ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ನಾಲ್ಕು ದಿನ ಮಳೆ ಸಾಧ್ಯತೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಮಿಳುನಾಡಿನ ಕರಾವಳಿ ತೀರದಲ್ಲಿ ಭಾರೀ ಮಳೆಯಾಗಲಿದ್ದು, ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲೂ ನಾಲ್ಕು ದಿನಗಳ ಕಾಲ ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಗುತ್ತಿಗೆದಾರ ಅಂಬಿಕಾಪತಿ ಸಾವಿನ ಪ್ರತಿಧ್ವನಿ; ಆ ಪ್ರಭಾವಿ ಸಚಿವರ ಬಗ್ಗೆ ತನಿಖೆಗೆ ಬಿಜೆಪಿ ಆಗ್ರಹ

ಬೆಂಗಳೂರು: ಗುತ್ತಿಗೆದಾರ ಅಂಬಿಕಾಪತಿ ಸಾವು ಬಗ್ಗೆ ಉನ್ನತಮಟ್ಟದ ತನಿಖೆಯ ಅಗತ್ಯವಿದೆ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಗುತ್ತಿಗೆದಾರ ಅಂಬಿಕಾಪತಿ ಸಾವು ಸಹಜವಲ್ಲವೆಂದಿರುವ ಕೆಂಪಣ್ಣನವರ ಹೇಳಿಕೆಯನ್ನು ಸರ್ಕಾರ ಹಾಗು ಮಾಧ್ಯಮಗಳು ಗಂಭೀರವಾಗಿ ಪರಿಗಣಿಸಬೇಕು ಎಂದಿರುವ ಯತ್ನಾಳ್, ಅಂಬಿಕಾಪತಿ ಮನೆಯಲ್ಲಿ 40 ಕೋಟಿ ಹಣ ಆದಾಯ ತೆರಿಗೆ ದಾಳಿಯ ವೇಳೆ ಸಿಕ್ಕಿತ್ತು. ಈ ಹಣ ಸರ್ಕಾರ ಪ್ರಭಾವಿ ಮಂತ್ರಿ ಹಾಗು ಒಬ್ಬ ಪ್ರಭಾವಿ ರಾಜಕಾರಣಿಯ ಮಗನಿಗೆ ಸೇರಿದ್ದು ಎಂಬ ಸುದ್ದಿಯೂ ಇದೆ ಎಂದು ಬೊಟ್ಟು ಮಾಡಿದ್ದಾರೆ. ಆದಾಯ ತೆರಿಗೆ ಇಲಾಖೆಗೆ ಪ್ರಕರಣದ ಕುರಿತು ಹೇಳಿಕೆ ನೀಡಿದ್ದ ಅಂಬಿಕಾಪತಿ ಯಾರ ಹೆಸರುಗಳನ್ನೂ ಹೇಳಿದ್ದಾರೋ, ಆ ಹಣ ಯಾರದ್ದು ಎಂದು ಹೇಳಿದ್ದರೋ ಎಂಬ ಅಂಶವು ತನಿಖೆಯಲ್ಲಿ ಬಯಲಾಗಬೇಕಿದೆ. ಅಂಬಿಕಾಪತಿಯ ಸಾವಿನ ಬಗ್ಗೆಯೂ ಕೂಲಂಕುಷವಾಗಿ ತನಿಖೆಯಾಗಬೇಕು. 2 — Basanagouda R Patil (Yatnal) (@BasanagoudaBJP) November 30, 2023…

NEP ಜಟಾಪಟಿ: ಕಾಂಗ್ರೆಸ್ ವಿರುದ್ದ ಬಿಜೆಪಿ ಆಕ್ರೋಶ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ) ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ಇಲ್ಲಿನ ರಾಜ್ಯ ಸರಕಾರದ ರಾಜಕೀಯಪ್ರೇರಿತ ನಿರ್ಧಾರದಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಲಿದೆ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯಕ್ರಮ ಮತ್ತು ಶಿಕ್ಷಣ ನೀತಿ ಪ್ರತ್ಯೇಕ. ಇದರ ಪರಿಜ್ಞಾನ ಇಲ್ಲಿನ ಸಿಎಂ, ಶಿಕ್ಷಣ ಸಚಿವರಿಗೆ ಇದೆಯೇ ಗೊತ್ತಿಲ್ಲ. ಕಲಿಯುವಿಕೆ ಮತ್ತು ಕಲಿಸುವುದು ಇದು ರಾಷ್ಟ್ರೀಯ ಶಿಕ್ಷಣ ನೀತಿ ಎಂದು ವಿವರಿಸಿದರು. ಹಳೆಯ ನೀತಿಯಲ್ಲಿ ಇದ್ದ ನ್ಯೂನತೆಗಳನ್ನು ಹೋಗಲಾಡಿಸಿ 34 ವರ್ಷಗಳ ಬಳಿಕ ಹೊಸ ನೀತಿ ತರಲಾಗಿದೆ. ಸಮಾನತೆ, ಗುಣಮಟ್ಟದ ಶಿಕ್ಷಣ ಕೊಡಬೇಕಿದೆ. ಇದಕ್ಕಾಗಿ 3ನೇ ರಾಷ್ಟ್ರೀಯ ಶಿಕ್ಷಣ ನೀತಿ ತರಲಾಗಿದೆ. ತಯಾರಿ, ಅಧ್ಯಯನ, ಚರ್ಚೆ ಇಲ್ಲದೆ ಏಕಾಏಕಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೊನೆಗೊಳಿಸುತ್ತೇವೆ ಎನ್ನುವ, 2024ರಿಂದ ರಾಜ್ಯ ಶಿಕ್ಷಣ…

ಈಗ ವಿಧಾನಸಭಾ ಚುನಾವಣೆ ನಡೆದರೆ ಬಿಜೆಪಿಗೆ 40 ಸೀಟ್ ಸಹ ಬರಲ್ಲ

ಹುಬ್ಬಳ್ಳಿ: ರಾಜ್ಯದಲ್ಲಿ ಬಿಜೆಪಿ ನೆಲಕಚ್ಚಿದ್ದು ಈಗ ಮತ್ತೊಮ್ಮೆ ವಿಧಾನಸಭಾ ಚುನಾವಣೆ ನಡೆದರೆ ಬಿಜೆಪಿಗೆ 40 ಸೀಟು ಗೆಲ್ಲಲು ಸಾಧ್ಯವಿಲ್ಲ ಎಂದು ಮಾಜಿ ಕಾಂಗ್ರೆಸ್ ನಾಯಕ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಗದೀಶ್‌ ಶೆಟ್ಟರ್‌, ರಾಜ್ಯದಲ್ಲಿ ಬಿಜೆಪಿ ರಿಪೇರಿ ಮಾಡಲಾಗದಷ್ಟು ಹದಗೆಟ್ಟಿದೆ. ಈಗ ಚುನಾವಣಾ ನಡೆದರೆ ಬಿಜೆಪಿಗೆ 66 ಅಲ್ಲ 40 ಸೀಟ್ ಸಹ ಬರಲ್ಲ. ವಿಜಯೇಂದ್ರ ಅಲ್ಲ, ಯಾರೂ ಅಧ್ಯಕ್ಷರಾದ್ರೂ ಬಿಜೆಪಿಯನ್ನು ಸರಿ ಮಾಡಲು ಸಾಧ್ಯವಿಲ್ಲ ಎಂದರು. ರಾಜಕೀಯ ಉದ್ದೇಶಕ್ಕೆ ಸಿಬಿಐ ಐಟಿ ಇಡಿ ದಾಳಿಗಳು ನಡೆಯುತ್ತಿವೆ. ಹಾಗಾಗಿ ಸಿಬಿಐ ಐಟಿ ಇಡಿ ಸಂಸ್ಥೆಗಳು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆ ಎಂದು ಬಣ್ಣಿಸಿದ ಶೆಟ್ಟರ್, ಈವರೆಗೆ ನಡೆದಿರುವ ಐಟಿ ಮತ್ತು ಇಡಿ ದಾಳಿ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಲಿ ದಾಳಿ ಬಗ್ಗೆ ಶ್ವೇತ ಪತ್ರ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.

ಹಾಸನ ಬಳಿ ಮದುವೆ ನಿರಾಕರಿಸಿದ್ದಕ್ಕೆ ಶಿಕ್ಷಕಿಯ ಅಪಹರಣ

ಹಾಸನ: ಹಾಸನ ಜಿಲ್ಲೆಯ ಬಿಟ್ಟಗೌಡನಹಳ್ಳಿಯ ಬಳಿ ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಶಾಲಾ ಶಿಕ್ಷಕಿಯನ್ನೇ ಅಪಹರಿಸಿರುವ ಘಟನೆ ನಡೆದಿದೆ. ಖಾಸಗಿ ಶಾಲೆಯಲ್ಲಿ ಶಿಕ್ಷಕಿ ಕೆಲಸ ಮಾಡುತ್ತಿದ್ದ ಅರ್ಪಿತಾ ಎಂಬವರನ್ನು ಶಾಲೆ ಮುಂಭಾಗದಿಂದಲೇ ಕಿಡಿಗೇಡಿಗಳು ಅಪಹರಿಸಿದ್ದಾರೆ. ಗುರುವಾರ ಬೆಳಿಗ್ಗೆ ಶಾಲೆಗೆ ಹೊರಟಿದ್ದಾಗ ಆಕೆಯ ಸಂಬಂಧಿಯೇ ಅಪಹರಣ ಮಾಡಿದ್ದಾನೆ ಎಂದು ಶಿಕ್ಷಕಿಯ ಪೋಷಕರು ಆರೋಪಿಸಿದ್ದಾರೆ. ಕೆಲವು ದಿನಗಳ ಹಿಂದೆ ರಾಮು ಎಂಬಾತ ಈ ಯುವತಿಯ ಮನೆಗೆ ತೆರಳಿ ಮದುವೆ ಪ್ರಸ್ತಾಪ ಮುಂದಿಟ್ಟಿದ್ದ ಎನ್ನಲಾಗಿದೆ. ಆದರೆ ಮದುವೆಗೆ ಅರ್ಪಿತಾ ಹಾಗೂ ಮನೆಯವರು ಒಪ್ಪಿಕೊಂಡಿಲ್ಲ. ಈ ದ್ವೇಷದಿಂದ ಈ ಅಪಹರಣ ನಡೆದಿರಬಹುದು ಎಂದು ಶಿಕ್ಷಕಿಯ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ

ಬೆಂಗಳೂರು ‘ಕಂಬಳ’ದಲ್ಲಿ ಪದಕ ಗೆದ್ದಿದ್ದು ಪುತ್ತೂರಿನ ಕೋಣಗಳು; ನಾಯಕನಾಗಿ ಮಿಂಚಿದ್ದು ‘ಜೈ ತುಳುನಾಡು’ ಕಿಶೋರ್ ಭಂಡಾರಿ

ಮಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದ ‘ಕಂಬಳ’ ಇಡೀ ದೇಶದ ಗಮನಸೆಳೆಯಿತು. ತುಳುನಾಡಿಗೆ ಸೀಮಿತ ಎಂಬಂತಿದ್ದ ‘ಕಂಬಳ’ವು ಪುತ್ತೂರು ಶಾಸಕ ಅಶೋಕ್ ರೈ ಅವರ ಪ್ರಯತ್ನದ ಫಲವಾಗಿ ರಾಜ್ಯ ರಾಜಧಾನಿಯಲ್ಲೂ ಕಲರವ ಸೃಷ್ಟಿಸಿ ‘ಮಹಾಹಬ್ಬ’ವಾಗಿ ಕುತೂಹಲದ ಕೇಂದ್ರಬಿಂದುವಾಯಿತು. ಪದಕ ಗೆದ್ದ ಕೋಣಗಳು ತವರಿಗೆ ತಲುಪಿದಾಗ ಕಂಡುಬಂದ ಉತ್ಸಾಹ ಕೂಡಾ ಚಾರಿತ್ರಿಕ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಬೆಂಗಳೂರು ಕಂಬಳದಲ್ಲಿ 200ಕ್ಕೂ ಹೆಚ್ಚು ದೈತ್ಯ ಕೋಣಗಳು ಭಾಗವಹಿಸಿ ರೋಚಕತೆ ತುಂಬಿದ್ದವು. ಎಲ್ಲಾ ಕಂಬಳ ಕೋಣಗಳ ತಂಡಗಳ ಸೆಣಸಾಟದಲ್ಲಿ ಪದಕವನ್ನು ಬಾಚಿರುವ ಬೊಟ್ಯಾಡಿ ಕಿಶೋರ್ ಭಂಡಾರಿ ಮುಂದಾಳುತ್ವದ ಯುವಕರ ಪಡೆಯಾದ ‘ಜೈ ತುಳುನಾಡು ಪುತ್ತೂರು’ ತಂಡದ ಕೋಣಗಳು ಚಿನ್ನದ ಪುರಸ್ಕಾರದೊಂದಿಗೆ ಗೆದ್ದು ಬೀಗಿದೆ. ನೇಗಿಲು ಕಿರಿಯ (ಜೂನಿಯರ್) ವಿಭಾಗದಲ್ಲಿ ಕಿಶೋರ್ ಭಂಡಾರಿ ಅವರ ಕೋಣಗಳು ಚಿನ್ನದ ಪದಕ ಹಾಗೂ 50,000 ರೂಪಾಯಿ ಜಯಿಸಿ ತುಳುನಾಡಿನ ಜನರ ಹರ್ಷವನ್ನು ಮುಗಿಲೆತ್ತರ ರಾಚುವಂತೆ ಮಾಡಿವೆ.  …

ದೊಡ್ಡಬಳ್ಳಾಪುರದಲ್ಲಿ ಪುರಸಭೆ ಅಧಿಕಾರಿಗಳ ಕ್ಷಿಪ್ರ ಕಾರ್ಯಾಚರಣೆ; ರಸ್ತೆ ಬದಿ ಅಂಗಡಿಗಳ ತೆರವು

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ನಗರಸಭೆ ಮತ್ತು ನಗರ ಠಾಣಾ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು, ರಸ್ತೆ ಬದಿಯ ಅಂಗಡಿಗಳನ್ನು ತೆರವು ಮಾಡಿದ್ದಾರೆ. ದೊಡ್ಡಬಳ್ಳಾಪುರ ಜಿ.ರಾಮೇಗೌಡ ವೃತ್ತದ ಬಳಿ ನಗರಸಭೆಯ ಪರಿಸರ ವಿಭಾಗದ ಎಇಇ ಈರಣ್ಣ, ನಗರ ಠಾಣಾ ಇನ್ಸ್ಪೆಕ್ಟರ್ ಎ.ಅಮರೇಶ್ ಗೌಡ ನೇತೃತ್ವದಲ್ಲಿ ಬುಧವಾರ ಬೀದಿಬದಿ ಅಂಗಡಿಗಳ ತೆರವು ಮಾಡಲಾಯಿತು. ಹೈಕೋರ್ಟ್ ಆದೇಶದಂತೆ ರಸ್ತೆ ಬದಿಗಳಲ್ಲಿನ ಅನಧಿಕೃತ ಅಂಗಡಿಗಳನ್ನು ಕಡ್ಡಾಯವಾಗಿ ತೆರವು ಮಾಡಲಾಗುತ್ತಿದೆ. ಎರಡು ತಿಂಗಳ ಹಿಂದೆಯೂ ತೆರವು ಕಾರ್ಯಾಚರಣೆ ಮಾಡಿದ್ದೇವು. ಬೀದಿಬದಿ ವ್ಯಾಪಾರಿಗಳಿಗೆ ಈ ವೇಳೆ ಪರ್ಯಾಯ ವ್ಯವಸ್ಥೆಯ ಬಗ್ಗೆಯೂ ಮನವರಿಕೆ ಮಾಡಲಾಗಿತ್ತು. ಇದೀಗ ಪರ್ಯಾಯ ಸ್ಥಳವನ್ನು ವಿನಾಯಕನಗರ, ಬಸವಣ್ಣ ದೇಗುಲ ಬಳಿ ಸ್ಥಳವನ್ನು ಗುರುತಿಸಿ ನೀಡಿದ್ದೇವೆ ಎಂದು ನಗರಸಭೆ ಪರಿಸರ ವಿಭಾಗದ ಎಇಇ ಈರಣ್ಣ ತಿಳಿಸಿದ್ದಾರೆ. ವಿನಾಯಕನಗರದಲ್ಲಿ ಪರ್ಯಾಯ ವ್ಯವಸ್ಥೆ: ಬೀದಿ ಬದಿಯಲ್ಲಿನ ವ್ಯಾಪಾರಿಗಳನ್ನು ಏಕಾಏಕಿ ತೆರವು ಕಾರ್ಯಾಚರಣೆಯಿಂದಾಗಿ ವ್ಯಾಪಾರಿಗಳು ಅತಂತ್ರರಾಗಿದ್ದಾರೆ…

ಶಿವಮೊಗ್ಗದಲ್ಲಿ BJP ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಅದ್ಧೂರಿ ಸ್ವಾಗತ

ಬೆಂಗಳೂರು: ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಇದೇ ಮೊದಲ ಬಾರಿಗೆ ಇಂದು ಶಿವಮೊಗ್ಗಕ್ಕೆ ಆಗಮಿಸಿದ ಬಿ.ವೈ ವಿಜಯೇಂದ್ರ ಅವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು. ಅಭಿನಂದನಾ ಸಮಾರಂಭಕ್ಕೂ ಮುನ್ನ ನಡೆದ ಭವ್ಯ ಮೆರವಣಿಗೆಯಲ್ಲಿ ಬಿಜೆಪಿ ಹಿರಿಯ ನಾಯಕರಾದ ಯಡಿಯೂರಪ್ಪ, ಈಶ್ವರಪ್ಪ ಸೇರಿದಂತೆ ಸಾವಿರಾರು ಕಾರ್ಯಕರ್ತರು ರಾಜ್ಯಾಧ್ಯಕ್ಷರನ್ನು ಬರಮಾಡಿಕೊಂಡರು. ಮೆರವಣಿಗೆ ಮೂಲಕ ಜಿಲ್ಲಾ ಬಿಜೆಪಿ ಕಾರ್ಯಾಲಯಕ್ಕೆ ಆಗಮಿಸಿದ ಬಿ.ವೈ. ವಿಜಯೇಂದ್ರ ಅವರನ್ನು ಜಿಲ್ಲಾಧ್ಯಕ್ಷರಾದ ಟಿ. ಡಿ. ಮೇಘರಾಜ್ ರವರು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ವಿಭಾಗ ಪ್ರಭಾರಿಗಳು, ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾ ಬಿಜೆಪಿ ಪದಾಧಿಕಾರಿಗಳು, ಪ್ರಮುಖರು ಕಾರ್ಯಕರ್ತರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಡಿಕೆಶಿ ವಿರುದ್ದದ ಸಿಬಿಐ ತನಿಖೆಯ ಆದೇಶ ವಾಪಾಸ್; ಸರ್ಕಾರದ ತೀರ್ಮಾನ ಎತ್ತಿ ಹಿಡಿದ ಹೈಕೋರ್ಟ್

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಸಿಬಿಐ ತನಿಖೆಯ ವಿಚಾರದಲ್ಲಿ ಬಿಗ್ ರಿಲೀಫ್ ಸಿಕ್ಕಿದೆ. ಕೆಲವು ದಿನಗಳ ಹಿಂದಷ್ಟೇ ಹಿಂದಿನ ಸರ್ಕಾರ ಸಿಬಿಐ ತನಿಖೆಗೆ ವಹಿಸಲಾಗಿದ್ದ ತನಿಖೆಯನ್ನು ಸಿದ್ದರಾಮಯ್ಯ ಸಂಪುಟ ಹಿಂಪಡೆಯುವ ತೀರ್ಮಾನ ಕೈಗೊಂಡಿತ್ತು. ಆ ತೀರ್ಮಾನವನ್ನು ಹೈಕೋರ್ಟ್ ಒಪ್ಪಿಕೊಂಡಿದೆ. ಡಿಸಿಎಂ ಡಿ.ಕೆ.ಶಿವಕುಮಾರ್‌ ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣ ವಿಚಾರಣೆಯನ್ನು ಬುಧವಾರ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರನ್ನೊಳಗೊಂಡ ನೇತೃತ್ವದ ವಿಭಾಗೀಯ ಪೀಠ ಬುಧವಾರ ಕೈಗೆತ್ತಿಕೊಂಡಿತು. ರಾಜ್ಯ ಸರ್ಕಾರದ ಆದೇಶವನ್ನು ಇದುವರೆಗೂ ಯಾರೂ ಪ್ರಶ್ನೆ ಮಾಡಿಲ್ಲ. ಹೀಗಾಗಿ ಸಿಬಿಐ ವಾದ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿತು. ಜೊತೆಗೆ, ಡಿ.ಕೆ.ಶಿವಕುಮಾರ್‌ ವಿರುದ್ಧದ ಸಿಬಿಐ ತನಿಖೆ ಆದೇಶ ಹಿಂಪಡೆದ ರಾಜ್ಯ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್‌ ಎತ್ತಿ ಹಿಡಿಯಿತು.