ಬಿಜೆಪಿಯಲ್ಲಿ ಕೆಲಸ ಮಾಡಿದವರಿಗೆ ಹೆಚ್ಚಿನ ಜವಾಬ್ದಾರಿ; ಕಟೀಲ್ ಘೋಷಣೆ

ಬೆಂಗಳೂರು: ಬಿಜೆಪಿಯಲ್ಲಿ ಕೆಲಸ ಮಾಡಿದವರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗುತ್ತದೆ. ಅವರ ಕೆಲಸವನ್ನು ಗುರುತಿಸುವ ಕೆಲಸವನ್ನು ಪಕ್ಷ ಮಾಡುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಘೋಷಿಸಿದ್ದಾರೆ.

ಬೆಂಗಳೂರಿನ ನ್ಯೂ ತಿಪ್ಪಸಂದ್ರ ಮುಖ್ಯರಸ್ತೆಯ ಶ್ರೀ ಶಕ್ತಿಗಣಪತಿ ಕಲ್ಯಾಣಮಂಟಪದಲ್ಲಿ ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಯಾರನ್ನೂ ಕಡೆಗಣಿಸುವುದಿಲ್ಲ, ಯಾರನ್ನೂ ತುಳಿಯುವುದಿಲ್ಲ ಎಂಬ ವಿಚಾರವನ್ನು ಕಾರ್ಯಕರ್ತರು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಅಧಿಕಾರವು ಪರಿವರ್ತನೆ ತರುವುದಕ್ಕೆ ಸಾಧನ ಆಗಬೇಕು. ಪ್ರಕೋಷ್ಠಗಳ ಜವಾಬ್ದಾರಿ ಪಡೆದವರು ಇದನ್ನು ನೆನಪಿನಲ್ಲಿ ಇಡಬೇಕು ಎಂದ ನಳಿನ್‌ಕುಮಾರ್ ಕಟೀಲ್, ಸರ್ವ ವ್ಯಾಪಿ ಮತ್ತು ಸರ್ವ ಸ್ಪರ್ಶಿ ಆಗುವ ಪರಿಕಲ್ಪನೆ ಈಡೇರಲು ಪ್ರಕೋಷ್ಠಗಳು ಸರ್ವರನ್ನೂ ಪಕ್ಷಕ್ಕೆ ಜೋಡಿಸುವ ಕೆಲಸ ಮಾಡಬೇಕು ಎಂದು ಅವರು ಆಶಿಸಿದರು. ನಮ್ಮ ಪ್ರಕೋಷ್ಠದ ವ್ಯಾಪ್ತಿಯ ಸಮಸ್ಯೆ ಬಂದಾಗ ಅದನ್ನು ಪರಿಹರಿಸಬೇಕು ಎಂದು ತಿಳಿಸಿದರು.

Related posts