ಡ್ರಗ್ಸ್ ಕೇಸ್; ನಿರೂಪಕಿ ಅನುಶ್ರೀ ಮನೆಯಲ್ಲೂ ತಲ್ಲಣ

ಬೆಂಗಳೂರು: ರಾಜ್ಯದಲ್ಲಿನ ಡ್ರಗ್ ಮಾಫಿಯಾ ಬಗ್ಗೆ ಪೊಲೀಸರು ತನಿಖೆಯನ್ನು ಬಿರುಸುಗೊಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಿನಿಮಾ ತಾರೆಯರಿಗೂ ಈ ನಶಾ ಲೋಕದ ನಂಟು ಇರುವ ಸಂಗತಿಗಳು ಬೆಳಕಿಗೆ ಬರುತ್ತಿವೆ.

ನಟಿಯರಾದ ರಾಗಿಣಿ ಹಾಗೂ ಸಂಜನಾ ಬಂಧನಕ್ಕೊಳಗಾದ ನಂತರವಂತೂ ಈ ಪ್ರಕರಣದ ತನಿಖೆ ಕುತೂಹಲಘಟ್ಟಕ್ಕೆ ತಲುಪಿದೆ.

ಆದರೆ ಅನುಶ್ರೀ ಬಗ್ಗೆ..?

ನಟಿ ಹಾಗೂ ನಿರೂಪಕಿ ಅನುಶ್ರೀ ಅವರಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ ವಿಚಾರದ ನಂತರ ಬಗೆಬಗೆಯ ಚರ್ಚೆಗಳು ಸಾಗಿವೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದನ್ನು ಹರಿಯಬಿಟ್ಟಿರುವ ಅನುಶ್ರೀ, ಇತ್ತೀಚಿನ ಬೆಳವಣಿಗೆ ಬಗ್ಗೆ ನೋವು ವ್ಯಕ್ತಪಡಿಸಿದ್ದಾರೆ. ತನಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ ಎನ್ನುತ್ತಿರುವ ಅವರು, ತಾನು ಸಿಸಿಬಿ ನೋಟಿಸ್ ಹಿನ್ನೆಲೆಯಲ್ಲಿ ಪೊಲೀಸರೆದುರು ಹಾಜರಾದ ಮಾತ್ರಕ್ಕೆ ಅಪರಾಧಿಯಲ್ಲ, ಆರೋಪಿಯೂ ಅಲ್ಲ ಎಂದು ಸ್ಪಷ್ಟಪಡಿಸಿದ ಅನುಶ್ರೀ, ತಮ್ಮ ಬಗ್ಗೆ ಹರಿದಾಡುತ್ತಿರುವ ಸುದ್ದಿಯಿಂದಾಗಿ ಮನೆಯವರಿಗೂ ನೆಮ್ಮದಿ ಇಲ್ಲದಂತಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.

Related posts