ಒಂದೆಡೆ ಆರೆಸ್ಸೆಸ್ ಕಾರ್ಯಕರ್ತರ ಮುನಿಸು; ಇನ್ನೊಂದೆಡೆ ಆಪ್ತ ನಾಯಕರ ವಿರುದ್ಧವೇ ಕೇಸ್; ಬಿ.ಎಸ್.ವೈ ಗಲಿಬಿಲಿ

ಕೊರೋನಾ ವಿಚಾರದಲ್ಲಿ ಎಲ್ಲೆಲ್ಲೂ ಆತಂಕದ ಸನ್ನಿವೇಶ. ಇನ್ನೊಂದೆಡೆ ರಾಜಕೀಯ ನಾಯಕರ ವಾಕ್ಸಮರ.. ತಬ್ಲೀಗಿಗಳ ವಿಚಾರದಲ್ಲಿ ಅಲ್ಪಸಂಖ್ಯಾತರ ಪರವಾಗಿ ಹೇಳಿಕೆ ನೀಡಿದ್ದಾರೆಂಬ ಕಾರಣಕ್ಕಾಗಿ ಸಿಎಂ ವಿರುದ್ಧ ಹಿಂದೂ ಕಾರ್ಯಕರ್ತರ ಆಕ್ರೋಶ.. ಇನ್ನೊಂದೆಡೆ ಅವರ ಆಪ್ತ ಮುಖಂಡನ ವಿರುದ್ಧವೇ ಕೇಸ್..

ದಾವಣಗೆರೆ: ದೇಶಾದ್ಯಂತ ಕೋಲಾಹಲ ಎಬ್ಬಿಸಿರುವ ಕೊರೋನಾ ವೈರಾಣು ಹಾವಳಿಯನ್ನು ನಿಯಂತ್ರಿಸುವ ವಿಚಾರದಲ್ಲಿ ಸರ್ಕಾರ ತೀವ್ರ ಕಸರತ್ತು ನಡೆಸುತ್ತಿದೆ. ಲಾಕ್ ಡೌನ್ ಮುಂದುವರಿಸಬೇಕೇ ಅಥವಾ ಅಂತ್ಯಗೊಳಿಸಬೇಕೇ ಎಂಬ ಗೊಂದಲ ಒಂದೆಡೆಯಾದರೆ, ಮತ್ತೊಂದೆಡೆ ದೆಹಲಿಯ ನಿಜಾಮುದ್ದೀನ್ ಸಭೆ ವಿಚಾರದಲ್ಲಿ ಸಾರ್ವಜನಿಕರ ಅಕ್ಕ್ರೋಶ ಹಾಗೂ ಈ ಬೆಳವಣಿಗೆಯಿಂದಾಗಿ ಸಿಎಂ ಯಡಿಯೂರಪ್ಪ ಮುಜುಗರದ ಪರಿಸ್ಥಿತಿಯನ್ನೇ ಎದುರಿಸುತ್ತಿದ್ದಾರೆ.

ಹಲವೆಡೆಯ ಕಹಿ ಸನ್ನಿವೇಶಗಳ ಬಗ್ಗೆ ಕೆಲ ದಿನಗಳ ಹಿಂದೆ ಅಲ್ಪಸಂಖ್ಯಾತರನ್ನು ಸಮರ್ಥಿಸಿಕೊಂಡ ವಿಚಾರದಲ್ಲಿ ಹಿಂದೂ ಕಾರ್ಯಕರ್ತರ ಸಿಟ್ಟನ್ನು ತಣ್ಣಗಾಗಿಸುವ ಪ್ರಯತ್ನದಲ್ಲಿ ಸಿಎಂ ಇರುವಾಗಲೇ, ಇನ್ನೊಂದೆಡೆ ಅವರ ಆಪ್ತ ನಾಯಕರೂ ಆಗಿರುವ ಮಾಜಿ ಸಚಿವ ರೇಣುಕಾಚಾರ್ಯ ವಿರುದ್ಧ ಕಾಂಗ್ರೆಸ್ ನಾಯಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ.. ಕೊರೋನಾ ಮೂಲಕ ಮೋದಿ ಟಾರ್ಗೆಟ್?

ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿರುವ ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ನಾಯಕ ಸುಭಾಷ್ ಚಂದ್ರ ಎಂಬವರು ದಾವಣಗೆರೆಯ ಕೆಟಿಜೆ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನ ಸ್ವೀಕೃತಿ ಪ್ರತಿಯಲ್ಲಿ ನಮೂದಿಸಿರುವ ವಿಷಯ ಹೀಗಿದೆ.

“…ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಗಳಾದ ರೇಣುಕಾಚಾರ್ಯರವರು ದಿನಾಂಕ 07-04-2020ರಂದು ಸಾರ್ವಜನಿಕವಾಗಿ ಮಾಧ್ಯಮಗಳ ಮುಂದೆ, ಕೊರೋನಾ ಹರಡುವವರನ್ನು ಗುಂಡಿಕ್ಕಿ ಕೊಲ್ಲಬೇಕೆಂದು ಹೇಳಿಕೆ ನೀಡಿರುತ್ತಾರೆ. ಒಂದು ಕೋಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಅವರ ಹೇಳಿಕೆಯಿಂದ ಯಶಸ್ವಿಯಾಗಿರುತ್ತೆ. ಜನಪ್ರತಿನಿಧಿಯೊಬ್ಬರು ಜವಾಬ್ಧಾರಿ ಸ್ಥಾನದಲ್ಲಿದ್ದು ಈ ತರಹದ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ಕಾನೂನು ಉಲ್ಲಂಘಿಸಿದ್ದಾರೆ. ಆದ್ದರಿಂದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ದೂರು….”

ಇನ್ನೊಂದೆಡೆ, ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರ ನಿಯೋಗ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿಯೊಂದನ್ನು ನೀಡಿ, ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದೆ.

ಇದನ್ನೂ ಓದಿ.. ನಾಡಿನ ದೊರೆಯ ಬಗ್ಗೆ ಕೋಡಿಮಠದ ಸ್ವಾಮೀಜಿ ಭವಿಷ್ಯ.. 

Related posts