ಅಲ್ಲಿ ಕಣ್ ಸನ್ನೆ.. ಕನ್ನಡಲ್ಲಿ ಕೈ ಸನ್ನೆ.. ಪ್ರಿಯಾ ವಾರಿಯರ್ ಕುತೂಹಲ

ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಕನ್ನಡದಲ್ಲಿ ನಟಿಸುತ್ತಿರುವ ‘ವಿಷ್ಣುಪ್ರಿಯ’ ಚಿತ್ರ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಶ್ರೇಯಸ್ ಮಂಜು ಕೂಡಾ ನಟಿಸಿದ್ದಾರೆ.

‘ಕಟ್ಟಿಂಗ್ ಶಾಪ್’ನಲ್ಲಿ ಪ್ರವೀಣ್, ಅರ್ಚನಾ ಆಕರ್ಷಣೆ

ಕನ್ನಡ ಸಿನಿಮಾ ಕ್ಷೇತ್ರದಲ್ಲೀಗ ಬಗೆಬಗೆಯ ಟೈಟಲ್ ನಲ್ಲಿ ಚಿತ್ರಗಳು ಹೊರಬರುತ್ತಿವೆ. ಇದೀಗ ಕೆಬಿ ಪ್ರವೀಣ್ ಮತ್ತು ಅರ್ಚನಾ ಕೊಟ್ಟಿಗೆ ಅಭಿನಯದ ‘ಕಟ್ಟಿಂಗ್ ಶಾಪ್’ ಚಿತ್ರ ಕೂಡಾ ವಿಭಿನ್ನ ಟೈಟಲ್’ನಿಂದ ಗಮನಸೆಳೆದಿದೆ. ಪವನ್ ಭಟ್ ನಿರ್ದೇಶಿಸಿರುವ ಈ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಜಾಲತಾಣಗಳಲ್ಲಿ ಈ ಟೀಸರ್ ಸಕತ್ ಸದ್ದು ಮಾಡುತ್ತಿದೆ.    

ಮರ್ಡರ್ ಮಿಸ್ಟರಿಯ ‘ಅಮೃತ ಅಪಾರ್ಟ್‌ಮೆಂಟ್ ಟೀಸರ್‌ನಲ್ಲೇ ಇದೆ ಥ್ರಿಲ್

  ತರ್ಕ, ಉತ್ಕರ್ಷದಂತಹಾ ಹಲವು ಥ್ರಿಲ್ಲರ್ ಮೂವೀಗಳು ಸಿನಿಮಾ ಇಂಡಸ್ಟ್ರಿಯಲ್ಲಿ ಗೆದ್ದೇ ಗೆಲ್ಲುತ್ತದೆ ಎಂಬ ನಂಬಿಕೆ ಚಿತ್ರಲೋಕದ ದಿಗ್ಗಜರದ್ದು. ಇದೀಗ ಅದೇ ಕಾನ್ಸೆಪ್ಟ್‌ನಲ್ಲಿ ‘ಅಮೃತ ಅಪಾರ್ಟ್‌ಮೆಂಟ್’ ಚಿತ್ರ ತೆರೆಗೆ ಬರಲು ಸಿದ್ದವಾಗುತ್ತಿದೆ. ಗುರುರಾಜ್ ಕುಲಕರ್ಣಿ ಅವರು ಮರ್ಡರ್ ಮಿಸ್ಟರಿ ಕಥೆಯಾಧಾರಿತ ‘ಅಮೃತ ಅಪಾರ್ಟ್ಮೆಂಟ್ಸ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಟೀಸರೇ ಒಂಥರಾ ಧ್ರಿಲ್ ಕೊಡುತ್ತೆ ಎಂಬ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಲಾಕ್‌ಡೌನ್ ವಿರಾಮದ ನಂತರ ಬಾಲಿವುಡ್‌ನಲ್ಲಿ ‘ತೂಫಾನ್’ ಪ್ರತಿಧ್ವನಿ

ಲಾಕ್‌ಡೌನ್ ವಿರಾಮದ ನಂತರ ಇದೀಗ ಬಾಲಿವುಡ್ ಕೂಡಾ ಚೇತರಿಸಿಕೊಳ್ಳುತ್ತಿದೆ. ಅದೇ ಹೊತ್ತಿಗೆ ‘ತೂಫಾನ್’ ಸದ್ದು ಪ್ರತಿಧ್ವನಿಸುತ್ತಿದೆ. ನಟ ಫರ್ಹಾನ್ ಅಖ್ತರ್ ಮತ್ತು ಪರೇಶ್ ರಾವಲ್ ಅಭಿನಯದ ‘ತೂಫಾನ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶನದ ಈ ಸಿನಿಮಾ ಟೀಸರ್‌ಗೆ ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ಲೈಕ್ಸ್ ಗಿಟ್ಟಿಸಿಕೊಳ್ಳುತ್ತಿದೆ.  

ಸೀತೆ’ಯಾಗಿ ಆಲಿಯಾ ಭಟ್: RRR ಫಸ್ಟ್ ಲುಕ್ ಆಕರ್ಷಣೆ

ಹೈದರಾಬಾದ್: ಬಾಹುಬಲಿ ಖ್ಯಾತಿಯ ಎಸ್‍.ಎಸ್‍.ರಾಜಮೌಳಿ ನಿರ್ದೇಶನದ ‘RRR’ ಚಿತ್ರ ತೆಲುಗು ನೆಲದಲ್ಲಿ ಭಾರೀ ಸದ್ದು ಮಾಡುತ್ತಿದೆ. ಬಹುಭಾಷೆಗಳಲ್ಲಿ ತೆರೆಗೆ ಬರಲು ಸಜ್ಜಾಗುತ್ತಿರುವ RRR ಟೀಂ ಈ ಚಿತ್ರದ ನಾಯಕಿ ಆಲಿಯಾ ಭಟ್‌ಗೆ ಅಚ್ಚರಿಯ ಗಿಫ್ಟ್ ನೀಡಿದೆ. ಆಲಿಯಾ ಹುಟ್ಟುಹಬ್ಬ ಸಂದರ್ಭದಲ್ಲಿ ಈ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. #Sita ❤️💚 #RRRMovie #HappyBirthdayAliaBhatt pic.twitter.com/bOspk071gz — RRR Movie (@RRRMovie) March 15, 2021 ಈ ಸಿನಿಮಾದಲ್ಲಿ ಆಲಿಯಾ ಭಟ್ ಅವರು ಸೀತಾ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಆಲಿಯಾ ತೆಲುಗು ಚಿತ್ರರಂಗಕ್ಕೂ ಪದಾರ್ಪಣೆ ಮಾಡಿರುವ ಆಲಿಯಾ, ರಾಮ್ ಚರಣ್ ಜೊತೆ ನಟಿಸುತ್ತಿದ್ದಾರೆ.

‘ಎಂಬಿಎ’ ಪ್ರಯತ್ನದಲ್ಲಿ ಪುನೀತ್ ಮತ್ತು ಕಾವ್ಯ

ಕನ್ನಡ ಸಿನಿಮಾ ರಂಗ ಚೇತರಿಸಿಕೊಂಡಿದ್ದು ಒಂದೊಂದೇ ಚಿತ್ರಗಳು ಸದ್ದು ಮಾಡುತ್ತಿದೆ. ಇದೀಗ ‘ಎಂಬಿಎ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಗಳಿಸುತ್ತಿದೆ. ಈ ಚಿತ್ರವದಲ್ಲಿ ಪುನೀತ್ ಗೌಡ ಮತ್ತು ಕಾವ್ಯ ಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಕುಂದಾಪುರ’ ಚಿತ್ರದ ಟ್ರೈಲರ್ ಸಕತ್ ಸದ್ದು

ಊರುಗಳ ಹೆಸರಲ್ಲಿ ಸಿನಿಮಾ ಬರುತ್ತಿರುವುವು ಹೊಸದೇನಲ್ಲ. ಹಿಂದೆ ಶಿವಾಜಿ ಸುರತ್ಕಲ್, ಯಶ್ ಅಭಿನಯದ ಕೆಜಿಎಫ್, ಹೀಗೆ ಅನೇಕ ಸಿನಿಮಾಗಳು ಹಿಟ್ ಆಗಿವೆ. ಇದೀಗ ‘ಕುಂದಾಪುರ’ ಹೆಸರಲ್ಲೊಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಓಂ ಗುರು ಬಸ್ರೂರ್ ನಿರ್ದೇಶನದ ‘ಕುಂದಾಪುರ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಟ್ರೈಲರ್’ಗೆ ಸಕತ್ ಮೆಚ್ಚುಗೆ ವ್ಯಕ್ತವಾಗಿದೆ.

ಸದ್ಯವೇ ‘ಇನ್‌ಸ್ಪೆಕ್ಟರ್ ವಿಕ್ರಂ’ ಬಿಡುಗಡೆ

ಪ್ರಜ್ವಲ್ ದೇವರಾಜ್ ನಟನೆಯ ‘ಇನ್‌ಸ್ಪೆಕ್ಟರ್ ವಿಕ್ರಂ’ ಚಿತ್ರ ಸಧ್ಯವೇ ತೆರೆ ಕಾಣಲಿದೆ. ಬಹು ನಿರೀಕ್ಷೆಯ ‘ಇನ್‌ಸ್ಪೆಕ್ಟರ್ ವಿಕ್ರಂ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಮತ್ತು ಭಾವನ ಭಿನಯಿಸಿದ್ದು, ಇದನ್ನು ಶ್ರೀನರಸಿಂಹಯ್ಯ ನಿರ್ದೇಶಿಸಿದ್ದಾರೆ

ತೆರೆಯಲ್ಲಿ ಸಾಧ್ಯವೇ ‘ಗಾಡ್ಜಿಲ್ಲಾ ವರ್ಸಸ್ ಕಾಂಗ್’; ಹೆಚ್ಚಿದ ಕುತೂಹಲ

ಆ್ಯಡಂ ವಿಂಗಾರ್ಡ್ ನಿರ್ದೇಶನದ ‘ಗಾಡ್ಜಿಲ್ಲಾ ವರ್ಸಸ್ ಕಾಂಗ್’ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ‘ಗಾಡ್ಜಿಲ್ಲಾ ವರ್ಸಸ್ ಕಾಂಗ್’ ಟ್ರೈಲರ್ ಬಿಡುಗಡೆಯಾಗಿದ್ದು, ಇದು ಈಗ ಭಾರೀ ಸದ್ದು ಆಗುತ್ತಿದೆ. ಜಗತ್ತಿನಾದ್ಯಂತ ‘ಗಾಡ್ಜಿಲ್ಲಾ ವರ್ಸಸ್ ಕಾಂಗ್’ ಭಾರೀ ಕುತೂಹಲ ಸೃಷ್ಟಿಸಿದ್ದು, ಇದರ ಟ್ರೈಲರ್’ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಲೈಕ್ ಸಿಗುತ್ತಿದೆ.