ ಮಕರ ಸಂಕ್ರಾಂತಿ ಸಡಗರ ಕಂಡುಬಂದಿದೆ. ತಾರೆಯ ತೋಟಗಳಲ್ಲಿ ನಡೆದ ಹಬ್ಬ ಸಂಭ್ರಮದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಕುದುರೆಯ ಜೊತೆ ಕಿಚ್ಚು ಹಾಯಿಸಿದ್ದಾರೆ. ಈ ಸಂಬಂಧದ ಫೋಟೋಗಳು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. Darshan celebrates Sankranti in his farmhouse @smshashiprasad @sharanuhullur1 pic.twitter.com/P1BDvUoLEb — SSSMovieReviews (@sssmoviereviews) January 14, 2021

ಬಿಎಸ್’ವೈ ಸರ್ಕಾರಕ್ಕೆ ಸಿಡಿ ಬಾಂಬ್ ಕಂಟಕ; ಕಮಲ ಪಾಲಯದಲ್ಲೂ ತಳಮಳ

ಬೆಂಗಳೂರು: ಸಿಎಂ ಯಡಿಯೂರಪ್ಪ ಅವರಿಗೀಗ ಸಿಡಿ ಕಂಟಕ ಎದುರಾಗಿದೆ. ಸಂಪುಟ ವಿಸ್ತರಣೆಯ ಬೆನ್ನಲೇ ಮಂತ್ರಿಸ್ಥಾನ ವಂಚಿತ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಹೆಚ್.ವಿಶ್ವನಾಥ್ ಅವರು ಸಿಡಿ ಬಾಂಬ್’ಗಳನ್ನೂ ಹಾಕುತ್ತಿದ್ದು ಈ ಬೆಳವಣಿಗೆಯಿಂದಾಗಿ ಬಿಜೆಪಿ ನಾಯಕರು ಮುಜುಗರಕ್ಕೀಡಾಗಿದ್ದಾರೆ. ಅದರಲ್ಲೂ ಬ್ರಷ್ಟಾಚಾರದ್ದಷ್ಟೇ ಅಲ್ಲ ನೋಡಲೂ ಅಸಹ್ಯವಾದ ದೃಶ್ಯಗಳ ಸಿಡಿ ಇದೆ ಎಂದು ಯತ್ನಾಳ್ ಸಿಡಿಸಿರುವ ಬಾಂಬ್ ಕಮಲ ಪಾಳಯದಲ್ಲಿ ತಳಮಳ ಸೃಷ್ಟಿಸಿದೆ. ಏನಿದು ವೀಡಿಯೊ ಬಾಂಬ್ ಅಂದು ಯತ್ನಾಳ್ ಆಗಲೀ, ವಿಶ್ವನಾಥ್ ಅವರಾಗಲೀ ಸ್ಪಷ್ಟವಾಗಿ ಹೇಳುತ್ತಿಲ್ಲ. ಅದನ್ನು ಯಾವಾಗ ಬಿಡುಗಡೆ ಮಾಡುವುದಾಗಿಯೂ ಹೇಳಿಕೊಳ್ಳುತ್ತಿಲ್ಲ. ಒಟ್ಟಾರೆ ಸುದ್ದಿಗೆ ಗ್ರಾಸವಾಗುವ ರೀತಿ ಹೇಳಿಕೆಗಳನ್ನು ನೀಡುತ್ತಿದ್ದು ಪ್ರತಿಪಕ್ಷಗಳು ಕೂಡಾ ಬಿಜೆಪಿಯಲ್ಲಿನ ಬೆಳವಣಿಗೆಯನ್ನು ಕಾಡು ನೋಡುತ್ತಿವೆ. ಸಿದ್ದರಾಮಯ್ಯ ಸವಾಲು ಬಿಜೆಪಿಯಲ್ಲಿನ ರಹಸ್ಯ ಸಿಡಿ ವಿಚಾರ ಇದೀಗ ರಾಜ್ಯ ರಾಜಕೀಯದಲ್ಲಿ ಭಾರೀ ವಿವಾದ ಸೃಷ್ಟಿಸಿರುವಂತೆಯೇ ಈ ವಿದ್ಯಮಾನ ಬಗ್ಗೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ…

ಜೆಡಿಎಸ್’ಗೆ ಹೊಸ ಕೋರ್ ಕಮಿಟಿ; ಪಕ್ಷ ಬಲಪಡಿಸಲು ಹೆಚ್ಡಿಕೆ ತಂತ್ರ

ಬೆಂಗಳೂರು: ಪಂಚಾಯತ್ ಚುನಾವಣೆಯ ಬೆನ್ನಲೇ ರಾಜ್ಯದಲ್ಲಿ ಜೆಡಿಎಸ್ ಇದೀಗ ಪಕ್ಷ ಸಂಘಟನೆಗೆ ಸಿದ್ಧವಾಗಿದೆ. ಪಕ್ಷದ ಕೋರ್ ಕಮಿಟಿಯನ್ನು ಹೊಸದಾಗಿ ರಚಿಸಲು ಮುಂದಾಗಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ. ಕುಮಾರಸ್ವಾಮಿ, ಅದ್ಕಕಾಗಿ ಈ ತಿಂಗಳ 18ರಂದು ಪಕ್ಷದ ಪ್ರಮುಖರ ಸಭೆಯನ್ನು ಕರೆದಿದ್ದಾರೆ. ಸೂರ್ಯ ಪಥ ಬದಲಿಸಿ ಹೊಸ ಭರವಸೆಯ ಹೊಂಗಿರಣ ಮೂಡಿಸಿದಂತೆ ಈ ಮಕರ ಸಂಕ್ರಾಂತಿಯಂದು ಜೆಡಿಎಸ್ ಪಕ್ಷದ ಸಂಘಟನೆಯ ದೃಷ್ಟಿಯಿಂದ ಹೊಸತನದೊಂದಿಗೆ ಪಕ್ಷದ ಚಟುವಟಿಕೆಗಳನ್ನು ಕ್ರಿಯಾಶೀಲಗೊಳಿಸಲಾಗುತ್ತಿದೆ.1/3 — H D Kumaraswamy (@hd_kumaraswamy) January 14, 2021 ಹೊಸ ಕೋರ್ ಕಮಿಟಿಯನ್ನು ಅಸ್ತಿತ್ವಕ್ಕೆ ತರಲಾಗುವುದು, ನಂತರ ಪಕ್ಷದ ರಾಜ್ಯ ಘಟಕದ ಪದಾಧಿಕಾರಿಗಳ ನೇಮಕ ಮಾಡಲಾಗುವುದು ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ಇದರ ಮೊದಲ ಹೆಜ್ಜೆಯಾಗಿ ಈ ತಿಂಗಳ 18ರಂದು ಹೊಸದಾಗಿ ಕೋರ್ ಕಮಿಟಿ ರಚಿಸಲು ಪಕ್ಷದ ಪ್ರಮುಖರ ಸಭೆಯನ್ನು ಕರೆಯಲಾಗಿದೆ. ಅಂದಿನ ಸಭೆಯಲ್ಲಿ ಸುದೀರ್ಘ…

ಪುಲಿಕೇಶೀನಗರ ರಾಜಕೀಯ; ಕಾಂಗ್ರೆಸ್ ಕಾರ್ಯಕರ್ತರಲ್ಲಿ ಚಿಗುರಿದ ಕನಸು

ಬೆಂಗಳೂರು: ರಾಜ್ಯ ರಾಜಕಾರಣ ದಿನಕ್ಕೊಂದು ವಿದ್ಯಮಾನಕ್ಕೆ ಸಾಕ್ಷಿಯಾಗುತ್ತಿದೆ. ಕಳೆದ ಲೋಕಸಭಾ ಸಮರದಲ್ಲಿ ಬೆಂಗಳೂರು ದಕ್ಷಿಣಾ ಲೋಕಸಭಾ ಕ್ಷೇತ್ರಕ್ಕೆ ತೇಜಸ್ವಿ ಸೂರ್ಯ ಅವರನ್ನು ಬಿಜೆಪಿ ಆಯ್ಕೆ ಮಾಡಿದಂತೆ, ಕೆಲ ಸಮಯದ ಹಿಂದೆ ಕಾಂಗ್ರೆಸ್ ಕೂಡಾ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಡಿ.ಕೆ.ರವಿ ಪತ್ನಿ ಕುಸುಮಾ ಅವರನ್ನು ಕಣಕ್ಕಿಳಿಸಿ ಅಚ್ಚರಿಗೆ ಕಾರಣವಾಗಿತ್ತು. ಇದೀಗ ಅಂಥದ್ದೇ ಕುತೂಹಲಕಾರಿ ಬೆಳವಣಿಗೆಗೆ ಬೆಂಗಳೂರಿನ ಪುಲಿಕೇಶಿನಗರ ಕ್ಷೇತ್ರ ಕೂಡಾ ಕಾರಣವಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಒಂದು ಮೂಲದ ಪ್ರಕಾರ ಈವರೆಗೂ ಮೀಸಲು ಕ್ಷೇತ್ರವಾಗಿರುವ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರ ಮುಂದಿನ ಚುನಾವಣಾ ಹೊತ್ತಿಗೆ ಮೀಸಲಾತಿಯಿಂದ ಮುಕ್ತವಾಗಲಿದೆ ಎಂದು ಹೇಳಲಾಗುತ್ತಿದೆ. ಅಂತಹಾ ಸಂದರ್ಭದಲ್ಲಿ ತಾವು ಕೈ ಚಿಹ್ನೆಯಿಂದ ಸ್ಪರ್ಧಿಸಬೇಕೆಂದು ಪ್ರಯತ್ನದಲ್ಲಿದ್ದ ಮಾಜಿ ಮೇಯರ್ ಸಂಪತ್ ಕುಮಾರ್ ಅವರು ಗಲಭೆ ಆರೋಪಕ್ಕೊಳಗಾಗಿದ್ದಾರೆ. ಈವರೆಗೂ ಕೈ ಶಾಸಕರಾಗಿರುವ ಅಖಂಡ ಶ್ರೀನಿವಾಸಮೂರ್ತಿ ಬಗ್ಗೆ ಕಾಂಗ್ರೆಸ್ ನಾಯಕರು ಮುನಿಸಿಕೊಂಡಿದ್ದಾರೆ ಎನ್ನಲಾಗುತ್ತಿದ್ದು ಅವರನ್ನು ಬಿಜೆಪಿಗೆ ಸೆಳೆಯುವ…

ಕಾಂಗ್ರೆಸ್ ರೈತರ ಜೊತೆ ನಿಲ್ಲಲಿದೆ; ಕೃಷಿ ಕಾಯ್ದೆ ವಿರುದ್ಧ ರಾಹುಲ್ ವಾಗ್ದಾಳಿ

ಮಧುರೈ: ಕೇಂದ್ರ ಸರ್ಕಾರದ ವಿರುದ್ಧ ವಾಕ್ಪ್ರಹಾರ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧೀ, ಕೃಷಿ ಕಾನೂನು ಮೂಲಕ ರೈತರನ್ನು ಸರ್ವನಾಶ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಸಂಕ್ರಾಂತಿ ಹಬ್ಬ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಭೇಟಿ ನೀಡಿದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ರೂಪಿಸಿರುವ ಕೃಷಿ ಕಾಯ್ದೆಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಕೇಂದ್ರ ಸರ್ಕಾರ ಕೃಷಿ ಕಾನೂನುಗಳ ಮೂಲಕ ತನ್ನ ಇಬ್ಬರು ಅಥವಾ ಮೂವರು ಸ್ನೇಹಿತರಿಗೆ ಲಾಭ ಮಾಡಿಕೊಡಲು ಯತ್ನಿಸುತ್ತಿದೆ ಎಂದರು. ರೈತರದ್ದೆಲ್ಲವನ್ನೂ ಅವರ ಮೂವರು ಸ್ನೇಹಿತರಿಗೆ ನೀಡಲು ಯತ್ನಿಸುತ್ತಿದೆ. ಕೇಂದ್ರ ಸರ್ಕಾರವು ಕೃಷಿ ಕಾಯ್ದೆಗಳನ್ನು ಜಾರಿಮಾಡುವ ಮೂಲಕ ರೈತರನ್ನು ನಾಶ ಮಾಡಲಿದೆ. ಹಾಗಾಗಿ ತಮ್ಮ ಪಕ್ಷ ರೈತರ ಜೊತೆ ನಿಲ್ಲಲಿದೆ ಎಂದು ಹೇಳಿದರು.

ಕೊರೋನಾ ಲಸಿಕೆ ವಿತರಣೆಗೆ ಶನಿವಾರ ಪ್ರಧಾನಿ ಚಾಲನೆ

ದೆಹಲಿ: ಜಗತ್ತನ್ನೇ ತಲ್ಲಣ ಗೊಳಿಸಿರುವ ಕೊರೋನಾ ಹೆಮ್ಮಾರಿಯಿಂದ ಭಾರತ ಪಾರಾಗುವ ಆಶಾವಾದ ವ್ಯಕ್ತವಾಗುತ್ತಿದೆ. ಈ ವೈರಾಣು ಸೋಂಕಿನಿಂದ ರಕ್ಷಿಸಿಕೊಳ್ಳಲು ಔಷಧಿ ಸಿದ್ದವಾಗಿದ್ದು ಭಾರತದಲ್ಲಿ ಕೋವಿಡ್ -19 ವ್ಯಾಕ್ಸಿನೇಷನ್ ಡ್ರೈವ್‌ಗೆ ಪ್ರಧಾನಿ ನರೇಂದ್ರ ಮೋದಿ ಜನವರಿ 16ರಂದು ಚಾಲನೆ ನೀಡಲಿದ್ದಾರೆ. ಕೋವಿಡ್ ಲಸಿಕೆ ವಿತರಣೆಯ ಮೇಲ್ವಿಚಾರಣೆಗಾಗಿ ಕೋ-ವಿನ್ (ಕೋವಿಡ್ ಲಸಿಕೆ ಇಂಟೆಲಿಜೆನ್ಸ್ ನೆಟ್‌ವರ್ಕ್) ಆ್ಯಪ್’ನ್ನು ಮೋದಿ ಬಿಡುಗಡೆ ಮಾಡಿದ ನಂತರ ಈ ಲಸಿಕೆ ವಿತರಣಾ ಕಾರ್ಯಕ್ಕೆ ಚಾಲನೆ ಸಿಗಲಿದೆ ಎಂದು ಕೇಂದ್ರ್ರ ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿದೆ. ರಾಷ್ಟ್ರವ್ಯಾಪಿ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್‌ನ ಮೊದಲ ದಿನ ದೇಶಾದ್ಯಂತ 2,934 ಕೇಂದ್ರಗಳಲ್ಲಿ ಸುಮಾರು ಮೂರು ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ನೀಡಲಾಗುತ್ತದೆ. ಈ ಪೈಕಿ ಆಯ್ದ ಲಸಿಕೆ ವಿತರಣಾ ಕೇಂದ್ರಗಳಿಂದ ಫಲಾನುಭವಿಗಳ ಜೊತೆ ಪ್ರಧಾನಮಂತ್ರಿ ಸಂವಹನ ನಡೆಸಲಿದ್ದಾರೆಂದು ಹೇಳಲಾಗಿದೆ.