ಮುಂದುವರಿದ ಖಾಸಾಗೀಕರಣ ಪರ್ವ; ಬಿಪಿಸಿಎಲ್ ಸೇರಿ 5 ಕಂಪೆನಿಗಳ ಷೇರು ಸೆಲ್

ದೆಹಲಿ: ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣ ಪ್ರಕ್ರಿಯೆ ಮತ್ತೆ ಮುಂದುವರಿದಿದೆ. ಈ ಬಾರಿ ದೇಶದ ಹೆಮ್ಮೆಯ ತೈಲ ಸಂಸ್ಥೆಯಾಗಿರುವ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಶನ್‌ ಲಿಮಿಟೆಡ್‌ (ಬಿಪಿಸಿಎಲ್‌) ಸೇರಿದಂತೆ ಸರಕಾರಿ ಸ್ವಾಮ್ಯದ ಐದು ಕಂಪೆನಿಗಳ ಷೇರುಗಳ ಮಾರಾಟಕ್ಕೆ ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಐದು ಕಂಪೆನಿಗಳ ಷೇರುಗಳ ಮಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡಲಾಯಿತು. ಈ ಕಂಪೆನಿಗಳಲ್ಲಿ ಸರಕಾರ ಹೊಂದಿರುವ ಷೇರು ಗಳನ್ನು ಶೇ. 51ಕ್ಕಿಂತ ಕಡಿಮೆಗೊಳಿಸಲು ಸಂಪುಟದ ಅನುಮೋದನೆ ನೀಡಿತು.  ಸಂಪುಟದ ಈ ನಿರ್ಧಾರ ಕುರಿತು ವಿವರ ನೀಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಬಿಪಿಸಿಎಲ್‌ನಲ್ಲಿ ರುವ ಶೇ.53.29ರಷ್ಟು ಷೇರುಗಳನ್ನು ಮಾರಾಟ ಮಾಡಲಾಗುತ್ತದೆ ಎಂದರು.

ಕಂಟೈನರ್‌ ಕಾರ್ಪೊರೇಶನ್‌ ಆಫ್ ಇಂಡಿಯಾ, ನೀಪ್ಕೋ(ಈಶಾನ್ಯ ರಾಜ್ಯಗಳ ವಿದ್ಯುತ್‌ ನಿಗಮ ನಿಯಮಿತ) ಎಸ್‌ಸಿಐ (ಹಡಗು ನಿರ್ಮಾಣ ಸಂಸ್ಥೆ), ಟಿಎಚ್‌ಡಿಸಿ (ತೆಹ್ರಿ ಹೈಡ್ರೋ ಡೆವಲಪ್‌ಮೆಂಟ್‌ ಕಾರ್ಪೊರೇಶನ್‌ ಆಫ್ ಇಂಡಿಯಾ) ಷೇರುಗಳ ಮಾರಾಟಕ್ಕೆ ಮೋದಿ ಸಂಪುಟ ಅನುಮೋದನೆ ನೀಡಲಾಗಿದೆ

Uncategorized

Related posts