ಶಿರಾಡಿ ಘಾಟ್, ಚಾರ್ಮಾಡಿ ಘಾಟ್ ರಸ್ತೆಗಳಿಗೆ ಕಾಯಕಲ್ಪ; ಕೇಂದ್ರದ ನೆರವು

ಬೆಂಗಳೂರು: ಶಿರಾಡಿ ಘಾಟ್, ಚಾರ್ಮಾಡಿ ಘಾಟ್ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮುನ್ನುಡಿ ಬರೆದಿದೆ. ಈ ಸಂಬಂಧ ಕೇಂದ್ರ ಸರ್ಕಾರ 15 ಕೋಟಿ ರೂಪಾಯಿ ವೆಚ್ಚದ ಮೂರು ಕಾಮಗಾರಿಗಳನ್ನು ಮಂಜೂರು ಮಂಜೂರು ಮಾಡಿದೆ.

ಈ ಕುರಿತಂತೆ ಮಾಹಿತಿ ಹಂಚಿಕೊನಿರುವ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ರಸ್ತೆ ಬಳಕೆದಾರರ ಸುರಕ್ಷತೆಯ ದೃಷ್ಠಿಯಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿರುವ ಶಿರಾಡಿ ಘಾಟ್, ರಾ.ಹೆ.73 ರ ಚಾರ್ಮಾಡಿ ಘಾಟ್ ಹಾಗೂ ರಾ.ಹೆ.275 ರಲ್ಲಿರುವ ಸಂಪಾಜೆ ಘಾಟ್‍ನ ಇಳಿಜಾರುಗಳಲ್ಲಿ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲು 115 ಕೋಟಿ ರೂ.ಗಳ ವೆಚ್ಚದ ಮೂರು ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಇಲಾಖೆಯು ಮುಂಬರುವ ವರ್ಷಗಳಲ್ಲಿ ಕರ್ನಾಟಕದಲ್ಲಿ ಅಂದಾಜು 1,16,144 ಕೋಟಿ ರೂ.ಗಳ ಹೂಡಿಕೆ ಮಾಡಲಿದೆ ಎಂದ ಅವರು ಭಾರತ್‍ಮಾಲಾ ಮತ್ತಿತರ ಯೋಜನೆಗಳಡಿಯಲ್ಲಿ 31,035 ಕೋಟಿ ರೂ.ಗಳ ವೆಚ್ಚದಲ್ಲಿ 19 ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿವೆ ಎಂದರು.

ಬಂದರುಗಳಿಗೆ ಸುಲಭ ಸಂಪರ್ಕವನ್ನು ಕಲ್ಪಿಸಿ ವ್ಯಾಪಾರ ಮತ್ತು ಆರ್ಥಿಕತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಗೋವಾ ಗಡಿಯಿಂದ ಕೇರಳದ ಗಡಿಯವರೆಗಿನ ಸಂಪೂರ್ಣ ಕರಾವಳಿ ರಸ್ತೆಯನ್ನು ಬೇಲೇಕೇರಿ, ಕಾರವಾರ ಮತ್ತು ಮಂಗಳೂರು ಬಂದರುಗಳೊಂದಿಗೆ ಸಂಪರ್ಕಿಸುವ 278 ಕಿ.ಮೀ. ಉದ್ದದ ಕಾಮಗಾರಿಯನ್ನು 3443 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಂಡಿದ್ದು ಬಹುತೇಕ ಪೂರ್ಣಗೊಳಿಸಲಾಗಿದೆ ಅಂದು ಅವರು ವಿವರ ಒದಗಿಸಿದ್ದಾರೆ.

ದಾಬಸ್‍ಪೇಟೆ ಬಳಿಯ ಮುದ್ದಲಿಂಗೇನಹಳ್ಳಿಯಲ್ಲಿ ಬಹುವಿಧ ಲಾಜಿಸ್ಟಿಕ್ಸ್ ಪಾರ್ಕ್ ಸ್ಥಾಪನೆಯ ಕುರಿತ ಅಂತಿಮ ಕಾರ್ಯಸಾಧ್ಯತಾ ವರದಿ ಫೆಬ್ರವರಿ 2021ರಲ್ಲಿ ಸಲ್ಲಿಸುವ ನಿರೀಕ್ಷೆಯಿದೆ ಎಂದರು. ಈ ಯೋಜನೆಯು ಲಾಜಿಸ್ಟಿಕ್ಸ್‍ನ ದಕ್ಷತೆಯನ್ನು ಹೆಚ್ಚಿಸಲಿದ್ದು, ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲಿದೆ ಎಂದು ಗಡ್ಕರಿ ಮಾಹಿತಿ ನೀಡಿದ್ದಾರೆ.

Related posts