ಟಿಕ್ ಟಾಕ್ ಸಹಿತ ನಿಷೇಧಿತ ಆಪ್ ಬಳಕೆ ಮುಂದುವರಿಸಬಹುದೇ? ಮುಂದೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ

ಬೆಂಗಳೂರು: ಚೀನೀ ಮೂಲದ ಸುಮಾರು 59 ಆ್ಯಪ್​ಗಳನ್ನು ನಿಷೇಧಿಸುವ ಮೂಲಕ ಡ್ರಾಗನ್ ರಾಷ್ಟ್ರಕ್ಕೆ ಭಾರತ ಸಖತ್ತಾಗಿಯೇ ಹೊಡೆತ ಕೊಟ್ಟಿದೆ. ಭಾರತದಲ್ಲಿ ಸುಮಾರು 10 ಕೋಟಿ ಜನರು ಬಳಸುತ್ತಿದ್ದ ಟಿಕ್ ಟಾಕ್ ಕೂಡಾ ನಿಷೇಧಕ್ಕೊಳಗಾಗಿದ್ದು ಚೀನಾ ಪ್ರಾಡಕ್ಟ್ ವಿರುದ್ಧ ಅಭಿಯಾನ ಆರಂಭಿಸುವವರು ಸಂತಸಗೊಂಡಿದ್ದಾರೆ. ಆದರೆ ಇದೀಗ ಈ ನಿಷೇಧಿತ ಆ್ಯಪ್​ಗಳ ಕಥೆಯೇನು ಎಂಬುದೇ ಎಲ್ಲರ ಕುತೂಹಲ.

ದೇಶದ ಭದ್ರತೆಯ ಕಾರಣವೊಡ್ಡಿ ಈ ಆ್ಯಪ್​ಗಳನ್ನು ನಿಷೇಧಿಸಲಾಗಿದೆ. ಇದರ ಮುಂದಿನ ಭಾಗವಾಗಿ ಸರ್ಕಾರವು ಈ ಆ್ಯಪ್​ಗಳನ್ನು ಇಂಟರ್ನೆಟ್ ಸರ್ವಿಸ್ ಪ್ರೊವೈಡರ್​ಗಳಿಗೆ ನೀಡುತ್ತದೆ. ಅನಂತರ ಭಾರತದಲ್ಲಿ ಪ್ಲೇಸ್ಟೋರ್’​ಗಳಿಂದ ಈ ಆ್ಯಪ್​ಗಳನ್ನು ಡೌನ್​ಲೋಡ್ ಮಾಡಿಕೊಳ್ಳುವುದಾಗಲೀ, ಅದನ್ನು ಇಂಟರ್ನೆಟ್ ಮೂಲಕ ಬಳಕೆ ಮಾಡಲಾಗಲೀ ಸಾಧ್ಯವಾಗದು. ಕೆಲವು ಆ್ಯಪ್​ಗಳನ್ನು ಆಫ್​ಲೈನ್​ ಬಳಕೆ ಮಾಡಬಹುದಾದರೂ, ಟಿಕ್ ಟಾಕ್, ಹೆಲೋ ಇತ್ಯಾದಿ ಆ್ಯಪ್​ಗಳನ್ನು ಇಂಟರ್ನೆಟ್ ಇಲ್ಲದೆ ಬಳಸಲು ಸಾಧ್ಯವಿಲ್ಲ. ಹಾಗಾಗಿ ಭಾರತದಲ್ಲಿ ಟಿಕ್ ಟಾಕ್ ಯುಗ ಅಂತ್ಯವಾಯಿತೆಂದೇ ಹೇಳಬಹುದು.

 

ನಿಷೇಧಿತ ಆ್ಯಪ್‌ಗಳ ಪಟ್ಟಿ ಹೀಗಿದೆ:

 • TikTok
 • Shareit
 • Kwai
 • UC Browser
 • Baidu map
 •  Shein
 • Clash of Kings
 • DU battery saver
 • Helo
 • Likee
 • YouCam makeup
 • Mi Community
 • CM Browers
 • Virus Cleaner
 • APUS Browser
 • ROMWE
 • Club Factory
 • Newsdog
 • Beutry Plus
 • WeChat
 • UC News
 • QQ Mail
 • Weibo
 • Xender
 • QQ Music
 • QQ Newsfeed
 • Bigo Live
 • SelfieCity
 • Mail Master
 • Parallel Space
 • Mi Video Call – Xiaomi
 • WeSync
 • ES File Explorer
 • Viva Video – QU Video Inc
 • Meitu
 • Vigo Video
 • New Video Status
 • DU Recorder
 • Vault- Hide
 • Cache Cleaner DU App studio
 • DU Cleaner
 • DU Browser
 • Hago Play With New Friends
 • Cam Scanner
 • Clean Master – Cheetah Mobile
 • Wonder Camera
 • Photo Wonder
 • QQ Player
 • We Meet
 • Sweet Selfie
 • Baidu Translate
 • Vmate
 • QQ International
 • QQ Security Center
 • QQ Launcher
 • U Video
 • V fly Status Video
 • Mobile Legends
 • DU Privacy

 

Related posts