ಭಾರತ್ ಬಂದ್: ಸರ್ಕಾರದ ವಿರುದ್ಧ ಆಕ್ರೋಶದ ಭುಗಿಲು

ದೆಹಲಿ: ಮೋದಿ ಸರ್ಕಾರದ ವಿರುದ್ಧ ವಿವಿಧ ಸಂಘಟನೆಗಳು ಮಂಗಳವಾರ ಭಾರತ್ ಬಂದ್’ಗೆ ಕರೆ ನೀಡಿದ್ದು, ಹಲವು ರಾಜ್ಯಗಳಲ್ಲಿ ಬಂದ್ ನಡೆದಿದೆ. ಕರ್ನಾಟಕ ರಾಜ್ಯದಲ್ಲೂ ಹಲವೆಡೆ ಭಾರತ್ ಬಂದ್’ಗೆ ಬೆಂಬಲವ್ಯಕ್ತವಾಗಿದೆ.

ಡಿಸೇಂಬರ್ 5ರಂದು ಕರ್ನಾಟಕ ಬಂದ್’ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದವು. ಅದು ಯಶಸ್ಸಾಗಲಿಲ್ಲ. ಇದೀಗ ಮೂರು ದಿನಗಳ ನಂತರ ಭಾರತ್ ಬಂದ್’ಗೆ ರಾಷ್ಟ್ರೀಯ ಮಟ್ಟದಲ್ಲಿ ಬಂದ್ ಆಚರಿಸಲಾಗುತ್ತಿದೆ.

ಕೇಂದ್ರ ಸರ್ಕಾರ ರೂಪಿಸಿರುವ ಕೃಷಿ ಕಾಯಿದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿವೆ. ಸರ್ಕಾರ ನಡೆಸಿರುವ ಹಲವು ಸುತ್ತುಗಳ ಸಂಧಾನ ವಿಫಲವಾದ ನಂತರ ವಿವಿಧ ಸಂಘಟನೆಗಳು ಈ ಭಾರತ್ ಬಂದ್’ಗೆ ಕರೆ ನೀಡಿವೆ. ಈ ಬಂದ್ ಕರೆಯನ್ನು ಕಾಂಗ್ರೆಸ್ ಸೇರಿದಂತೆ ಹಲವು ಸಂಘಟನೆಗಳು ಬೆಂಬಲಿಸಿದೆ.

ಪ್ರಮುಖವಾಗಿ ಉತ್ತರ ಕರ್ನಾಟಕದಲ್ಲಿ ವಿವಿಧ ಸಂಘಟನೆಗಳು ಬಂದ್ ಬೆಂಬಲಿಸಿ ರಸ್ತೆಗಿಳಿದಿವೆ. ನಸುಕಿನ ಜಾವವೇ ಪ್ರತಿಭಟನೆ ನಡೆಸುತ್ತಿರುವ ಕನ್ನಡ ಕಾರ್ಯಕರ್ತರು ಹಾಗೂ ರೈತ ಸಂಘಟನೆಗಳ ಕಾರ್ಯಕರ್ತರು ರಸ್ತೆಗಳಲ್ಲಿ ಟೈರ್’ಗಳನ್ನು ಸುಟ್ಟು ಆಕ್ರೋಶ ಹೊರಹಾಕಿದ್ದಾರೆ.

ಈ ನಡುವೆ ಹೆದ್ದಾರಿ ಬಂದ್ ನಡೆಸಲು ಕೆಲವು ಸಂಘಟನೆಗಳು ಮುಂದಾದ ಸನಿವೇಶವೂ ಕಂಡುಬಂತು.

Related posts