‘ರೈತರೊಂದಿಗೊಂದು ದಿನ’ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಕರ್ಷಣೆ

ಬೆಂಗಳೂರು: ಕೃಷಿ ಸಚಿವರಾಗಿರುವ ಬಿ.ಸಿ.ಪಾಟೀಲ್ ಚಿತ್ರನಟ, ನಿರ್ದೇಶಕ, ನಿರ್ಮಾಪಕ ಕೂಡ ಹೌದು. ಹೀಗಾಗಿ ಬಿ.ಸಿ.ಪಾಟೀಲರೊಂದಿಗೆ ಚಿತ್ರರಂಗದ‌ ನಂಟು ಸಹಜವೇ. ಇದೀಗ ಬಿ.ಸಿ.ಪಾಟೀರು ಕೃಷಿಯಲ್ಲಿ ತರುತ್ತಿರುವ ನೂತನ ಬದಲಾವಣೆ ಹಾಗೂ ರೈತರ ಅಭಿವೃದ್ಧಿಗಿನ‌ ಚಿಂತನೆಗಳನ್ನು ಮೆಚ್ಚಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ , ಕೃಷಿ ಸಚಿವರು ರೂಪಿಸಿರುವ “ರೈತರೊಂದಿಗೊಂದು ದಿನ” ಕಾರ್ಯಕ್ರಮದಲ್ಲಿ ಭಾಗಿಯಾಗಲು ನಿರ್ಧರಿಸಿದ್ದಾರೆ. ನಟ ದರ್ಶನ್ ‘ರೈತರೊಂದಿಗೊಂದು ದಿನ’ ಕಾರ್ಯಕ್ರಮದಲ್ಲಿ ಭಾಗಿಯಾಗುವ ಬಗ್ಗೆ ಸದ್ಯದಲ್ಲಿಯೇ ದಿನಾಂಕ ಪ್ರಕಟಿಸಲಾಗುವುದು ಎಂದು ಕೃಷಿ ಸಚಿವರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

ಪತಿಯಿಂದ ಡೈವೋರ್ಸ್ ಪಡೆಯಲು ಈ ತಾರೆ ಕೊಟ್ಟಿದ್ದು 1248 ಕೋಟಿ ರೂ.

ವಿಚ್ಛೇದನ ಪ್ರಕ್ರಿಯೆ ಸಂದರ್ಭದಲ್ಲಿ ಪತಿಯು ಪತ್ನಿಗೆ ಪರಿಹಾರ ಅಥವಾ ಜೀವನಾಂಶ ಕೊಡಬೇಕಾದದ್ದು ಸಾಮಾನ್ಯ. ಆದರೆ ಈ ಪ್ರಕರಣದಲ್ಲಿ ಆ ರೀತಿ ಅಲ್ಲ. ಇಲ್ಲಿ ಪತ್ನಿಯೇ ತನ್ನ ಪತಿಗೆ ದಾಂಪತ್ಯದಿಂದ ಬಿಡುಗಡೆಯಾದ ಸಂದರ್ಭದಲ್ಲಿ ಅಂದರೆ ಡೈವೋರ್ಸ್ ವೇಳೆ ಬರೋಬ್ಬರಿ 1248 ಕೋಟಿ ರೂಪಾಯಿ ಪರಿಹಾರ ನೀಡಿದ್ದಾರೆ. ಈಕೆ ಹಾಲಿವುಡ್​ ಖ್ಯಾತ ಗಾಯಕಿ ಅಡೆಲೆ. ತನ್ನ ಪತಿ ಸೈಮೆನ್​ ಕನ್ಕಿಗೆ ವಿಚ್ಛೇದನ ನೀಡಿದ್ದಾರೆ. ಈ ವಿಚ್ಛೇದನಕ್ಕಾಗಿ 1248 ಕೋಟಿ ರೂಪಾಯಿ ಪರಿಹಾರ ನೀಡಿ ವಿಶ್ವದ ಗಮನಸೆಳೆದಿದ್ದಾರೆ. ಹಾಲಿವುಡ್ ಸಿಂಗರ್ ಅಡೆಲೆ ಮತ್ತು ಮತ್ತು ಸೈಮನ್​​ 2011ರಲ್ಲಿ ಡೇಟಿಂಗ್​ ಆರಂಭಿಸಿದ್ದರಂತೆ. ಅನಂತರ ಒಂದು ವರ್ಷದಲ್ಲಿ ಈ ಜೋಡಿಗೆ ಗಂಡು ಮಗು ಜನಿಸಿದೆ. ಆದರೂ ಇವರಿಬ್ಬರು ವಿವಾಹವಾಗಿದ್ದು 2016ರಲ್ಲಿ. ಕೆಲ ಸಮಯ ಸಂತಸದಿಂದ ಇದ್ದ ಈ ದಂಪತಿ ಮಧ್ಯೆ ಅನಂತರ ಅದೇನಾಯಿತೋ ಗೊತ್ತಿಲ್ಲ. ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿ ಆಗಾಗ್ಗೆ ಜಗಳ ಏರ್ಪಡುತ್ತಿತ್ತು.…

ರೈತರ ಪ್ರತಿಭಟನೆ ಹಿನ್ನೆಲೆ; ಬೆಂಗಳೂರು ತುಂಬೆಲ್ಲಾ ಖಾಕಿ ಬಂದೋಬಸ್ತ್

ಬೆಂಗಳೂರು: ದೆಹಲಿಯಲ್ಲಿನರೈತರ ಪ್ರತಿಭಟನೆಯನ್ನು ಬೆಂಬಲಿಸಿ ಗಣರಾಜ್ಯೋತ್ಸವ ದಿನವಾದ ಮಂಗಳವಾರ ರಾಜ್ಯದಲ್ಲೂ ರೈತರು ಟ್ರಾಕ್ಟರ್ ಪೆರೇಡ್ ನಡೆಸಲು ವಿವಿಧ ಸಂಘಟನೆಗಳು ನಿರ್ಧರಿಸಿವೆ. ರಾಜ್ಯದ ವಿವಿಧೆಡೆಯಿಂದ ಆಗಮಿಸಲಿರುವ ರೈತರು ಮುಂಜಾನೆಯೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಜಮಾಯಿಸಲಿದ್ದಾರೆ. ವಿವಿಧೆಡೆಯಿಂದ ಹಲವು ತಂಡಗಳಲ್ಲಿ ಮೆರವಣಿಗೆ ನಡೆಸಿ ರೈತ ನಾಯಕ ಕೊಇಹಲ್ಲಿ ಚಂದ್ರಶೇಖರ್ ನೇತೃತ್ವದಲ್ಲಿ ಫ್ರೀಡಂ ಪಾರ್ಕ್​​​ ಸಮಾವೇಶಗೊಳ್ಳಲಿದೆ. ರೈತರ ಈ ಪ್ರತಿಭಟನೆ ಹಿನ್ನೆಲೆ ಬೆಂಗಳೂರು ನಗರದಾದ್ಯಂತ ಪೊಲೀಸರು ಬಿಗಿ ಬಂದೋಬಸ್ತ್​​ ವ್ಯವಸ್ಥೆ ಮಾಡಿದ್ದಾರೆ. ಸುಮಾರು 2 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಅಖಾಡದಲ್ಲಿ ಕಿಸಾನ್ ಕಾಂಗ್ರೇಸ್ ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ರಾಜ್ಯದಲ್ಲಿ ಸಚಿನ್ ಮಿಗಾ ನೇತೃತ್ವದಲ್ಲಿ ಸರಣಿ ಪ್ರತಿಭಟನೆಗಳನ್ನು ನಡೆಸಿರುವ ಕಿಸಾನ್ ಕಾಂಗ್ರೆಸ್, ಜನವರಿ 26ರಂದು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ಹೋರಾಟವನ್ನು ಯಶಸ್ವಿಗೊಳಿಸಲು ಪಣತೊಟ್ಟಿದೆ. ಈ…

ಭೀಕರ ಅಪಘಾತದಲ್ಲಿ ಆರೆಸ್ಸೆಸ್ ನಾಯಕ ಸುಧಾಕರ್ ದುರ್ಮರಣ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ನಾಯಕ ಸುಧಾಕರ ದೇಶಪಾಂಡೆ ವಿಧಿವಶರಾಗಿದ್ದಾರೆ. ಬೀದರ್ ಜಿಲ್ಲೆ, ಭಾಲ್ಕಿ ಸಮೀಪ ಭಾತಂಬ್ರಾ ರಸ್ತೆಯಲ್ಲಿ ಬೈಕ್ ಹಾಗೂ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸುಧಾಕರ ದೇಶಪಾಂಡೆ ಅವರು ವಿಧಿವಶರಾಗಿದ್ದಾರೆ. ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್ ಸಹಿತ ಸಂಘದ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಇವರು ಬೈಕ್’ನಲ್ಲಿ ತೆರಳುತ್ತಿದ್ದಾಗ ಬಸ್ ಡಿಕ್ಕಿಯಾಗಿದೆ. ಸುಧಾಕರ್ ದೇಶಪಾಂಡೆ ಅವರು ಸ್ಥಳದಲ್ಲೇ ಕೊಂಯುಸಿರೆಳೆದಿದ್ದಾರೆ. ಅವರ ಜೊತೆಗಿದ್ದ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸ್ಯಾಂಡಲ್’ವುಡ್’ನಲ್ಲೊಂದು ‘ಬಳೆಪೇಟೆ’; ಟೀಸರ್ ಸದ್ದು

ಉದಯ ನ್ಯೂಸ್ ನಿರೊಪಕರಾಗಿದ್ದ ಪ್ರಮೋದ್ ಬೋಪಣ್ಣ ಅಭಿನಯದ ‘ಬಳೆಪೇಟೆ’ ಇದೀಗ ಕನ್ನಡ ಸಿನಿಮಾಲೋಕದಲ್ಲಿ ಕುತೂಹಲದ ಚಿತ್ರ. ರಿಷಿಕೇಶ್ ಅವರ ಚೊಚ್ಚಲ ಚಿತ್ರ “ಬಳೆಪೇಟೆ” ಟೀಸರ್ ಬಿಡುಗಡೆಯಾಗಿದ್ದು ಸ್ಯಾಂಡಲ್’ವುಡ್ ನಲ್ಲಿ ಸದ್ದು ಮಾಡುತ್ತಿದೆ. ‘ಸೈಕೋ’ ಸಿನಿಮಾ ಖ್ಯಾತಿಯ ಅನಿತಾ ಭಟ್, ಪ್ರಮೋದ್ ಬೋಪಣ್ಣ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.

‘ಫಾರ್ಮಾ.ಡಿ’ ಪರೀಕ್ಷೆಯಲ್ಲಿ 28 ರ್‍ಯಾಂಕ್’‌ಗಳು ಕರಾವಳಿ ಶಿಕ್ಷಣ ಸಂಸ್ಥೆ ಮಡಿಲಿಗೆ

ಬ್ಯಾಂಕಿಂಗ್ ಹಬ್ ಎಂದೇ ಗುರುತಾಗಿದ್ದ ಬಂದರು ನಗರಿ ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ ಕಾಶಿಯಾಗಿಯೂ ಗಮನ ಸೆಳೆಯಿತ್ತಿದೆ. ಅದಕ್ಕೆ ಸಾಕ್ಷಿ ಎಂಬಂತಿದೆ ರಾಜ್ಯದ ಪ್ರತಿಷ್ಟಿತ ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಗಳ ಸಾಧನೆ. ಮಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ 2020ರ ಸೆಪ್ಟೆಂಬರ್‌ನಲ್ಲಿ ನಡೆಸಿದ ಅಂತಿಮ ‘ಫಾರ್ಮಾ.ಡಿ’ ಪರೀಕ್ಷೆಯಲ್ಲಿ ಬಹುತೇಕ ರ್‍ಯಾಂಕ್’‌ಗಳನ್ನು ಕರಾವಳಿ ಶಿಕ್ಷಣ ಸಂಸ್ಥೆ ಬಾಚಿಕೊಂಡಿದೆ. ಮಂಗಳೂರು ಹೊರವಲಯದ ವಾಮಂಜೂರಿನಲ್ಲಿರುವ ಕರಾವಳಿ ಫಾರ್ಮಸಿ ಕಾಲೇಜು ವಿದ್ಯಾರ್ಥಿಗಳು ಬರೋಬ್ಬರಿ 28 ರ್‍ಯಾಂಕ್’‌‌ಗಳನ್ನು ಗಳಿಸಿ ಇಡೀ ರಾಜ್ಯದ ಗಮನಸೆಳೆದಿದ್ದಾರೆ. ಕಳೆದ ತಿಂಗಳಷ್ಟೇ ಮಂಗಳೂರು ವಿಶ್ವವಿದ್ಯಾಲಯ ಪ್ರಕಟಿಸಿದ್ದ 2020ರ ಬಿಎಸ್‌ಸಿ ಫ್ಯಾಶನ್ ಡಿಸೈನ್ ಪದವಿ ಪರೀಕ್ಷೆಗಳಲ್ಲಿ ಕರಾವಳಿ ಕಾಲೇಜು ಶೇಕಡಾ 100 ಫಲಿತಾಂಶ ಗಿಟ್ಟಿಸಿಕೊಂಡು ಶೈಕ್ಷಣಿಕ ದಾಖಲೆಯನ್ನು ಮುಂದುವರಿಸಿಕೊಂಡು ಬಂದ ಕೀರ್ತಿಗೆ ಪಾತ್ರವಾಗಿತ್ತು. ಇದೀಗ ಫಾರ್ಮಾ.ಡಿ ಪರೀಕ್ಷೆಯಲ್ಲೂ ಬರೋಬ್ಬರಿ 28 ರ್‍ಯಾಂಕ್’‌‌ಗಳನ್ನು ಇದೇ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಬಾಚಿಕೊಳ್ಳುವ ಮೂಲಕ ಕರಾವಳಿ…