ಮದಗಜ ತಮಿಳು ಸಿನಿಮಾದ ಟೀಸರ್; ಸಕತ್ ರಂಜನೆ

ಮದಗಜ ತಮಿಳು ಸಿನಿಮಾದ ಟೀಸರ್ ಬಿಡುಗಡೆಯಾಗಿ. ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಚಿತ್ರ ದಕ್ಷಿಣ ಭಾರತದ ವಿವಿಧ ಭಾಷೆಗಳಲ್ಲಿ ತೆರೆಕಾಣಲಿದೆ. ಇದರ ತಮಿಳು ಟೀಸರ್ ಅನಾವರಣಗೊಂಡಿದ್ದು ಸಾಮಾಜಿಕ ಜಲತಾಣಗಳಲ್ಲಿ ಸಕತ್ ರಂಜನೆ ಒದಗಿಸುತ್ತಿದೆ.

ಎಲ್ಲ ವಿವಿಗಳಿಗೆ ಎನ್‌ಐಆರ್‌ಎಫ್‌ ರಾಂಕ್‌, ನಾಕ್‌ ಮಾನ್ಯತೆ?

ಬೆಂಗಳೂರು: ಉನ್ನತ ಶಿಕ್ಷಣ ವಿಭಾಗದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುವತ್ತ ವೇಗದ ಹೆಜ್ಜೆಗಳನ್ನು ಇಡುತ್ತಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ರಾಜ್ಯದ ಎಲ್ಲ ವಿಶ್ವವಿದ್ಯಾಲಯ-ಕಾಲೇಜುಗಳ ನಾಕ್‌ ಮಾನ್ಯತೆ, ಎನ್‌ಐಆರ್‌ಎಫ್‌ ರಾಂಕ್‌ ಪಡೆಯುವ ಸಂಬಂಧ 15 ದಿನಗಳ ಒಳಗಾಗಿ ಕ್ರಿಯಾ ಯೋಜನೆ ಸಲ್ಲಿಸುವಂತೆ ಎಲ್ಲ ಕುಲಪತಿಗಳಿಗೆ ಡೆಡ್‌ಲೈನ್‌ ವಿಧಿಸಿದ್ದಾರೆ. ಬೆಂಗಳೂರಿನಲ್ಲಿ ಸರ್ಕಾರದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆ ನಡೆಸಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ನಮ್ಮ ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲೊಂದು ಬಹುದೊಡ್ಡ ಬದಲಾವಣೆ. ಇದಕ್ಕೆ ಅನುಗುಣವಾಗಿ ನಾವೆಲ್ಲ ಹೆಜ್ಜೆ ಇಡಬೇಕು. ಸ್ಪರ್ಧಾತ್ಮಕವಾಗಿರುವ ಈ ಸಂದರ್ಭದಲ್ಲಿ ಪ್ರತಿ ವಿವಿಯು ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕದ ಚೌಕಟ್ಟಿನ (National Institutional Ranking Framework-NIRF) ರಾಂಕ್ ಹೊಂದಿರಬೇಕು ಹಾಗೂ ಪ್ರತಿ ಕಾಲೇಜ್‌ಗೂ ನಾಕ್‌ ಮಾನ್ಯತೆ (NAAC Accreditation) ಇರಲೇಬೇಕು ಎಂದು ಹೇಳಿದ್ದಾರೆ. ಮೊದಲಿನಂತೆ ನಿಧಾನಗತಿಯಲ್ಲಿ ಕೆಲಸ ಮಾಡಿದರೆ ಸಾಲುವುದಿಲ್ಲ. ಬದಲಾಗುತ್ತಿರುವ ಜಗತ್ತಿಗೆ ಅನುಗುಣವಾಗಿ…

ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನ ಬ್ರಹ್ಮಕಲಶೋತ್ಸವ; ಸಚಿವ ಪ್ರಭು ಚವ್ಹಾಣ್ ಭೇಟಿ

ಉಡುಪಿ: ಕುಂಜಿಬೆಟ್ಟುವಿನ ಇತಿಹಾಸ ಪ್ರಸಿದ್ಧ ಶ್ರೀ ವೆಂಕಟರಮಣ ದೇವರಿಗೆ, ಶ್ರೀ ಈಶ್ವರ, ಶ್ರೀ ಗಣಪತಿ ಮತ್ತು ಮುಖ್ಯಪ್ರಾಣ ದೇವರಿಗೆ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಸಮಾರಂಭ ಅದ್ದೂರಿಯಾಗಿ ನೆರವೇರಿದೆ. ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಕೊನೆಯ ದಿನವಾದ ಮಂಗಳವಾರ ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಬಿ. ಚವ್ಹಾಣ್ ಅವರು ಭೇಟಿ ನೀಡಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡರು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶಾಸಕ ಕೆ. ರಘುಪತಿ ಭಟ್ ಸಚಿವರನ್ನು ದೇವಸ್ಥಾನಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಶ್ರೀ ಕರಂಬಳ್ಳಿ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರುಗಳಾದ ಕೆ. ಲಕ್ಷ್ಮಣ ಶೇರಿಗಾರ್, ಸುಂದರ ಅಮೀನ್, ಶೈಲಶ್ರೀ ದಿವಾಕರ್ ಶೆಟ್ಟಿ, ಪ್ರಧಾನ ಅರ್ಚಕರಾದ ದಿವಾಕರ ಐತಾಳ್, ಪರ್ಯಾಯ ಅರ್ಚಕರಾದ ಗೋವಿಂದ ಐತಾಳ್ ಹಾಗೂ ರಾಧಾಕೃಷ್ಣ ಭಾರಿತ್ತಾಯ, ರಮೇಶ್ ಭಾರಿತ್ತಾಯ, ವಾಸುದೇವ್ ಭಟ್ ಉಪಸ್ಥಿತರಿದ್ದರು.

ಮತ್ಸ್ಯವೋದ್ಯಮಕ್ಕೆ ಆಧುನಿಕತೆಯ ಸ್ಪರ್ಷ; ChefTalk ಪೂಜಾರಿಗೆ ಅಭಿನಂದನೆಗಳ ಮಹಾಮಳೆ

ಉದ್ಯೋಗದಾತನ ಬಗ್ಗೆ ಗುಣಗಾನ ಕೇಳಿ ಮುಖ್ಯಮಂತ್ರಿ ಪುತ್ರ ಸಂಸದ ರಾಘವೇಂದ್ರ ಮೂಡ್ನವಿಸ್ಮಿತ.. ಅಭಿಮಾನ ಸೂಚಿಸಿ ಸನ್ಮಾನಿಸಿದ ಕ್ಷಣವೂ ಅನನ್ಯ ಹಾಗೂ ಅಪರೂಪದ ಪ್ರಸಂಗ ಉಡುಪಿ: ಸಾಂಪ್ರದಾಯಿಕ ಮತ್ಸ್ಯವೋದ್ಯಮಕ್ಕೆ ಇದೀಗ ಆಧುನಿಕತೆಯ ಸ್ಪರ್ಷ ಸಿಕ್ಕಿದೆ. ಮತ್ಸ್ಯಶ್ರೀಮಂತಿಕೆಯ ತವರಾಗಿರುವ ರಾಜ್ಯದ ಕರಾವಳಿ ಇನ್ನು ಮುಂದೆ ‘ಫಿಷ್ ವೇಪರ್ಸ್’ ಉತ್ಪನ್ನಗಳಿಂದಲೂ ಹೆಸರುವಾಸಿಯಾಗಲಿದೆ. ಅರಬ್ಬೀ ಸಮುದ್ರದಿಂದ ಹೇರಳವಾಗಿ ಸಿಗುತ್ತಿರುವ ಮತ್ಸ್ಯ ಸಂಪತ್ತನ್ನು ಆಹಾರವಾಗಿ ಬಳಸುತ್ತಿದ್ದ ಜನರಿಗೆ ಇನ್ನು ಮುಂದೆ ಅದರ ಮೌಲ್ಯವರ್ಧಿತ ಖಾದ್ಯಗಳೂ ಸಿಗಲಿವೆ. ಈ ಫಿಷ್ ವೇಪರ್ಸ್ ಹಾಗೂ ಚಿಪ್ಸ್ ಸಹಿತ ಮೀನಿನಿಂದ ವಿವಿಧ ಖಾದ್ಯಗಳನ್ನು ತಯಾರಿಸುವ ಘಟಕ ಸ್ಥಾಪನೆಗೆ ಮಂಗಳವಾರ ಶಿಲಾನ್ಯಾಸ ನೆರವೇರಿಸಲಾಯಿತು. ದೇಶದ ಪ್ರತಿಷ್ಠಿತ ಆಹಾರೋತ್ಪನ್ನ ಸಂಸ್ಥೆ ChefTalkನ ಮುಖ್ಯಸ್ಥ, ಉದ್ಯಮಿ ಗೋವಿಂದ ಬಾಬು ಪೂಜಾರಿಯವರ ಸಾರಥ್ಯದಲ್ಲಿ, ‘ಮತ್ಸ್ಯಬಂಧನ’ ಎಂಬ ಹೆಸರಲ್ಲಿ ಕರಾವಳಿ ಜನರ ಮಹತ್ವಾಕಾಂಕ್ಷೆಯ ಮೀನಿನ ಮೌಲ್ಯವರ್ಧಿತ ಖಾದ್ಯಗಳ ಉತ್ಪನ್ನ ಘಟಕ ತಲೆ ಎತ್ತಲಿದ್ದು ಮಂಗಳವಾರ ಉಡುಪಿ…

ಉದ್ಯೋಗದಾತ ಗೋವಿಂದ ಬಾಬು ಪೂಜಾರಿ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ

ಉಡುಪಿ: ಈವರೆಗೂ ಸಾಂಪ್ರದಾಯಿಕ ಗೇರು ಉತ್ಪನ್ನಗಳಿಂದ ದೇಶದ ಗಮನಸೆಳೆಯುತ್ತಿದ್ದ ಕರಾವಳಿ ಇನ್ನು ಮುಂದೆ ‘ಫಿಷ್ ವೇಪರ್ಸ್’ ಉತ್ಪನ್ನಗಳಿಂದಲೂ ಹೆಸರುವಾಸಿಯಾಗಲಿದೆ. ಅರಬ್ಬೀ ಸಮುದ್ರದಿಂದ ಹೇರಳವಾಗಿ ಸಿಗುತ್ತಿರುವ ಮತ್ಸ್ಯ ಸಂಪತ್ತನ್ನು ಆಹಾರವಾಗಿ ಬಳಸುತ್ತಿದ್ದ ಜನರಿಗೆ ಇನ್ನು ಮುಂದೆ ಅದರ ಮೌಲ್ಯವರ್ಧಿತ ಖಾದ್ಯಗಳೂ ಸಿಗಲಿದೆ. ಅರ್ಥಾತ್‌ ಫಿಷ್ ವೇಪರ್ಸ್ ಹಾಗೂ ಚಿಪ್ಸ್ ಸಹಿತ ಮೀನಿನಿಂದ ವಿವಿಧ ಖಾದ್ಯಗಳನ್ನು ತಯಾರಿಸುವ ಘಟಕ ಸ್ಥಾಪನೆಗೆ ಮುನ್ನುಡಿ ಬರೆಯಲಾಗಿದೆ. ದೇಶದ ಹೆಸರಾಂತ ಆಹಾರೋದ್ಯಮಿ ಗೋವಿಂದ ಬಾಬು ಪೂಜಾರಿಯವರ ಸಾರಥ್ಯದಲ್ಲಿ ಉಡುಪಿ ಜಿಲ್ಲೆ ಬೈಂದೂರು ಸಮೀಪದ ಗೋಳಿಹೊಳೆ ಗ್ರಾಮದ ಎಲ್ಲೂರಿನಲ್ಲಿ ಮಂಗಳವಾರ ಕರಾವಳಿ ಜನರ ಮಹತ್ವಾಕಾಂಕ್ಷೆಯ ಮೀನಿನ ಮೌಲ್ಯವರ್ಧಿತ ಖಾದ್ಯಗಳ ಉತ್ಪನ್ನ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು. ಮತ್ಸ್ಯ ಬಂಧನ ಹೆಸರಿನ ಸಂಸ್ಥೆ ಮೂಲಕ ದೇಶದಲ್ಲೇ ಮೊದಲೆಂಬಂತೆ ಈ ಉದ್ದಿಮೆ ಕಾರ್ಯರೂಪಕ್ಕೆ ಬರಲಿದೆ. ಏನಿದು ಮತ್ಸ್ಯ ಬಂಧನ? ChefTalk ಹೆಸರಲ್ಲಿ ಆಹಾರೋದ್ಯಮ ಕ್ಷೇತ್ರವನ್ನು ಮುನ್ನಡೆಸುತ್ತಿರುವ ಕರಾವಳಿ ಮೂಲದ ಗೋವಿಂದ…

ರಾಜ್ಯ ಖನಿಜ ನಿಗಮದಿಂದ ಸಿಎಂಗೆ 29.79 ಕೋ.ರೂ. ಡಿವಿಡೆಂಡ್ ಹಸ್ತಾಂತರ

ಬೆಂಗಳೂರು: ಕರ್ನಾಟಕ ರಾಜ್ಯ ಖನಿಜ ನಿಗಮದ ವತಿಯಿಂದ ಮಂಗಳವಾರ 29.79 ಕೋಟಿ ರೂ.ಗಳ ಡಿವಿಡೆಂಡ್ ಮೊತ್ತವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ಹಸ್ತಾಂತರಿಸಿದರು. ಶಾಸಕ ರವಿಸುಬ್ರಹ್ಮಣ್ಯ, ನಿಗಮದ ಅಧ್ಯಕ್ಷ ಲಿಂಗಮೂರ್ತಿ ಉಪಸ್ಥಿತರಿದ್ದರು.

ನಾಗಠಾಣಾದಲ್ಲಿ ಜನಸಂಪರ್ಕ ಸಭೆ: ಪಕ್ಷ ಬಲವರ್ಧನೆ ಗೆ ಶ್ರಮಿಸಲು ಡಿಸಿಎಂ ಕಾರಜೋಳ ಕರೆ

ವಿಜಯಪುರ: ನಾಗಠಾಣ ವಿಧಾನ ಸಭಾ ಕ್ಷೇತ್ರದ ಉಮರಾಣಿ ಗ್ರಾಮದಲ್ಲಿ ಬಿಜೆಪಿ ಪಕ್ಷವು ಏರ್ಪಡಿಸದ್ದ ಜನಸಂಪರ್ಕ ಸಭೆಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ಭಾಗವಹಿಸಿ ಕಾರ್ಯಕರ್ತರಿಗೆ ಪಕ್ಷ ಸಂಘಟನೆಯ ಮಂತ್ರ ಬೋಧಿಸಿದರು. ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ನೇತೃತ್ವದ ಸರ್ಕಾರವು ಅಪರಿಮಿತವಾಗಿ ಶ್ರಮಿಸುತ್ತಿದೆ. ಪಕ್ಷ ಬಲವರ್ಧನೆಗೆ ಎಲ್ಲಾ ಕಾರ್ಯಕರ್ತರು ಒಗ್ಗೂಡಿ ಶ್ರಮಿಸಬೇಕು ಎಂದರು. ಇತ್ತೀಚಿಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ನೂತನ ಸದಸ್ಯರೆಲ್ಲರೂ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಪಕ್ಷದ ಸಂಘಟನೆಗೆ ಶ್ರಮಿಸಬೇಕು ಎಂದು ಮಾರ್ಗದರ್ಶನ ಮಾಡಿದರು. ಸಂಸದರಾದ ರಮೇಶ್ ಜಿಗಜಿಣಗಿ , ತಾಲ್ಲೂಕುಪಂಚಾಯಿತಿ ಸದಸ್ಯರು, ಪಕ್ಷದ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.