ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನ ಬ್ರಹ್ಮಕಲಶೋತ್ಸವ; ಸಚಿವ ಪ್ರಭು ಚವ್ಹಾಣ್ ಭೇಟಿ

ಉಡುಪಿ: ಕುಂಜಿಬೆಟ್ಟುವಿನ ಇತಿಹಾಸ ಪ್ರಸಿದ್ಧ ಶ್ರೀ ವೆಂಕಟರಮಣ ದೇವರಿಗೆ, ಶ್ರೀ ಈಶ್ವರ, ಶ್ರೀ ಗಣಪತಿ ಮತ್ತು ಮುಖ್ಯಪ್ರಾಣ ದೇವರಿಗೆ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಸಮಾರಂಭ ಅದ್ದೂರಿಯಾಗಿ ನೆರವೇರಿದೆ. ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಕೊನೆಯ ದಿನವಾದ ಮಂಗಳವಾರ ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಬಿ. ಚವ್ಹಾಣ್ ಅವರು ಭೇಟಿ ನೀಡಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡರು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶಾಸಕ ಕೆ. ರಘುಪತಿ ಭಟ್ ಸಚಿವರನ್ನು ದೇವಸ್ಥಾನಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಶ್ರೀ ಕರಂಬಳ್ಳಿ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರುಗಳಾದ ಕೆ. ಲಕ್ಷ್ಮಣ ಶೇರಿಗಾರ್, ಸುಂದರ ಅಮೀನ್, ಶೈಲಶ್ರೀ ದಿವಾಕರ್ ಶೆಟ್ಟಿ, ಪ್ರಧಾನ ಅರ್ಚಕರಾದ ದಿವಾಕರ ಐತಾಳ್, ಪರ್ಯಾಯ ಅರ್ಚಕರಾದ ಗೋವಿಂದ ಐತಾಳ್ ಹಾಗೂ ರಾಧಾಕೃಷ್ಣ ಭಾರಿತ್ತಾಯ, ರಮೇಶ್ ಭಾರಿತ್ತಾಯ, ವಾಸುದೇವ್ ಭಟ್ ಉಪಸ್ಥಿತರಿದ್ದರು.

ಗುರುಪುರದಲ್ಲಿ ‘ಗುತ್ತುದ ವರ್ಸೋದ ಪರ್ಬೋ’; ಕೈಂಕರ್ಯದ ಸಿದ್ದತೆಗೆ ಅಂತಿಮ ಸ್ಪರ್ಶ

ಮಂಗಳೂರು: ತುಳನಾಡು ಪರಶುರಾಮನಿಂದ ಸೃಷ್ಟಿಯಾದ ತಪೋಭೂಮಿ ಎಂಬ ನಂಬಿಕೆ ಇದೆ. ಸಾಲು ಸಾಲು ದುರ್ಗಾ ದೇವಿಗಳ ತಾಣ ಎಂಬ ಪ್ರತೀತಿಗೆ ಪಾತ್ರವಾಗಿರುವ ಕರಾವಳಿಯಲ್ಲಿ ತುಳು ಪರಂಪರೆಯ ದೈವಾರಾಧನೆಗೂ ಮಹತ್ವವಿದೆ. ಸೀಮೆಗೊಂದು ದೈವಸ್ಥಾನ, ಕುಟುಂಬಕ್ಕೊಂದು ದೈವಸ್ಥಾನ ಹೀಗೆ ಭೂತಾರಾಧನೆಯ ಮಜಲುಗಳು ಅನೇಕ ಇವೆ. ಅದರಲ್ಲೂ ‘ಗುತ್ತು’ ಪರಂಪರೆಯಲ್ಲಿನ ಆಚರಣೆಯ ಗತ್ತು ಗಮ್ಮತ್ತು ತುಳುಪರಂಪರೆಗಷ್ಟೇ ಸೀಮಿತ ಎನ್ನಬಹುದು. ಅಂತಹಾ ಗುತ್ತುಗಳ ವರ್ಷದ ಪರ್ಬೋ ತನ್ಬದೇ ಅದ ಆಕರ್ಷಣೆಯಿಂದ ನಾಡಿನ ಗಮನ ಕೇಂದ್ರೀಕರಿಸುತ್ತದೆ. ಈ ಸೊಗಸು ಸೊಬಗಿಗೆ ಸಾಕ್ಷಿಯಾಗುತ್ತದೆ ಮಂಗಳೂರು ಹೊರವಲಯದ ಗುರುಪುರದ ಗೋಳಿದಡಿ ಗುತ್ತು. ಪ್ರತೀ ವರ್ಷದಂತೆ ಈ ಬಾರಿಯೂ ಇಲ್ಲಿ ‘ಗುತ್ತುದ ವರ್ಸೋದ ಪರ್ಬೋ’ ನಡೆಯಲಿದೆ. ಜನವರಿ 19 ಮತ್ತು 20ರಂದು ನಡೆಯುವ ಅನನ್ಯ ವೈಭವದ ಈ ಕೈಂಕರ್ಯದ ಸಿದ್ದತೆಗೆ ಅಂತಿಮ ಸ್ಪರ್ಷ ಸಿಕ್ಕಿದೆ. ದೇವಾಲಯಗಳಲ್ಲಿ ನೆರವೇರುವ ವರ್ದಂತ್ಯುತ್ಸವದ ರೀತಿಯಲ್ಲೇ ಈ ದೈವಾರಾಧನೆಯ, ನ್ಯಾಯದೇಗುಲ ಸ್ವರೂಪದ ಗದ್ದುಗೆಯಲ್ಲಿ ವಾರ್ಷಿಕ ಜಾತ್ರೆ…

ಭಾಲ್ಕಿಯಲ್ಲಿ ಬಾಲಯೇಸು ಮಹೋತ್ಸವ; ಕಣ್ಮನ ಸೆಳೆದ ದೃಶ್ಯ ವೈಭಾವ

ಬೀದರ್: ಗುಲ್ಬರ್ಗಾ ಧರ್ಮಪ್ರಾಂತ್ಯದ ಪುಣ್ಯಕ್ಷೇತ್ರ ಭಾಲ್ಕಿ ನಗರದ ಬಾಲ ಯೇಸು ದೇವಾಲಯದಲ್ಲಿ ವಾರ್ಷಿಕ ಮಹೋತ್ಸವವು ಅದ್ದೂರಿಯಾಗಿ ನೆರವೇರಿತು. ನಾಡಿನಾದ್ಯಂತ ಬಾಲ ಎಸು ದೇವಾಲಯಗಳಲ್ಲಿ ವಾರ್ಷಿಕ ಉತ್ಸವ ಜರುಗಿದ್ದು ಬಾಲ್ಕಿಯಲ್ಲಿನ ಈ ಮಹೋತ್ಸವವು ವಿಶೇಷತೆಗಳಿಂದಾಗಿ ಗಮನಸೆಳೆಯಿತು. ಈ ಉತ್ಸವ ಧಾರ್ಮಿಕ ಕೈಂಕರ್ಯಕ್ಕಷ್ಟೇ ಅಲ್ಲ ಸಾಮಾಜಿಕ ಕಾರ್ಯಕ್ರಮದಿಂದಲೂ ಸಾರ್ವಜನಿಕರ ಗಮನ ಕೇಂದ್ರೀಕರಿಸಿತು. ಪ್ರತೀ ವರ್ಷವೂ ಈ ಬಾಲ ಯೇಸು ದೇಗುಲದಲ್ಲಿ ವಾರ್ಷಿಕ ಮಹೋತ್ಸವ ವಿರಂಭಣೆಯಿಂದ ನೆರವೇರುತ್ತಿದೆ. ಈ ಬಾರಿ ಕೊರೋನಾ ಕಾರಣದಿಂದಾಗಿ ಕೆಲವು ಮಾನದಂಡಗಳನ್ನು ಅನುಸರಿಸಿದ್ದರಿಂದಾಗಿ ಭಕ್ತರಿಗೆ ಅಲ್ಪ ಮಟ್ಟಿನ ಅನಾನುಕೂಲತೆಗಳು ಉಂಟಾಗಿದೆಯಾದರೂ ಭಕ್ತ ಸಮೂಹವು ದೇವಾಲಯದ ನಿಯಮಗಳನ್ನು ಪಾಲಿಸಿ ಸಹಕಾರ ನೀಡಿದ್ದಾರೆ. ಅನನ್ಯ ಪೂಜಾ ವೈವಿಧ್ಯ ಬಾಲ ಎಸು ಮಹೋತ್ಸವ ಸಂದರ್ಭದಲ್ಲಿ ಫಾದರ್ ಕರುನೇಶ್ ದೇವರ ವಾಕ್ಯವನ್ನು ಬೋಧಿಸಿದರೆ, ನಂತರ ಫಾದರ್ ಜಾರ್ಜ್ ಮಾರ್ಗದರ್ಶನದಲ್ಲಿ ಆರಾಧನೆ ವೈಭವ ಭಕ್ತರ ಮನಸೆಳೆಯಿತು. ಪ್ರಧಾನ ಯಾಜಕ ರಾಗಿ ಫಾದರ್ ಸ್ಟ್ಯಾನಿ ಲೋಬೊ…

ಕಟೀಲು ಶ್ರೀ ದೇವಿಗೆ ಧನುರ್ಮಾಸದ ಬೆಳಿಗ್ಗಿನ ಮಹಾಪೂಜೆ.. ಇಲ್ಲಿದೆ ವಿಶೇಷ ಕೈಂಕರ್ಯದ ವೀಡಿಯೊ..

ಮಂಗಳೂರು: ವೈಕುಂಠ ಏಕಾದಶಿ ದಿನವಾದ ಇಂದು ಕರಾವಳಿಯ ದೇವಸ್ಥಾನಗಳಲ್ಲಿ ವಿಶೇಶ ಉತ್ಸವಗಳು ಗಮನಸೆಳೆದಿವೆ. ಕೃಷ್ಣನ ನಾಡು ಉಡುಪಿಯ ಮಠಕ್ಕೆ ಭಕ್ತಸಾಗರವೇ ಹರಿದುಬಂದಿದೆ. ಇದೇ ವೇಳೆ, ಪ್ರತೀ ಹಬ್ಬಗಳಂದು ವಿಶೇಷ ಉತ್ಸವಗಳಿಗೆ ಸಾಕ್ಷಿಯಾಗುತ್ತಿರುವ, ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ ಸಹಿತ ಕರಾವಳಿಯ ದೇಗುಲಗಳಲ್ಲಿ ವಿಶೇಷ ಪೂಜೆಗಳಲ್ಲಿ ಆಸ್ತಿಕರು ಭಾಗವಹಿಸಿ ಪುನೀತರಾದರು. ಈ ನಡುವೆ ಕಟೀಲು ಶ್ರೀ ದೇವಳದಲ್ಲಿ ಶ್ರೀ ದೇವಿಗೆ ಧನುರ್ಮಾಸದ ಬೆಳಿಗ್ಗಿನ ಮಹಾಪೂಜೆ ನೆರವೇರಿತು. ಭಾರೀ ಸಂಖ್ಯೆಯಲ್ಲಿ ಭಕ್ತರು ಈ ಪೂಜಾ ಕ್ಷಣಕ್ಕೆ ಸಾಕ್ಷಿಯಾದರು.

ವೈಕುಂಠ ಏಕಾದಶಿ.. ಎಲ್ಲೆಲ್ಲೂ ಗೋವಿಂದನ ಸ್ಮರಣೆ

ವೈಕುಂಠ ಏಕಾದಶಿ. ಬದುಕಿನ ಸಕಲ ಕಷ್ಟಗಳನ್ನೂ ತೊಲಗಿಸಿ ಬಾಳು ಬಂಗಾರವಾಗಿಸು ಎಂದು ದೇವರಲ್ಲಿ ಪ್ರಾರ್ಥಿಸುವ ಕ್ಷಣ. ವೈಕುಂಠದ ಬಾಗಿಲು ತೆರೆದಿದೆ ಎಂಬ ನಂಬಿಕೆಯೂ ಆಸ್ಥಿಕರದ್ದು. ಹಾಗಾಗಿಯೇ ನಾಡಿನ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಮಹೋತ್ಸವಗಳೇ ನೆರವೇರುತ್ತಿದೆ. ಬೆಂಗಳೂರಿನ ಇಸ್ಕಾನ್ ದೇಗುಲ, ವೈಯ್ಯಾಲಿಕಾಲ್ ಬಳಿಯ ತಿರುಮಲ ದೇವಾಲಯ ಸಹಿತ ಬಹುತೇಕ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಉತ್ಸವಗಳು ಭಕ್ತರ ಗಮನಸೆಳೆದಿದೆ. ವೈಕುಂಠ ಕಥಾಸಾರ ಹೀಗಿದೆ. ಪದ್ಮ ಪುರಾಣದಲ್ಲಿ ಹೇಳಲಾದ ಕಥೆಯಇಲ್ಲಿ ಗಮನಾರ್ಹ. ಮುರನೆಂಬ ರಾಕ್ಷಸನು ದೇವತೆಗಳಿಗೆ ತುಂಬಾ ಉಪಟಳ ಕೋಡುತ್ತಿದ್ದನಂತೆ. ಆಗ ವಿಷ್ಣುನೇ ಆ ರಾಕ್ಷಸನ ಸಂಹಾರಕ್ಕೆ ಮುಂದಾಗುತ್ತಾನಂತೆ.. ವಿಷ್ಣುವಿನ ಅಂಶದಿಂದ ಪ್ರಕಟಗೊಂಡ ‘ಹೈನಮತಿ’ ಎಂಬ ಸ್ತ್ರೀ ದೇವತೆ ಆ ರಾಕ್ಷಸನನ್ನು ಸಂಹರಿಸುತ್ತಾಳೆ. ಆಗ ವಿಷ್ಣುವು ಸಂಪ್ರಿತಗೊಂಡು ಏನಾದರೂ ವರವನ್ನು ಕೇಳು ಎಂದು ಆ ದೇವತೆಗೆ ಹೇಳುತ್ತಾನೆ. ಆಗ ಅವಳು ‘ಯಾರು ಈ ವೈಕುಂಠ ಏಕಾದಶಿ ದಿನದಂದು ವ್ರತವನ್ನು…

ಪೊಳಲಿ ರಾಜರಾಜೇಶ್ವರಿ ದೇವಾಲಯ ಬಳಿ ಸ್ವಚ್ಛ ಭಾರತ್

ಮಂಗಳೂರು: ಗಾಂಧೀ ಜಯಂತಿ ದಿನವಾದ ಇಂದು ಮಂಗಳೂರು ಸಮೀಪದ ಪೊಳಲಿ ರಾಜರಾಜೇಶ್ವರಿ ದೇವಾಲಯ ಬಳಿ ಯುವಕರ ಸಮೂಹ ವಿಶಿಷ್ಟ ಕಾರ್ಯಕ್ರಮ ಆಯೋಜಿಸುವ ಮೂಲಕ ಗಮನಸೆಳೆದರು. ಪುರಾಣ ಪ್ರಸಿದ್ಧ ಪೊಳಲಿ ಕ್ಷೇತ್ರ ಸುತ್ತಮುತ್ತಲ ಪ್ರದೇಶಗಳನ್ನು ಸ್ವಚ್ಛ ಭಾರತ್ ಅಭಿಯಾನ ಮೂಲಕ ಶುಚಿಗೊಳಿಸಲಾಯಿತು. ಬಿಜೆಪಿ ಯುವಮೋರ್ಚಾ ಬಂಟ್ವಾಳ ಇದರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ವಠಾರವನ್ನು ಸ್ವಚ್ಛಗೊಳಿಸಿದ ಕೈಂಕರ್ಯದಲ್ಲಿ ಗ್ರಾಮಸ್ಥರೂ ಸಾಥ್ ನೀಡಿದರು.   ಬಿಜೆಪಿ ಮಂಡಲ ಉಪಾಧ್ಯಕ್ಷರಾದ ಚಂದ್ರವತಿ ಪೊಳಲಿ, ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ್ ಬಜ, ಯುವಮೋರ್ಚಾ ಅಧ್ಯಕ್ಷರಾದ ಪ್ರದೀಪ್ ಅಜ್ಜಿಬೆಟ್ಟು, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನೇಶ್ ದಂಬೆದಾರು, ಜಿಲ್ಲಾ ಯುವಮೋರ್ಚಾ ಸದಸ್ಯರಾದ ಕಿಶೋರ್ ಪಲ್ಲಿಪ್ಪಾಡಿ ಸೇರಿದಂತೆ ಅನೇಕ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಅನಂತ ಚತುರ್ದಶಿ ವ್ರತ; ಕೊಂಚಾಡಿ ಕಾಶೀ ಮಠದಲ್ಲಿ ವಿಶೇಷ ಕೈಂಕರ್ಯ

ಮಂಗಳೂರು : ಕಡಲ ತಡಿ ಮಂಗಳೂರಿನ ಪುಣ್ಯ ಕ್ಷೇತ್ರ ಕೊಂಚಾಡಿ ಶ್ರೀ ಕಾಶೀ ಮಠದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಗಮನ ಸೆಳೆಯುತ್ತಿವೆ. ಶ್ರೀ ಅನಂತ ಚತುರ್ದಶಿ (ನೋಪಿ) ವ್ರತ ಪ್ರಯುಕ್ತ ಕೊಂಚಾಡಿ ಶ್ರೀ ಕಾಶೀ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿ ಸಹಿತ ಹಲವರು ಭಾಗಿಯಾದರು. ಚಾತುರ್ಮಾಸ ವ್ರತ ಆಚರಿಸುತ್ತಿರುವ ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ಸಂಸ್ಥಾನದ ದೇವರ ಸಮ್ಮುಖದಲ್ಲಿ ವಿಶೇಷವಾಗಿ ಅನಂತ ಚತುರ್ದಶಿ ಕಲಶ ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿತು. ದೇವರಿಗೆ ವಿಶೇಷವಾಗಿ ತಯಾರಿಸಲ್ಪಟ್ಟ ನೈವೇದ್ಯ ಸಮರ್ಪಿಸಲಾಯಿತು. ಇದನ್ನೂ ಓದಿ.. ಕೊಂಚಾಡಿ ಕಾಶೀ ಮಠದಲ್ಲಿ ದಶಮಸ್ಕಂದ ಹವನ; ಬುಧವಾರ ಸೀಮೋಲಂಘನ ಕೈಂಕರ್ಯ  

ಕೊಂಚಾಡಿ ಕಾಶೀ ಮಠದಲ್ಲಿ ದಶಮಸ್ಕಂದ ಹವನ; ಬುಧವಾರ ಸೀಮೋಲಂಘನ ಕೈಂಕರ್ಯ

ಮಂಗಳೂರು : ಗೌಡ ಸಾರಸ್ವತ ಸಮಾಜದ ಪರಮ ಪೂಜ್ಯ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ ವ್ರತವು ಸೆಪ್ಟೆಂಬರ್ 2ರಂದು ಸಮಾಪನಗೊಳ್ಳಲಿದೆ. ಈ ಪ್ರಯುಕ್ತ ಶ್ರೀಗಳವರ ಚಾತುರ್ಮಾಸ ವ್ರತದ ಸೀಮೋಲಂಘನ ಕಾರ್ಯಕ್ರಮ ಜರುಗಲಿದೆ. ಸಂಜೆ 5:30 ಕ್ಕೆ ಶ್ರೀ ವೆಂಕರಮಣ ದೇವಳಕ್ಕೆ ಭೇಟಿ ನೀಡಿ ವೀರ ವೆಂಕಟೇಶ ದೇವರ ದರ್ಶನ ಪಡೆಯಲಿದ್ದು ಬಳಿಕ ಸಮಸ್ತ ಸಮಾಜ ದ ಪರವಾಗಿ ಶ್ರೀ ದೇವಳದ ಆಡಳಿತ ಮಂಡಳಿ ವತಿಯಿಂದ ಶ್ರೀಗಳವರ ಪಾದ ಪೂಜೆ ನೆರವೇರಲಿದೆ. ಬಳಿಕ ದೇವಳದಲ್ಲಿ ಆಶೀರ್ವಚನ ಕಾರ್ಯಕ್ರಮ ನೆರವೇರಲಿದೆ. ಕೊರೋನಾ ಮಹಾಮಾರಿಯನ್ನು ತಡೆಗಟ್ಟು ವ ಹಿನ್ನೆಲೆಯಲ್ಲಿ ಸರಕಾರದ ಆದೇಶ ಹಾಗೂ ನಿಯಮ ಪ್ರಕಾರ ದೇವಳದ ಒಳಗಡೆ 50 ಜನರಿಗಿಂತ ಹೆಚ್ಚು ಜನರು ಪಾಲ್ಗೊಳ್ಳುವ ಅವಕಾಶ ಇಲ್ಲ. ಹಾಗಾಗಿ ದೇವಳದ ಆಡಳಿತ ಮಂಡಳಿ ಮತ್ತು ಅರ್ಚಕರಿಗೆ ಹಾಗೂ ವಿಶೇಷ ಆಹ್ವಾನಿತರಿಗೆ ಮಾತ್ರ ದೇವಳದ ಒಳಗಡೆ ಪ್ರವೇಶಿಸುವ…

ರಾಮಮಂದಿರ ಶಿಲಾನ್ಯಾಸ; ಶ್ರೀ ಕ್ಷೇತ್ರ ಪೊಳಲಿಯಲ್ಲಿ ಕೈಂಕರ್ಯ

ಮಂಗಳೂರು: ಬಹುತೇಕ ಹಿಂದೂ ಸಂಘಟನೆಗಳ ಪ್ರಮುಖರೂ ಕೊರೋನಾ ಸಂಕಟದಿಂದಾಗಿ ಅಯೋಧ್ಯೆಯ ಸಮಾರಂಭದಲ್ಲಿ ಭಾಗಿಯಾಗಿಲ್ಲ. ಬದಲಾಗಿ ತಮ್ಮ ಊರುಗಳಲ್ಲೇ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆಯಲೆಂದು ಪುರಾಣ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ವಿಶೇಷ ಕೈಂಕರ್ಯ ನೆರವೇರಿಸಲಾಯಿತು. ಪೊಳಲಿ ಕ್ಷೇತ್ರದಲ್ಲಿ ಅಮ್ಮನವರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ನೇತೃತ್ವದಲ್ಲಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಪ್ರಾರ್ಥನೆ ನೆರವೇರಿತು. ಬಿಜೆಪಿ ನಾಯಕರಾದ ದೇವಪ್ಪ ಪೂಜಾರಿ, ವೆಂಕಟೇಶ್ ನಾವಡ, ತಾ.ಪಂ ಸದಸ್ಯ ಯಶವಂತ ಪೊಳಲಿ, ಯುವ ಮೋರ್ಚಾದ ಸುದರ್ಶನ್ ಬಜ, ಪ್ರದೀಪ್ ಅಜ್ಜಿಬೆಟ್ಟು, ಅಶ್ವಥ್, ಕಾರ್ತಿಕ್ ಬಳ್ಳಾಲ್, ಕಿಶೋರ್ ಪಲ್ಲಿಪ್ಪಾಡಿ, ಲೋಕೇಶ್ ಭರಣಿ, ನಂದರಾಮ್ ರೈ, ಸುಕೇಶ್ ಚೌಟ, ವಾಮನ ಆಚಾರ್ಯ ಮೊದಲಾದವರು ಈ ಕೈಂಕರ್ಯದಲ್ಲಿ ಭಾಗವಹಿಸಿದ್ದರು. ಇನ್ನೊಂದೆಡೆ, ಮಂಗಳೂರಿನ ಬೆಳ್ಳೂರಿನಲ್ಲಿ ಹಿಂದೂ ಕಾರ್ಯಕರ್ತರು ವೆಶೇಷ ಪೂಜಾ ಕಾರ್ಯಕ್ರಮ ನೆರವೇರಿಸಿ ಅಯೋಧ್ಯೆಯಲ್ಲಿನ ಕಾರ್ಯಕ್ರಮಕ್ಕೆ…

ಕಾಶೀ ಮಠದಲ್ಲಿ ಋಗುಪಾಕರ್ಮ; ಸಂಯಮಿಂದ್ರ ತೀರ್ಥರಿಂದ ವಿಶೇಷ ಕೈಂಕರ್ಯ

ಮಂಗಳೂರು : ಬಂದರು ನಗರಿಯ ಕೊಂಚಾಡಿಯಲ್ಲಿರುವ ಕಾಶೀ ಮಠದಲ್ಲಿ ಇದೀಗ ವಿಶೇಷ ಉತ್ಸವ ಕಾಲ. ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿ ಅವರು ಈ ಕ್ಷೇತ್ರದಲ್ಲಿ ಚಾತುರ್ಮಾಸ್ಯ ಆಚರಿಸುತ್ತಿದ್ದು ಈ ಹಿನ್ನೆಲೆಯಲ್ಲಿ ನಿತ್ಯ ಧಾರ್ಮಿಕ ಕಾರ್ಯಕ್ರಮಗಳು ಆಯೋಜಿತವಾಗಿವೆ. ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ಮಂಗಳವಾರ ನೂಲ ಹುಣ್ಣಿಮೆ- ಋಗುಪಾಕರ್ಮ ಪ್ರಯುಕ್ತ ವಿಶೇಷ ಕೈಂಕರ್ಯ ನೆರವೇರಿತು. ಚಾತುರ್ಮಾಸ ನಿರತ ಶ್ರೀಗಳವರು ಶ್ರೀ ಸಂಸ್ಥಾನದ ಆರಾಧ್ಯ ದೇವರಾದ ಶ್ರೀ ವ್ಯಾಸರಘುಪತಿ ನರಸಿಂಹ ದೇವರಿಗೆ ವೈದಿಕ ವಿಧಿ ವಿಧಾನದೊಂದಿಗೆ ಪೂಜಿಸಲ್ಪಟ್ಟ ಪವಿತ್ರ ನೂಲನ್ನು ತೊಡಿಸಿದರು. ಬಳಿಕ ನೆರೆದ ಸಮಾಜ ಬಾಂಧವರಿಗೆ ಯಜ್ನೋಪವೀತಧಾರಣೆ ಶ್ರೀಗಳವರ ಸಾರಥ್ಯದಲ್ಲಿ ನೆರವೇರಿತು. ಶ್ರಾವಣ ಶುದ್ಧ ಪೌರ್ಣಮಿ (ನೂಲ ಹುಣ್ಣಿಮೆಯ)ಯಂದು ಆಚರಿಸಲಾಗುವ ಯಜ್ಞೋಪವೀತ ಧಾರಣೆ ನಗರದ ಸೇರಿದಂತೆ ತಾಲೂಕಿನ ಹಲವು ಭಾಗಗಳಲ್ಲಿ ಭಾನುವಾರ…