52 ಚೀನೀ ಆ್ಯಪ್’‌ಗಳ ಅಪಾಯ; ಜನರೇ ಬಳಕೆ ನಿಲ್ಲಿಸುವುದು ಸೂಕ್ತ?

ದೆಹಲಿ: ಕೊರೋನಾ ವೈರಾಣು ಪ್ರಸರಣ ವಿಚಾರದಲ್ಲಿ ಚೀನಾ ವಿರುದ್ಧ ವಿವಿಧ ದೇಶಗಳು ಮುಗಿಬಿದ್ದಿವೆ. ಭಾರತವೂ ಚೀನಾ ವಿರುದ್ಧ ಮುನಿಸಿಕೊಂಡಿದೆ. ಇದೇ ಸಂದರ್ಭದಲ್ಲಿ ಲಡಾಖ್ ಗಡಿಭಾಗದಲ್ಲಿ ಚೀನೀ ಸೈನಿಕರು ಉದ್ದತನ ತೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚೀನೀ ತಂತ್ರಜ್ಞಾನಗಳ ಬಗ್ಗೆ ಆತಂಕವೂ ಸೃಷ್ಟಿಯಾಗಿದ್ದು, ಪ್ರಸ್ತುತ ಭಾರತೀಯರು ಬಳಸುತ್ತಿರುವ 52 ಚೀನೀ ಅಪ್ಲಿಕೇಷನ್‌ಗಳ ಅಪಾಯದ ಬಗ್ಗೆ ಗುಪ್ತಚರ ಇಲಾಖೆ ಕೇಂದ್ರ ಸರಕಾರಕ್ಕೆ  ಶಿಫಾರಸು ಮಾಡಿದೆ.

ಝೂಮ್‌, ತುಣುಕು ವಿಡಿಯೊ ಆ್ಯಪ್‌ ಟಿಕ್‌ಟಾಕ್‌ ಹಾಗೂ ಕಂಟೆಂಟ್‌ ಆ್ಯಪ್‌ ಎಂದೇ ಕರೆಯಲ್ಪಡುವ ಯುಸಿ ಬ್ರೌಸರ್‌, ಶೇರ್‌ಇಟ್‌, ಕ್ಲೀನ್‌ ಮಾಸ್ಟರ್ ಮುಂತಾದ ಆ್ಯಪ್‌ಗಳ ಬಳಕೆಯಿಂದ ಭಾರತದ ಭದ್ರತೆಗೆ ಆಪತ್ತು ಎದುರಾ­ಗಬಹುದು’ ಎಂದು ಸೂಚಿಸಿತ್ತು. ಈ ನಡುವೆ ಈ ಅಪ್ಲಿಕೇಷನ್‌ಗಳನ್ನು ಬಳಕೆ ಮಾಡುವುದನ್ನು ಜನರೇ ನಿಲ್ಲಿಸುವುದು ಸೂಕ್ತ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.

Related posts