ಬೈಂದೂರು ಬಳಿ ಸಮುದ್ರದಲ್ಲಿ ದೋಣಿ ದುರಂತ

ಉಡುಪಿ: ಉಡುಪಿ ಜಿಲ್ಲೆ ಬೈಂದೂರಿನ ಅರಬೀ ಸಮುದ್ರದಲ್ಲಿ ಭೀಕರ ಅನಾಹುತ ಸಂಭವಿಸಿದೆ. ಬೈಂದೂರು ತಾಲ್ಲೂಕಿನ ಕೊಡೇರಿ ಬಳಿ ಸಮುದ್ರದ ಮಧ್ಯದಲ್ಲಿ ಮೀನುಗಾರಿಕಾ ದೋಣಿ ಮುಳುಗಿ ನಾಲ್ವರು ಮೃತಪಟ್ಟಿದ್ದಾರೆ.

ಸಾಗರಶ್ರಿ ಎಂಬ ದೋಣಿಯಲ್ಲಿ ಸುಮಾರು 9 ಮೀನುಗಾರರು ಮೀನುಗಾರಿಕೆಯಲ್ಲಿ ತೊಡಗಿದ್ದ ವೇಳೆ ಈ ದುರಂತ ಸಂಭವಿಸಿದೆ. ಭಾನುವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಈ ಮೀನುಗಾರರು ಈ ದೋಣಿಯಲ್ಲಿ ತೆರಳಿದ್ದು ಮಧ್ಯಾಹ್ನದ ಹೊತ್ತಿಗೆ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ದೈತ್ಯ ಅಲೆಗಳ ಹೊಡೆತಕ್ಕೆ ತುತ್ತಾಗಿ ದೋಣಿ ಮಗುಚಿ ಬಿದ್ದು ಈ ಅನಾಹುತ ಸಂಭವಿಸಿದೆ ಎನ್ನಲಾಗಿದೆ.

Related posts