ಭಾರತ-ಚೀನಾ ಗಡಿ ಬಿಕ್ಕಟ್ಟು; ಕೇಂದ್ರದ ಹೇಡಿತನದ ಕ್ರಮ- ರಾಹುಲ್ ಟೀಕೆ

ದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಾಸ್ತ್ರ ಪ್ರಯೋಗವನ್ನು ಮುಂದುವರಿಸಿದ್ದಾರೆ. ಭಾರತ-ಚೀನಾ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅವರು ಕೇಂದ್ರ ಸರ್ಕಾದ ನಡೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಚೀನಾ ನಮ್ಮ ಭೂಮಿಯನ್ನು ವಶಕ್ಕೆ ತೆಗೆದುಕೊಂಡಿದೆ. ಭಾರತ ಸರ್ಕಾರದ ಚೇಂಬರ್ಲೇನ್ ವರ್ತನೆಯಿಂದ ಚೀನಾ ಮತ್ತಷ್ಟು ಧೈರ್ಯದಿಂದ ಬೀಗುತ್ತಿದೆ. ಕೇಂದ್ರದ ಹೇಡಿತನದ ಕ್ರಮಗಳಿಂದಾಗಿ ಭಾರತ ಭಾರೀ ಬೆಲೆ ತೆರಬೇಕಾದೀತು ಎಂದು ರಾಹುಲ್ ಗಾಂಧಿ ಆತಂಕ ವ್ಯಕ್ತಪಡಿಸಿದ್ದಾರೆ.

Related posts