ತೆಲಂಗಾಣದ ನೂತನ ಸಿಎಂ ಸ್ಥಾನಕ್ಕೆ ರೇವಂತ್‌ ರೆಡ್ಡಿ ಆಯ್ಕೆ; ಡಿ.7ರಂದು ಪ್ರಮಾಣ ವಚನ ಸಾಧ್ಯತೆ

ಹೊಸದಿಲ್ಲಿ: ತೆಲಂಗಾಣದಲ್ಲಿ ಜಯಭೇರಿ ಭಾರಿಸಿರುವ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆಗೆ ಕಸರತ್ತು ನಡೆಸಿದೆ. ಇದೇ ವೇಳೆ ನೂತನ ಮುಖ್ಯಮಂತ್ರಿ ಸ್ಥಾನಕ್ಕೆ ರೇವಂತ್‌ ರೆಡ್ಡಿ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ. ಹೊಸದಿಲ್ಲಿಯಲ್ಲಿ ನಡೆದ ಎಐಸಿಸಿ ನಾಯಕರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಎಐಸಿಸಿ ನಾಯಕರ ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್‌, ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷರಾಗಿರುವ ರೇವಂತ್ ರೆಡ್ಡಿ ಅವರನ್ನು ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಇದೇ ವೇಳೆ, ಡಿಸೆಂಬರ್ 7 ರಂದು ನೂತನ ಸಿಎಂ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಮಿಚಾಂಗ್ ಚಂಡಮಾರುತ; ಆಂಧ್ರಪ್ರದೇಶದಲ್ಲೂ ಅಯೋಮಯ

ಹೈದರಾಬಾದ್ : ಮಿಚಾಂಗ್ ಚಂಡಮಾರುತದ ರೌದ್ರಾವತಾರದಿಂದಾಗಿ ತಮಿಳುನಾಡು ಮತ್ತು ಆಂಧ್ರಪ್ರದೇಶ ಕರಾವಳಿಯಲ್ಲಿ ಅವಾಂತರ ಸೃಷ್ಟಿಸಿದೆ. ಸೋಮವಾರದಿಂದ ಬಿರುಗಾಳಿ ಮಳೆ ಜೋರಾಗಿದ್ದು ಈ ಎರಡೂ ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಆಂಧ್ರಪ್ರದೇಶದ ಹಲವು ಜಿಲ್ಲೆಗಳು ಮಿಚಾಂಗ್ ಚಂಡಮಾರುತದ ಹೊಡೆತಕ್ಕೆ ಸಿಲುಕಿ ತತ್ತರಗೊಂಡಿದೆ. ಸರಣಿ ಅವಘಡಗಳು ಪರಿಸ್ಥಿಯ ಭೀಕರತೆಯನ್ನು ಅನಾವರಣ ಮಾಡಿದೆ. ಆಂಧ್ರದಲ್ಲಿ ಕಳೆದ 80 ವರ್ಷಗಳಲ್ಲಿ ಅಪೂರ್ವ ಎಂಬಂತೆ ಭಾರೀ ಬಿರುಗಾಳಿ ಸಹಿತ ಮಳೆಯಾಗಿದ್ದು ನಿರಂತರ ವರ್ಷಧಾರೆಯಿಂದಾಗಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ತಿರುಮಲದಲ್ಲಿ ಮಳೆ ಕಾರಣ ಭಕ್ತರು ಪರದಾಡುವಂತಾಗಿದೆ. ಭೀಕರ ಪರಿಸ್ಥಿತಿ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ರಜೆ ಘೋಷಿಸಲಾಗಿದೆ.

ಮಿಚಾಂಗ್ ಚಂಡಮಾರುತದ ಹೊಡೆತ; ತಮಿಳುನಾಡು ತತ್ತರ

ಚೆನ್ನೈ: ಮಿಚಾಂಗ್ ಚಂಡಮಾರುತದ ರೌದ್ರಾವತಾರದಿಂದಾಗಿ ತಮಿಳುನಾಡು ಮತ್ತು ಆಂಧ್ರಪ್ರದೇಶ ಕರಾವಳಿಯಲ್ಲಿ ಅವಾಂತರ ಸೃಷ್ಟಿಸಿದೆ. ಸೋಮವಾರದಿಂದ ಬಿರುಗಾಳಿ ಮಳೆ ಜೋರಾಗಿದ್ದು ಈ ಎರಡೂ ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ತಮಿಳುನಾಡಿನ ಹಲವು ಜಿಲ್ಲೆಗಳು ಮಿಚಾಂಗ್ ಚಂಡಮಾರುತದ ಹೊಡೆತಕ್ಕೆ ಸಿಲುಕಿ ನಲುಗಿಹೋಗಿದೆ. ಸರಣಿ ಅವಘಡಗಳು ಐರನ್ನು ಬಲಿತೆಗೆದುಕೊಂಡಿವೆ. ಚೆನ್ನೈನಲ್ಲಿ ಐವರು ಸಾವನ್ನಪ್ಪಿದ್ದು ಭೀಕರ ಪರಿಸ್ಥಿತಿ ಹಿನ್ನೆಲೆಯಲ್ಲಿ ತಮಿಳುನಾಡಿನ ಶಾಲಾ-ಕಾಲೇಜುಗಳಿಗೆ ರಜೆ ರಜೆ ಘೋಷಿಸಲಾಗಿದೆ. ಕೋರ್ಟ್-ಕಚೇರಿ, ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.  ಚೆನ್ನೈ ನಗರದ ಬಹುತೇಕ ಪ್ರದೇಶಗಳು ನೀರಿನಿಂದ ಆವೃತವಾಗಿದ್ದು ಪ್ರಮುಖ ರಸ್ತೆಗಳಲ್ಲಿ ನೀರು ತುಂಬಿವೆ. ಅನೇಕ ವಾಹನಗಳು ನೀರಿನಲ್ಲಿ ಮುಳುಗಿವೆ. ಸಾರಿಗೆ ವಾಹನಗಳು ನೀರಿನಲ್ಲೇ ಕೆಟ್ಟು ನಿಂತಿದ್ದು ಜನರು ಪರದಾಡುವಂತಾಗಿದೆ. Scary 😨 Be Safe 🙏#ChennaiFloods #ChennaiRains2023#ChennaiRain #Chennai #ChennaiFloods2023 pic.twitter.com/4WQiZsp2PW — Lakhvinder Singh Ramgarhia (@vinder_ds) December 5, 2023 ಈ ನಡುವೆ ಹಲವು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ.…

ಮಿಚಾಂಗ್ ಅವಾಂತರ; ಆಂಧ್ರದ ಹಲವೆಡೆ ರೆಡ್ ಅಲರ್ಟ್

ಹೈದರಾಬಾದ್: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮಿಚಾಂಗ್ ಚಂಡಮಾರುತದಿಂದಾಗಿ ಆಂಧಪ್ರದೇಶದಲ್ಲೂ ಭಾರೀ ಮಳೆಯಾಗುತ್ತಿದ್ದು ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನೆಲ್ಲೂರು ಮತ್ತು ಮಚಲಿಪಟ್ನಂ, ಬಾಪಟ್ಲಾ ಮತ್ತು ಗುಂಟೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಮಿಚಾಂಗ್ ಚಂಡಮಾರುತದಿಂದಾಗಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಂದ್ರಪ್ರದೇಶದ ಹಲವು ಜೆಲ್ಲೆಗಳಲ್ಲಿ ಡಿಸೆಂಬರ್ 4 ಮತ್ತು 5 ರಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಆಂಧ್ರ ಪ್ರದೇಶದ ಹಲವೆಡೆ ರೆಡ್ ಅಲರ್ಟ್..  ಮೈಚಾಂಗ್ ಚಂಡಮಾರುತ ಹಿನ್ನೆಲೆಯಲ್ಲಿ, ಪಶ್ಚಿಮ ಗೋದಾವರಿ ಮತ್ತು ಉತ್ತರ ಕರಾವಳಿ ಆಂಧ್ರ ಪ್ರದೇಶದ ಡಾ ಅಂಬೇಡ್ಕರ್ ಕೋನಸೀಮಾ, ನೆಲ್ಲೂರು, ಪ್ರಕಾಶಂ, ಕೃಷ್ಣ, ಬಾಪಟ್ಲಾ, ಗುಂಟೂರು ಮತ್ತು ರಾಯಲಸೀಮಾ ಪ್ರದೇಶದಲ್ಲಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಂಡಮಾರುತದ ತೀವ್ರತೆಯ ಆಧಾರದ ಮೇಲೆ ರಜೆ ಘೋಷಿಸುವಂತೆ ಶಾಲಾ ಶಿಕ್ಷಣ ಆಯುಕ್ತರು ಶಿಕ್ಷಣ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತಗಳು…

ಮಿಚಾಂಗ್ ಚಂಡಮಾರುತ; ಭಾತೀ ಮಳೆಯಿಂದಾಗಿ ತಮಿಳುನಾಡಿನಲ್ಲಿ ಜನಜೀವನ ಅಸ್ತವ್ಯಸ್ತ

ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತದಿಂದಾಗಿ ತಮಿಳುನಾಡು ಹಾಗೂ ಪೂರ್ವದ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ತಮಿಳುನಾಡಿನಲ್ಲಿ ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಚೆನ್ನೈ ಸೇರಿದಂತೆ ತಮಿಳುನಾಡಿನ ಕರಾವಳಿ ಜಿಲ್ಲೆಗಳಲ್ಲಿ ರಸ್ತೆಗಳು ಜಲಾವೃತವಾಗಿವೆ. ಮಳೆ ಹಿನ್ನೆಲೆಯಲ್ಲಿ ಚೆನ್ನೈ, ತಿರುವಲ್ಲೂರು, ಚೆಂಗಲ್‌ಪಟ್ಟು,ಕಾಂಚೀಪುರಂ ಸಹಿತ ಹಲವು ಜಿಲ್ಲೆಗಳಲ್ಲಿ ಸೋಮವಾರ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಮಿಚಾಂಗ್ ಚಂಡಮಾರುತದ ಪರಿಣಾಮ ತಮಿಳುನಾಡಿನ 16 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ನಡುವೆ, ತಮಿಳುನಾಡಿನ ಚೆನ್ನೈನಲ್ಲಿ ಭಾರಿ ಮಳೆ: ಮೈಸೂರು, ಬೆಂಗಳೂರು ಎಕ್ಸ್‌ಪ್ರೆಸ್ ಸೇರಿದಂತೆ 11 ರೈಲುಗಳು ರಡಾಗಿವೆ. ಡಿಸೇಂಬರ್ 7ರವರೆಗೆ ಸುಮಾರು 144 ರೈಲುಗಳ ಸೇವೆಯನ್ನು ರದ್ದಾಗಿವೆ ಎಂದು ಮೂಲಗಳು ತಿಳಿಸಿವೆ.

‘ಕಮಲ ಮುಕ್ತ ದಕ್ಷಿಣ ಭಾರತ’; ಫಲಿಸಿದ ‘ಇಂಡಿಯಾ’ ಮೈತ್ರಿಕೂಟದ ತಂತ್ರ

ಹೈದರಾಬಾದ್: ಪಂಚರಾಜ್ಯಗಳ ಚುನಾವಣಾ ಪೈಕಿ ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಆಡಳಿತಾರೂಢ BRS ಪಕ್ಷದ ಜೊತೆ ತೀವ್ರ ಸೆಣಸಾಟ ನಡೆಸಿರುವ ಕಾಂಗ್ರೆಸ್ ಸರಳ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿದೆ. ಅಷ್ಟೇ ಅಲ್ಲ, ‘ಕಮಲ ಮುಕ್ತ ದಕ್ಷಿಣ ಭಾರತ’ ಮಾಡುವ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟದ ತಂತ್ರ ಫಲಿಸಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸುವ ಮೂಲಕ ದಕ್ಷಿಣ ಭಾರತದಲ್ಲಿ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡಿದೆ. ಕೆಲವು ತಿಂಗಳ ಹಿಂದಷ್ಟೇ ಕರ್ನಾಟಕದಲ್ಲಿ ಗೆದ್ದ ಕಾಂಗ್ರೆಸ್ ಇದೀಗ ತೆಲಂಗಾಣಕ್ಕೂ ತನ್ನ ಚಕ್ರಾಧಿಪತ್ಯವನ್ನು ವಿಸ್ತರಿಸಿದಂತಾಗಿದೆ. ಅಷ್ಟೇ ಅಲ್ಲ, ಗೋವಾವನ್ನು ಹೊರತುಪಡಿಸಿ ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ‘I.A.N.D.I.A.’ ಮೈತ್ರಿಕೂಟ ಯಶಸ್ವಿಯಾಗಿದೆ. 119 ಸದಸ್ಯಬಲದ ತೆಲಂಗಾಣ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 60 ಸ್ಥಾನಗಳ ಅಗತ್ಯವಿದ್ದು, ಆಡಳಿತಾರೂಢ ತೆಲಂಗಾಣದ ಕನಸು ನುಚ್ಚು ನೂರಾಗಿದೆ. ಕಾಂಗ್ರೆಸ್ ಪಕ್ಷ ಸರಳ ಬಹುಮತದೊಂದಿಗೆ ಗದ್ದುಗೆ ಏರಿದೆ.

ಮಿನಿ ಮಹಾಸಮರದಲ್ಲಿ ಬಿಜೆಪಿ ಪ್ರಾಬಲ್ಯ; ಕಾಂಗ್ರೆಸ್‌ಗೆ ‘ಕೈ’ ಕೊಟ್ಟ ‘ಗ್ಯಾರೆಂಟಿ’

ದೆಹಲಿ: ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದ್ದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಬಹಿರಂಗಗೊಂಡಿದ್ದು, ಈ ಮಹಾಸಮರದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡ, ತೆಲಂಗಾಣ, ಮಿಜೋರಾಂ ರಾಜ್ಯಗಳಲ್ಲಿ ನಡೆದ ಚುನಾವಣೆಯ ಮತ ಎಣಿಕೆ ಭಾನುವಾರ ನಡೆದಿದ್ದು, ಮೂರು ರಾಜ್ಯಗಳಲ್ಲಿ ಬಿಜೆಪಿ ಭದ್ರವಾಗಿವೆ. ಮಧ್ಯಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಬಿಜೆಪಿ ಪಾರುಪಥ್ಯ ಮೆರೆದರೆ, ಛತ್ತೀಸ್‌ಗಡದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಬಲ ಹೋರಾಟ ನೀಡಿದೆ. ತೆಲಂಗಾಣ ಕಾಂಗ್ರೆಸ್ ಪಾಲಾದರೆ ಮಿಜೋರಾಂ‌ನಲ್ಲಿ ಪ್ರಾದೇಶಿಕ ಪಕ್ಷವೇ ಕಿಂಗ್. ಈ ಮಿನಿ ಮಹಾಸಮರವು ಮು.ಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿಸಲಾಗುತ್ತಿದೆ. ಹಾಗಾಗಿ ಬಿಜೆಪಿ-ಕಾಂಗ್ರೆಸ್ ಪಕ್ಷಗಳ ಭವಿಷ್ಯ ಈ ಫಲಿತಾಂಶದಲ್ಲಿ ಅಡಗಿದೆ ಎಂದು ಪಂಡಿತರು ವಿಶ್ಲೇಷಣೆ ಮಾಡುತ್ತಿದ್ದಾರೆ. ಈ ನಡುವೆ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡ ರಾಜ್ಯಗಳಲ್ಲಿನ ಪ್ರತೀ ಚುನಾವಣೆಗಳಲ್ಲಿ ಬೇರೆ ಪಕ್ಷ ಅಧಿಕಾರಕ್ಕೆ ಬರುವುದು ಸಾಮಾನ್ಯ. ಅದೇ ರೀತಿ, ಈ ಬಾರಿ…

ಛತ್ತೀಸ್‌ಗಡ ಎಲೆಕ್ಷನ್ : ಹಾವು ಏಣಿಯಾಟದಲ್ಲಿ ‘ಕೈ’ ಎದುರು ಮೇಲುಗೈ ಸಾಧಿಸಿದ್ದು ಬಿಜೆಪಿ

ದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿತವಾಗಿದ್ದ ಪಂಚ ರಾಜ್ಯಗಳ ಮಿನಿ ಮಹಾಸಮರದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ತೋರಿಸಿದೆ. ಮಧ್ಯಪ್ರದೇಶ, ರಾಜಸ್ಥಾನದ ರೀತಿಯಲ್ಲೇ ಛತ್ತೀಸ್‌ಗಡ ರಾಜ್ಯದಲ್ಲೂ ಕಮಲ ಪಕ್ಷ ಪ್ರಾಬಲ್ಯ ಮೆರೆದಿದೆ. ಮತ ಎಣಿಕೆಯುದ್ದಕ್ಕೂ ಕಾಂಗ್ರೆಸ್-ಬಿಜೆಪಿ ನಡುವೆ ಹಾವು ಏಣಿಯಾಟ ಮಾದರಿಯಲ್ಲೇ ಕಾಂಗ್ರೆಸ್-ಬಿಜೆಪಿ ನಡುವೆ ಬಲಾಬಲ ವ್ಯಕ್ತವಾಗುತ್ತಿತ್ತು. 90 ಸದಸ್ಯ ಬಲದ ಛತ್ತೀಸ್‌ಗಡದಲ್ಲಿ ಒಂದೊಮ್ಮೆ ಕಾಂಗ್ರೆಸ್ ಪಕ್ಷ ಬಹುಮತ ಗಾಳಿಸುವಷ್ಟು ಸ್ಥಾನಗಳಲ್ಲಿ ಮುಂದೆ ಇದ್ದರೆ, ಮತ್ತೊಂದು ಸುತ್ತಿನಲ್ಲಿ ಬಿಜೆಪಿ ಪಕ್ಷವು ಬಹುಮತ ಸಾಧಿಸುವಷ್ಟು ಮುನ್ನಡೆ ಸಾಧಿಸಿತು. ಹೀಗೆ ಮತಎಣಿಕೆಯುದ್ದಕ್ಕೂ ಕುತೂಹಲಕಾರಿ ಬೆಳವಣಿಗೆ ಸಾಗುತ್ತಾ ಹೋಯಿತು. 90 ಸದಸ್ಯಬಲದ ಛತ್ತೀಸ್‌ಗಡ ವಿಧಾನಸಭೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಛತ್ತೀಸ್‌ಗಡ ವಿಧಾನಸಭೆಯಲ್ಲಿ 46 ಸ್ಥಾನಗಳನ್ನು ಗೆದ್ದ ಪಕ್ಷ ಸರ್ಕಾರ ರಚನೆ ಮಾಡಬಹುದಾಗಿದ್ದು, ಬಿಜೆಪಿ ಅದಕ್ಕಿಂತಲೂ ಹೆಚ್ಚಿನ ಬಹುಮತದೊಂದಿಗೆ ಜಯಭೇರಿ ಭಾರಿಸಿದೆ. ಅಂತಿಮ ಫಲಿತಾಂಶ ಹೀಗಿದೆ. ಒಟ್ಟು…

5 ಸ್ಟೇಟ್ಸ್ ಎಲೆಕ್ಷನ್ : ರಾಜಸ್ಥಾನದಲ್ಲಿ ‘ಬಿಜೆಪಿ’ಯೇ ರಾಜ

ದೆಹಲಿ: ಮಿನಿ ಮಹಾಸಮರದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ತೋರಿಸಿದ್ದು, ರಾಜಸ್ಥಾನದಲ್ಲೂ ಕಮಲ ಪಕ್ಷವೇ ‘ರಾಜ’ ಎನಿಸಿದೆ. ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದ್ದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಯಂತೆಯೇ ಜಯಭೇರಿ ಭಾರಿಸಿದೆ. ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಬಣ್ಣಿಸಲಾಗುತ್ತಿರುವ ಈ ಚುನಾವಣಾ ಪೈಕಿ ರಾಜಸ್ಥಾನದಲ್ಲೂ ಬಿಜೆಪಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿಕೊಂಡಿದೆ. 199 ಸದಸ್ಯಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮಧ್ಯಪ್ರದೇಶ ವಿಧಾನಸಭೆಯಲ್ಲಿ 100 ಸ್ಥಾನಗಳನ್ನು ಗೆದ್ದ ಪಕ್ಷ ಸರ್ಕಾರ ರಚನೆ ಮಾಡಬಹುದಾಗಿದ್ದು, ಬಿಜೆಪಿ ಅದಕ್ಕಿಂತಲೂ ಹೆಚ್ಚಿನ ಬಹುಮತದೊಂದಿಗೆ ಜಯಭೇರಿ ಭಾರಿಸಿದೆ. ಬಲಾಬಲ ಹೀಗಿದೆ. ಒಟ್ಟು ಸ್ಥಾನಗಳು: 199 ಮ್ಯಾಜಿಕ್ ನಂಬರ್: 100  ಬಿಜೆಪಿ – 115 ಕಾಂಗ್ರೆಸ್ – 70 ಇತರರು – 14