ಮಲಯಾಳಂ ನಟ ವಿನೋದ್ ಥಾಮಸ್ ಶವವಾಗಿ ಪತ್ತೆ

ಕೊಟ್ಟಾಯಂ: ಕೇರಳದ ಜನಪ್ರಿಯ ನಟ ವಿನೋದ್ ಥಾಮಸ್ ಶವವಾಗಿ ಪತ್ತೆಯಾಗಿದ್ದಾರೆ. ಕೊಟ್ಟಾಯಂನ ಪಂಪಾಡಿ ಬಳಿಯ ಹೋಟೆಲ್‌ನಲ್ಲಿ ನಿಲ್ಲಿಸದ್ದ ಕಾರಿನೊಳಗೆ 45 ವರ್ಷದ ವಿನೋದ್ ಥಾಮಸ್ ಶವ ಶನಿವಾರ ಪತ್ತೆಯಾಗಿದೆ ಹೋಟೆಲ್‌ ಆವರಣದಲ್ಲಿ ಹಲವು ದಿನಗಳಿಂದ ನಿಂತಿದ್ದ ಕಾರಿನೊಳಗೆ ವ್ಯಕ್ತಿಯೊಬ್ಬ ಇರುವುದಾಗಿ ಹೋಟೆಲ್ ಸಿಬ್ಬಂದಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ನಟ ವಿನೋದ್ ಥಾಮಸ್ ಅವರು ಶವವಾಗಿ ಪತ್ತೆಯಾಗಿದ್ದಾರೆ. ‘ನಾಥೋಲಿ ಒರು ಚೆರಿಯ ಮೀನಲ್ಲಾ’, ‘ಅಯ್ಯಪ್ಪನುಮ್ ಕೊಶ್ಯುಮ್’, , ‘ಒರು ಮುರೈ ವಂತ್ ಪಾಠಯಾ’, ‘ಹ್ಯಾಪಿ ವೆಡ್ಡಿಂಗ್’ ಮತ್ತು ‘ಜೂನ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ವಿನೋದ್ ಥಾಮಸ್ ನಟಿಸಿದ್ದಾರೆ. ನಟ ವಿನೋದ್ ಥಾಮಸ್ ನಿಧಾನಕ್ಕೆ ಸಿನಿಮಾ ಕ್ಷೇತ್ರದ ಗಣ್ಯರನೇಕರು ಕಂಬನಿ ಮಿಡಿದಿದ್ದಾರೆ.

ತಿಗಳಪೇಟೆಯಲ್ಲಿನ ನೈಜ ಘಟನೆಯೇ ‘ಕೈವ’: ಕನ್ನಡ ಸಿನಿ ಲೋಕದಲ್ಲಿ ಮತ್ತೊಂದು ಅಚ್ಚರಿ

1983 ರಲ್ಲಿ ಬೆಂಗಳೂರಿನ ತಿಗಳಪೇಟೆಯಲ್ಲಿ ನಡೆದ ನೈಜಘಟನೆ ಆಧರಿಸಿದ ಚಿತ್ರ ತೆರೆಗೆ ಬರಲಿದೆ. ‘ಕೈವ’ ಹೆಸರಿನ ಈ ಚಿತ್ರದಲ್ಲಿ ಧನ್ವೀರ್ ನಟಿಸುತ್ತಿದ್ದಾರೆ. ‘ಕೈವ’ ಎಂಬುದು ಒಬ್ಬ ವ್ಯಕ್ತಿಯ ಹೆಸರು. ಬೆಂಗಳೂರು ಕರಗದಲ್ಲಿ ಸೃಷ್ಟಿಯಾದ ಪ್ರೇಮಪ್ರಸಂಗವೊಂದು ಕೋತೂಹಲಘಟ್ಟಕ್ಕೆ ತಲುಪಿ ನಿರ್ಣಾಯಕ ತಿರುವನ್ನು ಪಡೆಯುವ ನಡುವೆ ಅನೇಕಾನೇಕ ಅಚ್ಚರಿಯ ಪ್ರಸಂಗಗಳು ಘಟಿಸುತ್ತವೆ. ಈ ಸಿನಿಮಾದ ಬಹುತೇಕ ಸನ್ನಿವೇಶಗಳನ್ನು ಬೆಂಗಳೂರಿನ ತಿಗಳರಪೇಟೆಯಲ್ಲಿ ಚಿತ್ರೀಕರಿಸಲಾಗಿದೆಯಂತೆ. ಗಂಗಾರಾಮ್ ಕಟ್ಡಡದ ದುರಂತಕ್ಕೂಈ ಚಿತ್ರದ ಕಥೆಗೂ ಸಂಬಂಧವಿದೆ ಎಂಬುದೂ ಮತ್ತೊಂದು ಅಚ್ಚರಿ. ಚಿತ್ರದ ನಾಯಕನಾಗಿ ಧನ್ವೀರ್, ನಾಯಕಿಯಾಗಿ ಮೇಘ ಶೆಟ್ಟಿ ಅಭಿನಯಿಸಿದ್ದು, ದಿನಕರ್ ತೂಗುದೀಪ್ ಕೂಡಾ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿನಕರ್ ತೂಗುದೀಪ, ರಾಘು ಶಿವಮೊಗ್ಗ ಸೇರಿದಂತೆ ಐವರು ನಿರ್ದೇಶಕರು ನಟನೆ ಕೂಡಾ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ಡಿಸೆಂಬರ್ ನಲ್ಲಿ ‘ಕೈವ’ ತೆರೆಗೆ ಬರಲಿದೆ ಎಂದು ನಿರ್ದೇಶಕ ಜಯತೀರ್ಥ ತಿಳಿಸಿದ್ದಾರೆ. ಈ ಸಿನಿಮಾದ ಟೀಸರನ್ನು ದೀಪಾವಳಿ ಸಂದರ್ಭದಲ್ಲಿ ಬಿಡುಗಡೆ…

54ನೇ ಐಎಫ್ಎಫ್ಐಗೆ ತನ್ನ 10 ಶಿಫಾರಸು ಚಲನಚಿತ್ರಗಳನ್ನು ಪ್ರಕಟಿಸಿದ ಫಿಲ್ಮ್ ಬಜಾರ್..

54ನೇ ಐಎಫ್ಎಫ್ಐಗೆ ತನ್ನ 10 ಶಿಫಾರಸು ಚಲನಚಿತ್ರಗಳನ್ನು ಪ್ರಕಟಿಸಿದ ಫಿಲ್ಮ್ ಬಜಾರ್.. ಈ ವರ್ಷ 6 ಭಾಷೆಗಳಲ್ಲಿನ ಬಹು ಪ್ರಕಾರಗಳ ಚಲನಚಿತ್ರಗಳ ಆಯ್ಕೆ..  ಫಿಲ್ಮ್ ಬಜಾರ್ ಶಿಫಾರಸು ಮಾಡಿದ ಚಲನಚಿತ್ರಗಳ ಬಹುನಿರೀಕ್ಷಿತ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ವರ್ಷದ ಆಯ್ಕೆಯು ಕಾಲ್ಪನಿಕ, ಡಾಕ್ಯುಮೆಂಟರಿ ಕಿರುಚಿತ್ರಗಳು, ಸಾಕ್ಷ್ಯಚಿತ್ರಗಳು, ಹಾರರ್(ಭಯಾನಕ) ಚಲನಚಿತ್ರ ಮತ್ತು ಅನಿಮೇಟೆಡ್ ವೈಶಿಷ್ಟ್ಯಗಳ ವೈವಿಧ್ಯಮಯ ಮಿಶ್ರಣ ಹೊಂದಿದೆ. ಇದು ಭಾರತ ಮತ್ತು ವಿದೇಶಗಳಲ್ಲಿನ ಸಮುದಾಯಗಳಿಗೆ ಸಂಬಂಧಿಸಿದ ವಿಷಯಗಳು ಒಳಗೊಂಡಿವೆ. ಪಿತೃಪ್ರಭುತ್ವ(ಪುರುಷ ಪ್ರಧಾನ), ನಗರ ತಲ್ಲಣ, ತೀವ್ರ ಬಡತನ, ಹವಾಮಾನ ಬಿಕ್ಕಟ್ಟುಗಳು, ರಾಷ್ಟ್ರೀಯತೆ ಮತ್ತು ಕ್ರೀಡೆ, ಫಿಟ್ನೆಸ್ ಮತ್ತಿತರ ವಿಷಯ ವಸ್ತುಗಳಿಗೆ ಸಂಬಧಿಸಿವೆ. ಚಲನಚಿತ್ರಗಳು ಇಂಗ್ಲಿಷ್, ಹಿಂದಿ, ಬೆಂಗಾಲಿ, ಮಾರ್ವಾಡಿ, ಕನ್ನಡ ಮತ್ತು ಮಾವೋರಿ (ನ್ಯೂಜಿಲೆಂಡ್ ಭಾಷೆ) ಮತ್ತು ವಿಷಯಗಳ ಸಾರಸಂಗ್ರಹಿ ಮಿಶ್ರಣವನ್ನು ಒಟ್ಟಿಗೆ ತರುತ್ತವೆ. ಚಲನಚಿತ್ರಗಳ ಸ್ಥಿರಚಿತ್ರ(ಸ್ಟಿಲ್‌)ಗಳನ್ನು ಈ ಲಿಂಕ್‌ನಲ್ಲಿ ಕಾಣಬಹುದು: ಪಟ್ಟಿಯು ಈ ಕೆಳಗಿನ ಚಲನಚಿತ್ರಗಳನ್ನು ಒಳಗೊಂಡಿದೆ:ಕಾಲ್ಪನಿಕ…

ರಶ್ಮಿಕಾ ಫೇಕ್ ಡೀಪ್ ವೀಡಿಯೋ; ದೆಹಲಿ ಪೊಲೀಸರಿಂದ ಎಫ್‌ಐ‌ಆರ್

ದೆಹಲಿ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಆಕ್ಷೇಪಾರ್ಹ ವೀಡಿಯೋ ಬಗ್ಗೆ ಪೊಲೀಸ್ ತನಿಖೆ ಆರಂಭಗೊಂಡಿದೆ. ಡೀಪ್‌ಫೇಕ್ ವಿಡಿಯೋ ವಿವಾದ ಬಗ್ಗೆ ದೆಹಲಿಯ ವಿಶೇಷ ಸೆಲ್ ಪೊಲೀಸ್ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಈ ವಿವಾದ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಎಂದು ಪೊಲೀಸರು ತಿಳೊಸಿದ್ದಾರೆ.