ನೆಲಮಂಗಲ: ಮೈಸೂರು ಒಡೆಯರ ಕಾಲದಲ್ಲಿ ಜಾಗ ಪಡೆದ ಕಂಪನಿಯಿಂದ ರೈತರಿಗೆ ದೋಖ ಮಾಡಿ ನೂರಾರು ಎಕರೆ ಜಮೀನು ಗುಳುಂ ಮಾಡುವ ಹುನ್ನಾರ ನಡೆದಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ. ದಾಸರಹಳ್ಳಿ ಸಮೀಪದ ಸೋಲದೇವನಹಳ್ಳಿಯಲ್ಲಿ ಆಚಾರ್ಯ ಕಾಲೇಜು ಬಳಿ ಸುಮಾರು 118 ಎಕರೆ 24 ಗುಂಟೆ ಜಮೀನನ್ನು ಕಂಪನಿ ಗುಳುಂ ಮಾಡಿದೆ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಜಮೀನು ಕಳೆದುಕೊಂಡ ಸ್ಥಳಿಯ ನಿವಾಸಿ ಮಾರುತಿ ಮಾತನಾಡಿ “ಮೈಸೂರು ಸ್ಟೋನ್ ವೇರ್ ಪೈಪ್ಸ್ ಪ್ಯಾಟಿಂರ್ಸ ಲಿಮಿಟಿಟ್ ನಿಂದ ದುಂಡಾವರ್ತನೆ ನಡೆದು ನೂರಾರು ಎಕರೆ ಗುಳಂ ಮಾಡಲಾಗಿದೆ. ಈ ಜಮೀನನ್ನು ಬಗರ್ ಹುಕ್ಕಂ ನಿಂದ ಜಮೀನು ಪಡೆದಿರುವ ಸ್ಥಳೀಯರು, ಇದೀಗ ದಾಖಲೆಗಳಿದ್ದರೂ ಕಂಪನಿ ವಿರುದ್ಧ ಹೋರಡುವ ಪರಿಸ್ಥಿತಿ ಬಂದಿದೆ. ಯಲಹಂಕ ತಹಶೀಲ್ದಾರ್ ಕಚೇರಿಯಲ್ಲೂ ಬಲಾಡ್ಯರ ಪರವಾಗಿ ಅಧಿಕಾರಿಗಳು ಸಹಕರಿಸುತ್ತಿದ್ದಾರೆ , ಕಚೇರಿಗೆ ಅಲೆದು ನಾವು ತೊಂದರೆಗೆ ಒಳಗಾಗಿದ್ದೇವೆ. 1913ರಿಂದ ನಮ್ಮ…
Day: January 22, 2021
ಹುಣಸೋಡು ಕಲ್ಲುಕ್ವಾರಿಯಲ್ಲಿನ ಸ್ಫೋಟ ಪ್ರಕರಣ; ಸಮಗ್ರ ತನಿಖೆಗೆ ಹೆಚ್ಡಿಕೆ ಆಗ್ರಹ
ಬೆಂಗಳೂರು: ಅಬ್ಬಲಗೆರೆಯ ಹುಣಸೋಡು ಗ್ರಾಮದ ಕಲ್ಲುಕ್ವಾರಿಯಲ್ಲಿನ ಸ್ಫೋಟ ಘಟನೆ ಕುರಿತಂತೆ ಸಮಗ್ರ ತನಿಖೆ ನಡೆಸುವಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಈಕುರಿತಂತೆ ಟ್ವೀಟ್ ಮಾಡಿರುವ ಅವರು, ಘಟನೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಜಿಲಿಟಿನ್ ಕಡ್ಡಿಗಳ ಸ್ಫೋಟದಿಂದ ಅನೇಕ ಕಾರ್ಮಿಕರು ಸಾವು ಕಂಡಿರುವುದು ಅತ್ಯಂತ ನೋವಿನ ಸಂಗತಿ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದವರು ಪ್ರಾರ್ಥಿಸಿದ್ದಾರೆ. ಶಿವಮೊಗ್ಗದ ಅಬ್ಬಲಗೆರೆಯ ಹುಣಸೋಡು ಗ್ರಾಮದ ಕಲ್ಲುಕ್ವಾರಿಯಲ್ಲಿ ಜಿಲಿಟಿನ್ ಕಡ್ಡಿಗಳ ಸ್ಫೋಟದಿಂದ ಅನೇಕ ಕಾರ್ಮಿಕರು ಸಾವು ಕಂಡಿರುವುದು ಅತ್ಯಂತ ನೋವಿನ ಸಂಗತಿ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ.1/2 — H D Kumaraswamy (@hd_kumaraswamy) January 22, 2021 ಕಲ್ಲು ಕ್ವಾರಿಯಲ್ಲಿ ನಡೆದ ಈ ಸ್ಫೋಟದುರಂತದ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಬೇಕು. ಬಡ ಕಾರ್ಮಿಕರ ಜೀವ ಹರಣಕ್ಕೆ, ಈ ದುರ್ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ…
ಹುಣಸೋಡು ಬ್ಲಾಸ್ಟ್ ಕೇಸ್; ಹಲವರನ್ನು ವಶಕ್ಕೆ ಪಡೆದ ಪೊಲೀಸರು
ಶಿವಮೊಗ್ಗ: ಮಲೆನಾಡಿನ ಹುಣಸೋಡು ಕಲ್ಲು ಗಣಿಗಾರಿಕೆ ಸ್ಥಳದಲ್ಲಿ ಸಂಭವಿಸಿದ ಭೀಕರ ಸ್ಫೋಟದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇಂದು ಬೆಳ್ಳಂಬೆಳಿಗ್ಗೆಯೇ ಕಾರ್ಯಾಚರಣೆ ಕೈಗೊಂಡ ಪೊಲೀಸರು ಕೆಲವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಕೈಗೊಂಡಿದ್ದಾರೆ. ಕಲ್ಲು ಗಣಿಗಾರಿಕೆಗೆ ನಂಟು ಹೊಂದಿದ್ದಾರೆನ್ನಲಾದ ಗುತ್ತಿಗೆದಾರ ಸುಧಾಕರ್ ಎಂಬ ವ್ಯಕ್ಕಿ ಹಾಗೂ ಸ್ಥಳೀಯ ರಾಜಕೀಯ ಮುಖಂಡ ನರಸಿಂಹ ಎಂಬವರನ್ನೂ ಇಂದು ಬೆಳಿಗ್ಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ನಡುವೆ, ಈ ಪ್ರದೇಶದಲ್ಲಿ ನಡೆಯುತ್ತಿದ್ದುದು ಅಕ್ರಮ ಗಣಿಗಾರಿಕೆ ಎಂಬ ಆರೋಪ ಕೇಳಿಬರುತ್ತಿದೆ. ಅಷ್ಟೇ ಅಲ್ಲ, ಅಷ್ಟೋಂದು ಪ್ರಮಾಣದಲ್ಲಿ ಸ್ಪೋಟಕ ತರಿಸಲು ಹಾಗೂ ಸಂಗ್ರಹಣೆಗೆ ಅನುಮಾತಿ ನೀಡಲಾಗಿತ್ತೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಶಿವಮೊಗ್ಗ ಸ್ಫೋಟ ಪ್ರಕರಣ; ಸಮರ್ಪಕ ತನಿಖೆಗೆ ಸಿಎಂ ಆದೇಶ
ಬೆಂಗಳೂರು: ಶಿವಮೊಗ್ಗದ ಹುಣಸೋಡು ಬಳಿ ರಾತ್ರಿ ಸಂಭವಿಸಿದ ಭೀಕರ ಸ್ಫೋಟದ ಕುರಿತಂತೆ ಉನ್ನತ ಮಟ್ಟದ ತನಿಖೆ ಆರಂಭವಾಗಿದೆ. ಶಿವಮೊಗ್ಗ ಜಿಲ್ಲೆಯ ಅಧಿಕಾರಿಗನ್ನು ಮಾಹಿತಿ ಪಡೆದಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಘಟನೆ ಬಗ್ಗೆ ಸಮರ್ಪಕ ತನಿಖೆಗೆ ಸೂಚಿಸಿದ್ದಾರೆ. ಇದೇ ವೇಳೆ, ಶಿವಮೊಗ್ಗದ ಹುಣಸೋಡು ಬಳಿ ನಿನ್ನೆ ರಾತ್ರಿ ಸಂಭವಿಸಿದ ಭಾರೀ ಅನಾಹುತದಲ್ಲಿ ಅನೇಕ ಮಂದಿ ಸಾವನ್ನಪ್ಪಿದ್ದ ಸುದ್ದಿ ತೀವ್ರ ಆಘಾತಕಾರಿ ಹಾಗೂ ದುರದೃಷ್ಟಕರ ಎಂದು ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ. ಹಿರಿಯ ಅಧಿಕಾರಿಗಳೊಂದಿಗೆ ನಿನ್ನೆ ತಡರಾತ್ರಿಯಿಂದಲೇ ಸಂಪರ್ಕದಲ್ಲಿದ್ದು, ಅಗತ್ಯ ರಕ್ಷಣಾ ಕಾರ್ಯಾಚರಣೆಗೆ ತಂಡಗಳನ್ನು ಈಗಾಗಲೇ ರವಾನಿಸಲಾಗಿದೆ ಎಂದವರು ತಿಳಿಸಿದ್ದಾರೆ. ಶಿವಮೊಗ್ಗದ ಹುಣಸೋಡು ಬಳಿ ನಿನ್ನೆ ರಾತ್ರಿ ಸಂಭವಿಸಿದ ಭಾರೀ ಅನಾಹುತದಲ್ಲಿ ಅನೇಕ ಮಂದಿ ಸಾವನ್ನಪ್ಪಿದ್ದ ಸುದ್ದಿ ತೀವ್ರ ಆಘಾತಕಾರಿ ಹಾಗೂ ದುರದೃಷ್ಟಕರ. ಹಿರಿಯ ಅಧಿಕಾರಿಗಳೊಂದಿಗೆ ನಿನ್ನೆ ತಡರಾತ್ರಿಯಿಂದಲೇ ಸಂಪರ್ಕದಲ್ಲಿದ್ದು, ಅಗತ್ಯ ರಕ್ಷಣಾ ಕಾರ್ಯಾಚರಣೆಗೆ ತಂಡಗಳನ್ನು ಈಗಾಗಲೇ ರವಾನಿಸಲಾಗಿದೆ. (1/2) —…
ಶಿವಮೊಗ್ಗ ಸ್ಫೋಟ ಪ್ರಕರಣ; ಘಟನಾ ಸ್ಥಳವನ್ನು ಸೀಲ್’ಡೌನ್ ಮಾಡಿದ ಪೊಲೀಸರು
ಶಿವಮೊಗ್ಗ: ಶಿವಮೊಗ್ಗ ಬಳಿ ಸಂಭವಿಸಿದ ಭೀಕರ ಸ್ಫೋಟದ ದುರಂತ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಕಳೆದ ರಾತ್ರಿ ಸಂಭವಿಸಿರುವ ಈ ಸ್ಫೋಟ ಘಟನೆಯ ಸ್ಥಳವಾದ ಜಲ್ಲಿ ಕ್ರಷರ್ ಸುತ್ತಮುತ್ತ ಪ್ರದೇಶಗಳನ್ನು ಪೊಲೀಸರು ಸೀಲ್ ಡೌನ್ ಮಾಡಿದ್ದಾರೆ. ರಾತ್ರಿ ಸುಮಾರು 10.30ರ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದ್ದು ಸ್ಫೋಟದ ರಭಸಕ್ಕೆ ಲ್ಡಿಂಆಮೇಟ್ ತುಂಬಿದ್ದ ಲಾರಿ ಛಿದ್ರವಾಗಿದೆ. ಅಕಕಪಕ್ಕದಲ್ಲಿದ್ದ ಕಾರ್ಮಿಕರ ದೇಹಗಳೂ ಛಿದ್ರವಾಗಿ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು ಯಾರೆಲ್ಲಾ ಸಾವನ್ನಪ್ಪಿದ್ದಾರೆ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ರಾತ್ರಿ ಘಟನೆ ನಡೆಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿಬಂದು ರಕ್ಷಣಾ ಪರಿಹಾರ ಕಾರ್ಯಾಚರಣೆ ಕೈಗೊಂಡರು. ಆದರೆ ಅಲ್ಲಿನ ಪರಿಸರ ಹಾಗೂ ರಾತ್ರಿಯ ಸ್ಥಿತಿಯಿಂದಾಗಿ ಕಾರ್ಯಾಚರಣೆ ಕಷ್ಟ ಸಾಧ್ಯವಾಯಿತೆನ್ನಲಾಗಿದೆ.
ಜಲ್ಲಿ ಕ್ರಷರ್ ಬಳಿ ಭೀಕರ ಸ್ಫೋಟ; 8 ಕಾರ್ಮಿಕರು ದುರ್ಮರಣ
ಬೆಳ್ಳಂಬೆಳಗ್ಗೆಯೇ ಭೀಕರ ದುರಂತದ ಸುದ್ದಿ ಕೇಳಿ ಇಡೀ ಕರುನಾಡು ಬೆಚ್ಸಿ ಬಿದ್ದಿದೆ. ಶಿವಮೊಗ್ಗ ಜಿಲೀಯಾದ್ಯಂತ ಬುಧವಾರ ರಾತ್ರಿ ಭಾರೀ ಸ್ಫೋಟದೊಂದಿಗೆ ಭೂಕಂಪನದ ಅನುಭವವಾಗಿತ್ತು. ಭೂಕಂಪ ಸಂಭವಿಸಿದೆ ಎಂದೇ ಜನ ಭಯಭೀತರಾಗಿದ್ದರು. ಆದರೆ ಆ ಹೊತ್ತಿಗೆ ಶಿವಮೊಗ್ಗ ಸಮೀಪದ ಅಬ್ಬಲಗೆರೆ- ಹುಣಸೋಡು ಮಧ್ಯೆ ಇರುವ ಜಲ್ಲಿ ಕ್ರಷರ್ ಬಳಿ ಸ್ಫೋಟಕ ಸಿಡಿದು ಭಾರೀ ಅನಾಹುತ ಸಂಭವಿಸಿದೆ. ಸಂಗ್ರಹಿಸಿಟ್ಟಿದ್ದ ಭಾರಿ ಪ್ರಮಾಣದ ಡೈನಾಮೆಟ್ ಸ್ಪೋಟಿಸಿದ ಪರಿಣಾಮ ಬಿಹಾರ ಮೂಲದ 15 ಕಾರ್ಮಿಕರು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಕಲ್ಲು ಗಣಿಗಾರಿಕೆಗಾಗಿ ಲಾರಿಯಲ್ಲಿ ತಂದಿದ್ದ 50 ಡೈನಾಮೆಟ್ ಬಾಕ್ಸ್ ಗಳನ್ನು ಒಂದೆಡೆ ಇಡಲಾಗಿತ್ತು. ಈ ಫೋಟಕಗಳು ಸಿಡಿದು 15 ಮಂದಿ ಬಿಹಾರ ಮೂಲದ ಕಾರ್ಮಿಕರು ಮೃತಪಟ್ಟಿರಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಭೂಮಿ ಕಂಪಿಸಿದ ಅನುಭವವಾದ ಸಮಯದಲ್ಲೇ ಈ ಘಟನೆ ನಡೆದಿದೆ. ಈ ಸ್ಪೋಟದಿಂದಲೇ ಭೂಕಂಪನದ ಅನುಭವವಾಗಿರಬಹುದೆಂದು ಹೇಳಲಾಗುತ್ತಿದೆ.