ಅನಂತ ಚತುರ್ದಶಿ ವ್ರತ; ಕೊಂಚಾಡಿ ಕಾಶೀ ಮಠದಲ್ಲಿ ವಿಶೇಷ ಕೈಂಕರ್ಯ

ಮಂಗಳೂರು : ಕಡಲ ತಡಿ ಮಂಗಳೂರಿನ ಪುಣ್ಯ ಕ್ಷೇತ್ರ ಕೊಂಚಾಡಿ ಶ್ರೀ ಕಾಶೀ ಮಠದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಗಮನ ಸೆಳೆಯುತ್ತಿವೆ.

ಶ್ರೀ ಅನಂತ ಚತುರ್ದಶಿ (ನೋಪಿ) ವ್ರತ ಪ್ರಯುಕ್ತ ಕೊಂಚಾಡಿ ಶ್ರೀ ಕಾಶೀ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿ ಸಹಿತ ಹಲವರು ಭಾಗಿಯಾದರು.

ಚಿತ್ರ : ಮಂಜು ನೀರೇಶ್ವಾಲ್ಯ

ಚಾತುರ್ಮಾಸ ವ್ರತ ಆಚರಿಸುತ್ತಿರುವ ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ಸಂಸ್ಥಾನದ ದೇವರ ಸಮ್ಮುಖದಲ್ಲಿ ವಿಶೇಷವಾಗಿ ಅನಂತ ಚತುರ್ದಶಿ ಕಲಶ ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿತು. ದೇವರಿಗೆ ವಿಶೇಷವಾಗಿ ತಯಾರಿಸಲ್ಪಟ್ಟ ನೈವೇದ್ಯ ಸಮರ್ಪಿಸಲಾಯಿತು.

ಇದನ್ನೂ ಓದಿ.. ಕೊಂಚಾಡಿ ಕಾಶೀ ಮಠದಲ್ಲಿ ದಶಮಸ್ಕಂದ ಹವನ; ಬುಧವಾರ ಸೀಮೋಲಂಘನ ಕೈಂಕರ್ಯ

 

Related posts