ರಾಜ್ಯದಲ್ಲಿ ಇನ್ನೂ ದೂರವಾಗಿಲ್ಲ ಕೊರೋನಾ ಆತಂಕ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಾಣು ಸೋಂಕಿನ ಪ್ರಮಾಣ ಕಡಿಮೆಯಾದಂತಿಲ್ಲ. ಶನಿವಾರ ರಾಜ್ಯದಲ್ಲಿ 1522 ಕೊರೋನಾವೈರಸ್ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರು ನಗರವೊಂದರಲ್ಲೇ ೭೧೯ ಪಾಸಿಟಿವ್ ಕೇಸುಗಳು ಶನಿವಾರ ದೃಢಪಟ್ಟಿದೆ.  ಈ ನಡುವೆ ಒಟ್ಟು 24757 ಸಕ್ರಿಯ ಪ್ರಕರಣಗಳಿದ್ದು, 2133 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೇ ವೇಳೆ, ಸೋಂಕಿನಿಂದ ಶನಿವಾರ 12 ಮಂದಿ ಮೃತಪಟ್ಟಿದ್ದಾರೆ. ಇಂದಿನವರೆಗೆ ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 11750. ಕೋವಿಡ್-19 ಖಚಿತ ಪ್ರಕರಣಗಳ ಸಂಖ್ಯೆ 882608. ಸೋಂಕಿನ ಶೇಕಡಾವಾರು ಪ್ರಮಾಣ ಶೇ. 1. 37 ಆದರೆ ಸೋಂಕಿನಿಂದ ಮೃತಪಟ್ಟವರ ಶೇಕಡಾವಾರು ಪ್ರಮಾಣ ಶೇ. 0.78. ಈ ಕುರಿತಂತೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಆ.ಸುಧಾಕರ್, ರಾಜ್ಯದಲ್ಲಿ ಶನಿವಾರ 1,522 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 2,133 ಜನ ಗುಣಮುಖ ಹೊಂದಿದ್ದಾರೆ. ಶನಿವಾರ 1,10,724 ಟೆಸ್ಟ್ ನಡೆಸಲಾಗಿದ್ದು, ಅವುಗಳಲ್ಲಿ 97,724 (83.74%) RT-PCR ಟೆಸ್ಟ್ ಆಗಿವೆ. ಈವರೆಗೂ…

ಡಿ.14, 15ರಂದು ವಿಧಾನಸಭೆಯಲ್ಲಿ ‘ಒಂದು ರಾಷ್ಟ್ರ-ಒಂದು ಚುನಾವಣೆ’ ಚರ್ಚೆ

ಬೆಂಗಳೂರು: ಒಂದು ರಾಷ್ಟ್ರ-ಒಂದು ಚುನಾವಣೆ ವಿಷಯ ಕುರಿತು ಎರಡು ದಿನಗಳ ಕಾಲ ವಿಧಾನಸಭೆಯಲ್ಲಿ ವಿಶೇಷ ಚರ್ಚೆ ನಡೆಯಲಿದೆ. ಡಿಸೆಂಬರ್ 14 ಮತ್ತು 15ರಂದು ರಾಜ್ಯ ವಿಧಾನಸಭೆಯಲ್ಲಿ ಈ ಚರ್ಚೆ ನಡೆಯಲಿದೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇರಶ್ವರ ಹೆಗಡೆ ಕಾಗೇರಿ ಅವರು ತಿಳಿಸಿದ್ದಾರೆ. ಡಿಸೆಂಬರ್ 07 ರಿಂದ 15 ರ ವರೆಗೆ ನಡೆಯಲಿರುವ 15 ನೇ ವಿಧಾನಸಭೆಯ ಎಂಟನೇ ಅಧಿವೇಶನದ ಮುಖ್ಯಾಂಶಗಳ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರ ಒದಗಿಸಿದ ಅವರು, ನವೆಂಬರ್ 25 ಮತ್ತು 26 ರಂದು ಗುಜರಾತ್ ನ ಕೆವಾಡಿಯಾದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 80ನೇ ಅಖಿಲ ಭಾರತ ಪೀಠಾಸೀನ ಅಧಿಕಾರಿಗಳ ಸಮ್ಮೇಳನದಲ್ಲಿ ಪ್ರಸ್ತಾಪಿಸಿದ ಒಂದು ರಾಷ್ಟ್ರ-ಒಂದು ಚುನಾವಣೆ ಕುರಿತ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಭಾರತದಲ್ಲೇ ಪ್ರಪಥಮವಾಗಿ ಈ ವಿಷಯವನ್ನು ಸದನದಲ್ಲಿ ಸಮಗ್ರವಾಗಿ ಚರ್ಚಿಸಿ ಚಿಂತನ-ಮಂಥನ ನಡೆಸಲು ತೀರ್ಮಾನಿಸಲಾಗಿದೆ ಎಂದರು. ಒಂದು ರಾಷ್ಟ್ರ-ಒಂದು ಚುನಾವಣೆ ಕುರಿತ ಎಲ್ಲಾ…

ಬೆಳಗಾವಿ: ಯಾವುದೇ ಕಾರಣಕ್ಕೂ ಮುಸ್ಲೀಂರಿಗೆ ಟಿಕೇಟ್ ಇಲ್ಲ; ಸಚಿವ ಈಶ್ವರಪ್ಪ

ಬೆಳಗಾವಿ: ಹಿಂದುತ್ವದ ಕೇಂದ್ರವಾದ ಬೆಳಗಾವಿ ಲೋಕಸಭೆಯ ಉಪ ಚುನಾವಣೆಯಲ್ಲಿ ಯಾವುದೇಕಾರಣಕ್ಕೂ ಮುಸ್ಲೀಂರಿಗೆ ಟಿಕೇಟ್ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ಬೇಕಾದರೆ ರಾಯಣ್ಣನ ಶಿಷ್ಯರು, ಶಂಕರಾಚಾರ್ಯರ ಶಿಷ್ಯರಿಗೆ ಅಥವಾ ಚೆನ್ನಮ್ಮಳ ಶಿಷ್ಯರಿಗೆ ಟಿಕೆಟ್ನೀ ಡುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಮುಸ್ಲಿಂ ಸಮಾಜಕ್ಕೆ ಟಿಕೆಟ್ ಕೊಡುವುದಿಲ್ಲ ಎಂ‌ದು ಸ್ಪಷ್ಟಪಡಿಸಿದರು. ಭಾರತೀಯ ಜನತಾ ಪಕ್ಷಕ್ಕೆ ಕುರುಬರ, ಒಕ್ಕಲಿಗರ, ಲಿಂಗಾಯತರ ಅಥವಾ ಬ್ರಾಹ್ಮಣರ ಸಮಾಜದ ಪ್ರಶ್ನೆ ಇಲ್ಲ. ಎಲ್ಲರೂ ಒಟ್ಟಿಗೆ ಕುಳಿತುಕೊಂಡು ಚರ್ಚೆ ಮಾಡುತ್ತೇವೆ. ಇದು ಪ್ರಜಾಪ್ರಭುತ್ವದ ವ್ಯವಸ್ಥೆ, ನಮ್ಮ ಪಕ್ಷ ಬಿಟ್ಟರೆ ಬೇರೆ ಯಾವ ಪಾರ್ಟಿಯಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯಿಲ್ಲ ಎಂದರು. ಯಾರು ಜನರ ಮಧ್ಯೆ ಇರುತ್ತಾರೋ ಅವರನ್ನು ಹುಡುಕಿ ಟಿಕೆಟ್ ಕೊಡಲಾಗುತ್ತದೆ. ಅದನ್ನು ಹೈಕಮಾಂಡ ನಿರ್ಧರಿಸುತ್ತದೆ ಎಂದು ಈಶ್ವರಪ್ಪ ಹೇಳಿದರು.

‘ಯುವರತ್ನ’ದ ‘ಪವರ್ ಆಫ್ ಯೂತ್…’ ಪ್ರೋಮೋಗೆ ಸಕತ್ ಮೆಚ್ಚುಗೆ

ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಚಿತ್ರ ಕನ್ನಡ ಸಿನಿಲೋಕದಲ್ಲಿ ತೀವ್ರ ಕುತೂಹಲ ಕೆರಳುವಂತೆ ಮಾಡಿದೆ. ರಾಜ್ ಪರಿವಾರ ಕೂಡಾ ಈ ಸಿನಿಮಾ ಬಗ್ಗೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಈ ನಡುವೆ’ಯುವರತ್ನ’ ಚಿತ್ರದ ‘ಪವರ್ ಆಫ್ ಯೂತ್…’ ಹಾಡಿನ ಪ್ರೋಮೋ ಬಿಡುಗಡೆಯಾಗಿದೆ.ಸಂತೋಷ್ ಆನಂದರಾಮ್ ನಿರ್ದೇಶಿಸಿರುವ ಈ ಸಿನಿಮಾದ ಹಾಡಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಮೆಚ್ಚುಗೆ ವ್ಯಕ್ತವಾಗಿದೆ.  

ಕೊರೋನಾ ನಿಯಂತ್ರಣ ಲಸಿಕೆ; ಬಯೋಟೆಕ್ ಪಾರ್ಕ್’ಗೆ ಪ್ರಧಾನಿ ಭೇಟಿ

ದೆಹಲಿ: ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಾಣು ಹಾವಳಿಗೆ ಬ್ರೇಕ್ ಹಾಕುವ ಲಸಿಕೆ ಸಿದ್ಧವಾಗಿದೆ. ಈ ಸಂಜೀವಿನಿ ಸಿದ್ಧಪಡಿಸುವಲ್ಲಿ ತೊಡಗಿರುವ ಸಂಶೋಧಕರನ್ನು ಹುರಿದುಂಬಿಸುವ ಪ್ರಯತ್ನಕ್ಕೆ ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ಕೊರೋನಾ ವೈರಸ್ ಲಸಿಕೆ ಅಭಿವೃದ್ಧಿಯ ಪ್ರಸಕ್ತ ಸ್ಥಿತಿಗತಿಯ ಬಗ್ಗೆ ಖುದ್ದು ಅವಲೋಕನ ನಡೆಸಲು ಮುಂದಾಗಿರುವ ಪ್ರಧಾನಿ ಮೋದಿ, ಇಂದು ಬೆಳಿಗ್ಗೆ ಅಹಮದಾಬಾದ್’ಗೆ ತೆರಳಿ, ಝೈಡಸ್ ಬಯೋಟೆಕ್ ಪಾರ್ಕ್’ಗೆ ಭೇಟಿ ನೀಡಿದರು. ಅಲ್ಲಿನ ವಿಜ್ಞಾನಿಗಳೊಂದಿಗೆ ಅವರು ಸಮಾಲೋಚನೆ ನಡೆಸಿ ಕೊರೋನಾಗೆ ಔಷಧಿಯಾಗಿರುವ ಲಸಿಕೆ ಬಗ್ಗೆ ಮಾಹಿತಿ ಪಡೆದರು. ಲಸಿಕೆ ಅಭಿವೃದ್ಧಿ ಪಡಿಸುವ ಕಾರ್ಯದಲ್ಲಿರುವ ಪುಣೆಯ ಸೀರಂ ಇನ್’ಸ್ಟಿಟ್ಯೂಟ್ ಹಾಗೂ ಹೈದರಾಬಾದ್ ಸಮೀಪದ ಹಕೀಂಪೇಟ್’ನಲ್ಲಿನ ಭಾರತ್ ಬಯೋಟೆಕ್ ಘಟಕದ ಪ್ರಧಾನಿ ಭೇಟಿಯೂ ಕುತೂಹಲ ಕೆರಳಿಸಿದೆ.

ಸಿಎಂ ರಾಜಕೀಯ ಕಾರ್ಯದರ್ಶಿ ಏನ್.ಆರ್.ಸಂತೋಷ್ ಆತ್ಮಹತ್ಯೆ ಯತ್ನ

ಬೆಂಗಳೂರು: ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಏನ್.ಆರ್.ಸಂತೋಷ್ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶುಕ್ರವಾರ ನಡೆದಿದೆ. ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದ ಎರಡನೆಯ ಮಹಡಿಯಲ್ಲಿ ನಿದ್ರೆ ಮಾತ್ರೆಗಳನ್ನು ಸೇವಿಸಿ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ತಕ್ಷಣ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತೋಷ್ ಪ್ರಾಣಪಾಯದಿಂದ ಪಾರಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.

‘ಪೊಗರು’ ಬಿಡುಗಡೆಗೆ ದಿನಾಂಕ ಫಿಕ್ಸ್

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಪೊಗರು’ ಚಿತ್ರದ ಬಿಡುಗಡೆ ದಿನಾಂಕ ಕೊನೆಗೂ ಫಿಕ್ಸ್ ಆಗಿದೆ. ಈ ಚಿತ್ರವನ್ನು ಬಿಡುಗಡೆ ಮಾಡಲು ನಿರ್ದೇಶಕ ನಂದಾ ಕಿಶೋರ್ ಎರಡು ದಿನಾಂಕಗಳನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದಾರೆ. ಡಿಸೆಂಬರ್ 25 ಅಥವಾ ಜನವರಿ 14ರಂದು ಬಿಡುಗಡೆ ಮಾಡಲು ಉದ್ದೇಶಿಸಿದ್ದೇನೆ ಎಂದು ನಂದಾ ಕಿಶೋರ್ ತಿಳಿಸಿದ್ದಾರೆ. ಬಿ.ಕೆ.ಗಂಗಾಧರ್ ನಿರ್ಮಿಸಿರುವ ಪೊಗರು’ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿದೆ.

‘ದುರ್ಗಮತಿ ದಿ ಮೈತ್’ ಕುತೂಹಲ

ಬಾಲಿವುಡ್’ನಲ್ಲಿ ಹೊಸ ಸಿನಿಮಾಗಳಿಗೆ ಚೈತನ್ಯ ಸಿಕ್ಕಿದೆ. ಅದರಲ್ಲೂ ಭೂಮಿ ಪೆಡ್ನೆಕರ್ ಮತ್ತು ಅರ್ಷದ್ ವಾರ್ಸಿ ಅಭಿನಯದ ‘ದುರ್ಗಮತಿ ದಿ ಮೈತ್’ ಚಿತ್ರ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಅಶೋಕ್ ನಿರ್ದೇಶಿಸಿರುವ ‘ದುರ್ಗಮತಿ ದಿ ಮೈತ್’ ದ ಟ್ರೈಲರ್ ಬಿಡುಗಡೆಯಾಗಿದ್ದು ಸಿನಿಮಾ ಪ್ರೇಮಿಗಳ ಮೆಚ್ಚುಗೆ ಗಳಿಸುವಲ್ಲೂ ಯಾಹ್ಯಾಸ್ವಿಯಾಗಿದೆ.  

ಶಿವಣ್ಣ ಪುತ್ರಿ ನಿವೇದಿತ ಅವರಿಗೆ ‘ಹನಿಮೂನ್’ ವಿಸ್ವಾಸ

ಕನ್ನಡ ಚಿತ್ರರಂಗದಲ್ಲೀಗ ಚೇತರಿಕೆ ಕಂಡುಬಂದಿದೆ. ರಾಜ್ ಕುಟುಂಬದ ಕುವರಿ ನಿವೇದಿತಾ ಹೆಸರೂ ಇದೀಗ ಸುದ್ದಿಯಲ್ಲಿದೆ. ಡಾ. ಶಿವರಾಜ್ ಕುಮಾರ್ ರವರ ಪುತ್ರಿ ನಿವೇದಿತ ಶಿವರಾಜ್ ಕುಮಾರ್ ಹಾಗೂ ಸಕ್ಕತ್ ಸ್ಟುಡಿಯೊ ಸಹನಿರ್ಮಾಣದ ವೆಬ್ ಸರಣಿ ಹನಿಮೂನ್ ಟ್ರೈಲರ್ ಬಿಡುಗಡೆಯಾಗಿದೆ.ಈ ಟ್ರೈಲರ್ ಸಾಮಾಜಿಕ ಜಾಲತಾಣದಲ್ಲಿ ಸಕತ್ ಲೈಕ್ ಗಿಟ್ಟಿಸಿಕೊಳ್ಳುತ್ತಿದೆ.  

ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಆಕಸ್ಮಿಕ; ಐವರ ಸಾವು

ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿ ಐವರು ಸಾವನ್ನಪ್ಪಿದ ಘಟನೆ ಕಳೆದ ಮಧ್ಯ ರಾತ್ರಿ ರಾಜ್ ಕೋಟ್ ಬಳಿ ಸಂಭವಿಸಿದೆ. ಗುಜರಾತ್ ನ ರಾಜ್ ಕೋಟ್ ಜಿಲ್ಲೆಯ ಉದಯ್ ಶಿವಾನಂದ್ ಕೋವಿಡ್ಆಸ್ಪತ್ರೆಯಲ್ಲಿ ಬೆಂಕಿ ದುರಂತ ಸಂಭವಿಸಿದೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ. ಘಟನೆ ಸಂಬಂಧ ಮುಖ್ಯಮಂತ್ರಿ ವಿಜಯ್ ರೂಪಾಣಿ ತನಿಖೆಗೆ ಆದೇಶಿಸಿದ್ದಾರೆ.