ತುಂಬು ಗರ್ಭಿಣಿಯಿಂದ ಜನರ ಸೇವೆ; ನರ್ಸ್’ಗೆ ಕರೆ ಮಾಡಿ ಅಭಿನಂದಿಸಿದ ಸಿಎಂ

ಬೆಂಗಳೂರು: ರೌದ್ರಾವತಾರಕ್ಕೆ ನಲುಗಿರುವ ನಾಡಲ್ಲಿ ಜನರ ಆತಂಕವೂ ಹೆಚ್ಚಾಗಿದೆ. ಅದರಲ್ಲೂ ಇದೀಗ ಲಾಕ್ ಡೌನ್ ಸಡಿಲಿಕೆಯಾದ ನಂತರವಂತೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದು ಲಾಕ್’ಡೌನ್ ಸಡಿಲಿಕೆ ಮೊದಲೇ ಹರಡಿರುವ ಸೋಂಕು ಇದೀಗ ತಡವಾಗಿ ದೃಢಪಡುತ್ತಿವೆ.

ಈ ನಡುವೆ ಕರಾವಳಿ, ಮಲೆನಾಡು ಸಹಿತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೊರೋನಾ ವೈರಾಣು ಹಾವಳಿ ಆವರಿಸಿದ್ದು ಸಾವಿರಾರು ಮಂದಿ ಕೊರೋನಾ ವಾರಿಯರ್ಸ್ ಹಗಲಿರುಳು ಸೇವೆ ಸಲ್ಲಿಸುತ್ತಿದ್ದಾರೆ. ಅದರಲ್ಲೂ ಗರ್ಭಿಣಿಯರೂ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ವೈದ್ಯಕೀಯ ಸೇವೆಯಲ್ಲಿ ತಲ್ಲೀನರಾಗಿರುವುದು ನಿಜಕ್ಕೂ ಪ್ರಶಂಸನೀಯ. ಇವರ ಪೈಕಿ ನರ್ಸ್ ಆಗಿರುವ 9 ತಿಂಗಳ ತುಂಬು ಗರ್ಭಿಣಿ ಸಹ ಕರ್ತವ್ಯ ನಿರ್ವಹಿಸಿ ನಾಡಿನ ಗಮನಸೆಳೆದಿದ್ದಾರೆ.

 

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ರೂಪ ಅವರ ಸೇವೆ ಬಗ್ಗೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ.. ಕಾರ್ಮಿಕರ ನೆರವಿಗೆ ಧಾವಿಸಿದ ನಳಿನ್ ಕುಮಾರ್

ಗಾಜನೂರು ಗ್ರಾಮದಿಂದ 60 ಕಿ.ಮೀ ದೂರವಿರುವ ತೀರ್ಥಹಳ್ಳಿ ಪಟ್ಟಣಕ್ಕೆ ಪ್ರತಿದಿನ ಬಸ್ ನಲ್ಲೇ ಪ್ರಯಾಣಿಸಿ ರೂಪ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ನಿತ್ಯವೂ ಸುಮಾರೋ 120 ಕಿಲೋಮೀಟರ್ ದೂರ ಕ್ರಮಿಸಿ ಆರೋಗ್ಯ ಸೇವೆ ನಡೆಸುತ್ತಿರುವ ಈ ನರ್ಸ್ ಬಗ್ಗೆ ಮಾಹಿತಿ ತಿಳಿದದ್ದೇ ತಡ, ನರ್ಸ್ ರೂಪಾ ಅವರಿಗೆ ಮುಖ್ಯಮಂತ್ರಿಯವರೇ ಫೋನ್ ಕರೆ ಮಾಡಿ ಅಭಿನಂದಿಸಿದ್ದಾರೆ.

ತುಂಬು ಗರ್ಭಿಣಿ ಈ ರೀತಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ . ಆದರೂ ಈ ಸಂದರ್ಭದಲ್ಲಿ ವಿಶ್ರಾತಿ ಪಡೆಯುವ ಅಗತ್ಯವಿದೆ. ಆರೋಗ್ಯ ನೋಡಿಕೊಳ್ಳಬೇಕಿದೆ. ಹಾಗಾಗಿ ತಕ್ಷಣದಿಂದಲೇ ರಜೆ ಮೇಲೆ ತೆರಳಿ ವಿಶ್ರಾಂತಿ ಪಡೆಯುವಂತೆ ರೂಪಾ ಅವರಿಗೆ ಸಿಎಂ ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ.. ಯಕ್ಷ ಕಲಾವಿದರ ಕೈ ಹಿಡಿದ ಕೊಲ್ಲೂರು ಮೂಕಾಂಬಿಕೆ 

 

Related posts