ಅಕ್ರಮ ಗಣಿಗಾರಿಕೆಯನ್ನು ಸಕ್ರಮಗೊಳಿಸಲು ಸರ್ಕಾರ ಚಿಂತನೆ; ನಿರಾಣಿ

ಯಾದಗಿರಿ: ಕಾನೂನಿನ ವ್ಯಾಪ್ತಿಗೆ ಒಳಪಟ್ಟು ಹೊಸ ನಿಯಮಗಳ ಅಡಿಯಲ್ಲೇ ಅಕ್ರಮ ಗಣಿಗಾರಿಕೆಯನ್ನು ಸಕ್ರಮಗೊಳಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ಹೇಳಿದ್ದಾರೆ. ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇದೇ 27 ಮತ್ತು 28ರಂದು ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ. ಅಕ್ರಮ ಗಣಿಗಾರಿಕೆಯನ್ನು ಕಾನೂನಿನ ವ್ಯಾಪ್ತಿಯಲ್ಲಿ ಸಕ್ರಮಗೊಳಿಸಲು ಹೊಸ ನಿಯಮಗಳನ್ನು ಜಾರಿ ಮಾಡುವ ಚಿಂತನೆ ಇದೆ ಎಂದು ತಿಳಿಸಿದರು. ಹಾಲಿ ಇರುವ ಕಾಯ್ದೆಗೆಗೂ ತಿದ್ದುಪಡಿ ಮಾಡಿ ರಾಜ್ಯದಲ್ಲಿ ಹೊಸದಾಗಿ ಗಣಿ ಕಾಯ್ದೆ ಜಾರಿ ಮಾಡಲಾಗುವುದು ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. ಕರ್ನಾಟಕದಲ್ಲಿ ಮಾತ್ರ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿಲ್ಲ. ದೇಶಾದ್ಯಂತ ಇದು ನಡೆಯುತ್ತಲೇ ಇದೆ.ಇದನ್ನು ಯಾವ ರೀತಿ ತಡೆಗಟ್ಟಬೇಕು ಎಂಬುದರ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಸರ್ಕಾರ ಸೂಕ್ತವಾದ ನಿರ್ಧಾರವನ್ನು…

ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆಯ ರೊಚ್ಚು; ಕೆಂಪುಕೋಟೆಗೆ ನುಗ್ಗಿದ ಉದ್ರಿಕ್ತ ಗುಂಪು

ದೆಹಲಿ: ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ರೈತರ ಪ್ರತಿಭಟನೆ ಗಣರಾಜ್ಯ ದಿನವಾದ ಇಂದು ಉಗ್ರ ಸ್ವರೂಪ ತಾಳಿತು. ಈ ವರೆಗೂ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತ ಸಂಘಟನೆಗಳು ಹಾಗೂ ವಿವಿಧ ಸಂಘಗಳು ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಟ್ರಾಕ್ಟರ್ ಪೆರೇಡ್ ನಡೆಸುವುದಾಗಿ ಹೇಳಿಕೊಂಡಿದ್ದರು. ಶಾಂತಿಯುತ ಪ್ರತಿಭಟನೆ ನಡೆಸುವುದಾಗೊ ಸರ್ಕಾರದ ಮುಂದೆ ಹೇಳಿಕೊಂಡಿದ್ದ ಸಂಘಟನೆಗಳು ಅಬುಮತಿಯನ್ನೂ ಕೇಳಿತ್ತು. ಆದರೆ ದೆಹಲಿಯಲ್ಲಿ ನಡೆದದ್ದೇ ಬೇರೆ. ಹೋರಾಟಗಾರರು ಮುಖ್ಯ ರಸ್ತೆಗಳಲ್ಲಿ ಸೀಮಿತವಾಗಬೇಕಿದ್ದ ಈ ಹೋರಾಟ ತನ್ನ ದಿಕ್ಕನ್ನೇ ಬದಲಿಸಿದೆ. ಏಕಾಏಕಿ ಉದ್ರಿಕ್ತರ ಗುಂಪು ಐತಿಹಾಸಿಕ ತಾಣ ಕೆಂಪುಕೋಟೆಗೆ ನುಗ್ಗಿತು. ಕೆಂಪುಕೋಟೆ ಹೈ ಸೆಕ್ಯೂರಿಟಿ ಇರುವ ಸ್ಥಳ. ಇಂದಿನ ಪ್ರತಿಭಟನೆ ಹಿನ್ನೆಲೆಯಲ್ಲಿ ಈ ಕೆಂಪುಕೋಟೆಗೆ ಸುಮಾರು ಐದು ಸುತ್ತುಗಳ ಭದ್ರತೆಯೊಂದಿಗೆ ಪೊಲೀಸರು ಭದ್ರತೆಯ ಚಕ್ರವ್ಯೂಹವನ್ನೇ ನಿರ್ಮಿಸಿದ್ದರು. ಈ ಭದ್ರತೆಯನ್ನೇ ಬೇಧಿಸಿ ಹೋರಾಟಗಾರರ ಜೊತೆಗಿದ್ದ ಗುಂಪು ಕೆಂಪುಕೋಟೆಗೆ ನುಗ್ಗಿ ಘೋಷಣೆ ಕೂಗಿತು. ಪ್ರತ್ಯೇಕ-ಪ್ರತಯೇಕ…

ದೆಹಲಿ ರಾಜಪಥ್​​ನಲ್ಲಿ ಗಮನಸೆಳೆದ ಗಣರಾಜ್ಯೋತ್ಸವ ಪರೇಡ್​

ದೆಹಲಿ: 72ನೇ ಗಣರಾಜ್ಯೋತ್ಸವ ಅಂಗವಾಗಿ ದೆಹಲಿಯ ರಾಜಪಥ್​​ನಲ್ಲಿ ಗಣರಾಜ್ಯೋತ್ಸವ ಪರೇಡ್​ ಗಮನಸೆಳೆಯಿತು. ರಾಷ್ಟ್ರಪತಿ ರಾಮನಾಥ್​ ಕೋವಿಂದ್‌ ಅವರು ರಾಜ್​ಪಥ್‌ನಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ವಿಶೇಷ ಕಾರ್ಯಕ್ರಮಗಳು ನೆರವೇರಿದವು. ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಪಡೆಗಳ ಮುಖ್ಯಸ್ಥರು ಸೇರಿದಂತೆ ಸಿಡಿಎಸ್ ರಾವತ್ ಸಹಿತ ಹಲವು ಗಣ್ಯರು ಇದಕ್ಕೆ ಸಾಕ್ಷಿಯಾದರು.

ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ

ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಮಾನ್ಯ ನಗರಾಭಿವೃದ್ಧಿ ಸಚಿವ  ಬಿ.ಎ.ಬಸವರಾಜ ಅವರ 72 ನೇ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟಧ್ವಜಾರೋಹಣ ನೆರವೇರಿಸಿದರು. ಇದಕ್ಕೂ ಮೊದಲು ಮಹಾತ್ಮ ಗಾಂಧಿಜೀ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ಪೋಲಿಸ್, ಸೇವಾ ದಳ, ಸ್ಕೌಟ್ ಅಂಡ್‌ ಗೈಡ್ಸ್ ಪಥ ಸಂಚಲನದ ಗೌರವ ವಂದನೆ ಸ್ವೀಕರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಾವಣಗೆರೆ ಉತ್ತರ ಕ್ಷೇತ್ರದ ಶಾಸಕಎಸ್. ಎ.ರವೀಂದ್ರನಾಥ ವಹಿಸಿದ್ದರು ದಾವಣಗೆರೆ ಸಂಸದರಾದ ಜಿ.ಎಮ್. ಸಿದ್ದೇಶ್ವರ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು, ಭಾಗವಹಿಸಿದರು.

ಚಿಕ್ಕಬಳ್ಳಾಪುರದದಲ್ಲಿ 72ನೇ ಗಣರಾಜ್ಯೋತ್ಸವ ಸಮಾರಂಭ

ಚಿಕ್ಕಬಳ್ಳಾಪುರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 72ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಆದ ಮಾನ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಧ್ವಜಾರೋಹಣ ನೆರವೇರಿಸಿ, ಪೊಲೀಸ್ ತಂಡಗಳ ಗೌರವ ವಂದನೆ ಸ್ವೀಕರಿಸಿ ಭಾಷಣ ಮಾಡಿದರು. ಜಿಲ್ಲಾಧಿಕಾರಿ ಆರ್. ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಹಾಗೂ ಚುನಾಯಿತ ಪ್ರತಿನಿಧಿಗಳು ಹಾಜರಿದ್ದರು.

ಗಣರಾಜ್ಯೋತ್ಸವ ಸರಳ ಆಚರಣೆ; ಕೇಂದ್ರ ಸ್ಥಾನಗಳಲ್ಲಷ್ಟೇ ಅದ್ಧೂರಿ ಕ್ಷಣ

ದೆಹಲಿ: ದೇಶದಾದ್ಯಂತ ಗಣರಾಜ್ಯೋತ್ಸವ ಸಂಭ್ರಮ. ಆದರೆ ಈ ಬಾರಿ ಸರಳ ಆಚರಣೆ. ಬಹುತೇಕ ಕಡೆ ತ್ರಿವರ್ಣ ಧ್ವಜಾರೋಹಣ ಹಾಗೂ ಶುಭಾಷಯ ವಿನಿಮಯಗಳಿಗಷ್ಟೇ ಈ ಪ್ರಜಾಪ್ರಭುತ್ವದ ಹಬ್ಬವನ್ನು ಸೀಮಿತಗೊಳಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಸಮಸ್ತ ಜನತೆಗೆ ಶುಭಾಶಯ ಕೋರಿದ್ದಾರೆ. ಭಾರತದ ಜನತೆಗೆ ಗಣರಾಜ್ಯೋತ್ಸವ ದಿನದ ಶುಭಾಶಯಗಳು, ಜೈ ಹಿಂದ್ ಎಂದು ಮೋದಿಯ ಟ್ವೀಟ್ ಮಾಡಿದ್ದಾರೆ. देशवासियों को गणतंत्र दिवस की ढेरों शुभकामनाएं। जय हिंद! Wishing all the people of India a Happy #RepublicDay. Jai Hind! — Narendra Modi (@narendramodi) January 26, 2021 ಈ ನಡುವೆ ದೇಶದ ಕೇಂದ್ರ ಸ್ಥಾನ ದೆಹಲಿಯ ರಾಜಪಥದಲ್ಲಿ ಎಂದಿನಂತೆ ಸೇನಾ ಶಕ್ತಿ ಪ್ರದರ್ಶಿಸುವ ಪೆರೇಡ್ ಗಮನಸೆಳೆದಿದೆ. ಬೆಂಗಳೂರಿನ ಮಾಣೆಕ್ ಷಾ ಪರೇಡ್ ಗ್ರೌಂಡ್​ ಕೂಡಾ ಗಣರಾಜ್ಯೋತ್ಸವದ ಆಚರಣೆಯ ಅನನ್ಯ ಸಡಗರಕ್ಕೆ ಸಾಕ್ಷಿಯಾಯಿತು.

ಕಂಬಾರ, ಡಾ.ಬಿ.ಎಂ.ಹೆಗ್ಡೆಗೆ ಪದ್ಮ ವಿಭೂಷಣ ಪ್ರಶಸ್ತಿ

ದೆಹಲಿ ; ಕರ್ನಾಟಕದ ಐದು ಮಂದಿ ಸಾಧಕರನ್ನು ಪದ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಭಾರತ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, 2021ನೇ ಸಾಲಿನಲ್ಲಿ ಒಟ್ಟು 119 ಮಂದಿಯನ್ನು ಪದ್ಮಶ್ರೀ, ಪದ್ಮ ಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಾಹಿತ್ಯ ಕ್ಷೇತ್ರದಿಂದ ಡಾ.ಚಂದ್ರಶೇಖರ ಕಂಬಾರ ಅವರಿಗೆ ಪದ್ಮ ಭೂಷಣ ಹಾಗೂ ಆರೋಗ್ಯ ಕ್ಷೇತ್ರದಿಂದ ಡಾ.ಬಿ.ಎಂ.ಹೆಗ್ಡೆ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಕ್ರೀಡಾ ಕ್ಷೇತ್ರದಿಂದ ಕೆ.ವೈ. ವೆಂಕಟೇಶ್, ಕಲೆ ಮಾತಾ ಬಿ. ಮಂಜಮ್ಮ ಹಾಗೂ ಶಿಕ್ಷಣ ಕ್ಷೇತ್ರದಿಂದ ರಂಗಸ್ವಾಮಿ ಲಕ್ಷ್ಮೀ ನಾರಾಯಣ ಕಶ್ಯಪ್ ಅವರಿಗೆ ಪದ್ಮಶ್ರೀ ಸಿಕ್ಕಿದೆ. ಖ್ಯಾತ ಹಿನ್ನೆಲೆ ಗಾಯಕ ಎಸ್​.ಪಿ. ಬಾಲಸುಬ್ರಹ್ಮಣ್ಯ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಪ್ರಕಟಿಸಲಾಗಿದೆ. ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಅವರಿಗೆ ಪದ್ಮ ವಿಭೂಷಣ ಘೋಷಿಸಿರುವುದೂ ವಿಶೇಷ.