ಸುರೇಶ್‌ ಅಂಗಡಿ ನಿಧನಕ್ಕೆ ಡಿಸಿಎಂ ಅಶ್ವತ್ಥನಾರಾಯಣ ಕಂಬನಿ

ಬೆಂಗಳೂರು: ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಅವರ ನಿಧನ ನನಗೆ ತೀವ್ರ ದಿಗ್ಬ್ರಮೆಯಾಗಿದೆ. ತೀವ್ರ ಆಘಾತವಾಗಿದೆ ಎಂದು ಡಿಸಿಎಂ ಅಶ್ವತ್ಥನಾರಾಯಣ ದುಃಖ ತೋಡಿಕೊಂಡಿದ್ದಾರೆ.

ನಮ್ಮ ಪಕ್ಷ ಓರ್ವ ಉನ್ನತ, ಉತ್ತಮ ನಾಯಕನ್ನು ಹಾಗೂ ಅತ್ಯಂತ ನಿಷ್ಟಾವಂತ ಕಟ್ಟಾಳುವನ್ನು ಕಳೆದುಕೊಂಡಿದೆ. ಬೆಳಗಾವಿ ಮಾತ್ರವಲ್ಲದೆ ಇಡೀ ನಾಡಿನ ನೆಚ್ಚಿನ ನಾಯಕರಾಗಿದ್ದರು, ನಮಗೆ ಹಿರಿಯರಾಗಿ ಮಾರ್ಗದರ್ಶನ ಮಾಡುತ್ತಿದ್ದರು. ರಾಜಕಾರಣದಲ್ಲಿ ಅಜಾತಶತ್ರುವಾಗಿದ್ದರು ಎಂದು ಅವರು ಬಣ್ಣಿಸಿದ್ದಾರೆ.

ವೈಯಕ್ತಿಕ ಜೀವನದಲ್ಲೂ ಶಿಸ್ತುಬದ್ಧರಾಗಿದ್ದರು. ಪ್ರತಿಯೊಬ್ಬರಿಗೂ ಮಾದರಿ ಎನಿಸುವಂಥ ವ್ಯಕ್ತಿತ್ವ ಹೊಂದಿದ್ದರು. ಇಂತಹ ಅಂಗಡಿಯರ ನಿಧನ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ಅಗಲಿಕೆಯನ್ನು ಭರಿಸುವುದು ನಮಗಾಗಲಿ, ನಮ್ಮ ಪಕ್ಷಕ್ಕಾಗಲಿ ಭರಿಸುವುದು ಕಷ್ಟ. ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.‌ ಅಶ್ವತ್ಥನಾರಾಯಣ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Related posts