ಬೆಂಗಳೂರಿನಲ್ಲಿ ಜಾಗೃತಿ ಅಭಿಯಾನ.. ‘ಫಿಟ್ ಇಂಡಿಯಾ ಸೈಕ್ಲಥಾನ್’

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಆಯೋಜಿತವಾಗಿರುವ ಫಿಟ್ ಇಂಡಿಯಾ ಜಾಗೃತಿ ಅಭಿಯಾನ ಗಮನಸೆಳೆದಿದೆ.  ಕಬ್ಬನ್ ಪಾರ್ಕ್(ಹಡ್ಸನ್ ವೃತ್ತ)ದಿಂದ ಹಮ್ಮಿಕೊಂಡಿರುವ ಜಾಗೃತಿ ಅಭಿಯಾನ “ಫಿಟ್ ಇಂಡಿಯಾ ಸೈಕ್ಲಥಾನ್”ಗೆ ಬಿಬಿಎಂಪಿ ಆಡಳಿತಗಾರರು ಹಾಗೂ ಆಯುಕ್ತರು ಚಾಲನೆ ನೀಡಿದರು.

ಪ್ರಧಾನಮಂತ್ರಿಗಳ ಕನಸಾಗಿರುವ ಪಿಟ್ ಇಂಡಿಯಾನ ಅಭಿಯಾನದ ಅಂಗವಾಗಿ ಇಂದು ಪಾಲಿಕೆ ಹಾಗೂ ಬೆಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ಸೈಕ್ಲಥಾನ್ ಆಯೋಜನೆ ಮಾಡಲಾಗಿದೆ. ಪ್ರತಿಯೊಬ್ಬ ನಾಗರಿಕರೂ ಆರೋಗ್ಯವಾಗಿ, ದೈಹಿಕವಾಗಿ ಸದೃಢವಾಗಿರಬೇಕಾದರೆ ಪ್ರತಿನಿತ್ಯ ದೈಹಿಕ ಶಿಕ್ಷಣ ಬಹಳ ಮುಖ್ಯವಾಗಿರುತ್ತದೆ. ಆದ್ದರಿಂದ ಎಲ್ಲರೂ ಫಿಟ್ ಆಗಿರುವ ಮೂಲಕ ಆರೋಗ್ಯಕರವಾಗಿರಬೇಕು ಎಂದು ಆಯುಕ್ತರು ಹೇಳಿದವು.

ಇದೇ ವೇಳೆ, ಪಿಟ್ ಇಂಡಿಯಾ ಅಂಗವಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿಯು ಕೋವಿಡ್-19 ವಾರಿಯರ್ಸ್ ಗಳಾಗಿ ಕಾರ್ಯನಿರ್ವಹಿಸುವ ವೈದ್ಯರು, ಸಂಚಾರಿ ವಿಭಾಗದ ಪೊಲೀಸರು ಹಾಗೂ ಮಾರ್ಷಲ್ ಗಳನ್ನು ಗುರುತಿಸಿ 2,000 ರೂ. ಪ್ರೋತ್ಸಾಹ ಗೌರವ ಮೊತ್ತ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸೈಕ್ಲಥಾನ್ ಸಾಗಿದ ಮಾರ್ಗ: ಹಡ್ಸನ್ ವೃತ್ತ – ಚಿನ್ನಸ್ವಾಮಿ ಕ್ರೀಡಾಂಗಣದ ಕಸ್ತೂರಬಾ ರಸ್ತೆ(ಕ್ವೀನ್ಸ್ ರಸ್ತೆ) ಮೂಲಕ – ಜಿ.ಪಿ.ಒ ವೃತ್ತ – ರಾಜಭವನ ರಸ್ತೆ – ಚಾಲುಕ್ಯ ವೃತ್ತ – ಡಾ. ಬಿ.ಆರ್.ಅಂಬೇಡ್ಕರ್ ವೀಧಿ(ಎಂ.ಎಸ್.ಕಟ್ಟಡ ಮಾರ್ಗವಾಗಿ) – ಕೆ.ಆರ್.ವೃತ್ತ – ನೃಪತುಂಗ ರಸ್ತೆ ಮಾರ್ಗವಾಗಿ ಹಡ್ಸನ್ ವೃತ್ತಕ್ಕೆ ಸೈಕ್ಲಥಾನ್ ಪೂರ್ಣಗೊಂಡಿತು.

Related posts