ಚಿಕ್ಕಮಗಳೂರಿನಲ್ಲಿ ವಿವಿಧ ಕಾಮಗಾರಿಗಳಿಗೆ ಸಚಿವ ಸಿ.ಟಿ.ರವಿ ಚಾಲನೆ

ಚಿಕ್ಕಮಗಳೂರು: ಮಲೆನಾಡಿನಲ್ಲಿ‌ ಅಭಿವೃದ್ದಿ ಕಾಮಗಾರಿಗಳು ವೇಗ ಪಡೆದುಕೊಂಡಿವೆ. ಇದೇ ಸಂದರ್ಭದಲ್ಲಿ ವಿವಿಧ ಮೂಲಸೌಲಭ್ಯ ಕಾಮಗಾರಿಗಳಿಗೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಚಾಲನೆ ನೀಡಿದ್ದಾರೆ.

ಮಳೆ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿನ ಪರಿಹಾರ ಕಾರ್ಯಾಚರಣೆಯ ನಡುವೆ ಇಂದು ಸಚಿವರು ಕುರುವಂಗಿಯಲ್ಲಿನ ಬಸ್ ನಿಲ್ದಾಣವನ್ನು ಉದ್ಘಾಟಿಸಿದರು.

ಇದೇ ವೇಳೆ ಚಿಕ್ಕಮಗಳೂರು ತಾಲೂಕಿನ ಕರ್ತಿಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುರುವಂಗಿಯಿಂದ ರಂಗನಾಥ ಸ್ವಾಮಿ ದೇವಸ್ಥಾನವರೆಗಿನ ರಸ್ತೆ ಡಾಂಬರೀಕರಣ ಹಾಗೂ ಅಭಿವೃದ್ದಿ ಕಾಮಗಾರಿಗಳಿಗೂ ಸಚಿವ ಸಿ.ಟಿ.ರವಿ ಶಂಕುಸ್ಥಾಪನೆ ನೆರವೇರಿಸಿದರು.

ಇದನ್ನೂ ಓದಿ.. ಮಲೆನಾಡಿನ ಅಯ್ಯನ ಕೆರೆಯಲ್ಲಿ ಸಾಹಸ ಕ್ರೀಡಾ ತರಬೇತಿ; ಸಚಿವ ಸಿ.ಟಿ.ರವಿ ಚಾಲನೆ

ಜೊತೆಗೆ, ಬೈಪಾಸ್ ರಸ್ತೆಯಿಂದ ಕುರವಂಗಿ ಮೂಲಕ ನೆಟ್ಟಕೆರೆಹಳ್ಳಿ ಶಂಕರದೇವರಮಠ ರಸ್ರೆ ವರೆಗಿನ ಸುಮಾರು 5 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಗೂ ಅವರು ಚಾಲನೆ ನೀಡಿದರು. ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಕಾರ್ಯಕ್ರಮಗಳಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ.. ಮಲೆನಾಡಲ್ಲಿ ಮಳೆಹಾನಿ; ಪರಿಹಾರ ಕಾರ್ಯಾಚರಣೆಗೆ ಧುಮುಕಿದ ಸಚಿವ ರವಿ 

 

Related posts