ದೇಶದಲ್ಲಿ ಕೊರೋನಾಗೆ ಒಟ್ಟು 35,747 ಮಂದಿ ಬಲಿ

ದೆಹಲಿ: ಭಾರತದಲ್ಲಿ ಕೊರೋನಾ ಆತಂಕ ಮುಂದುವರಿದಿದ್ದು, ಗುರುವಾರ ಒಂದೇ ದಿನ ವಿವಿಧ ರಾಜ್ಯಗಳಲ್ಲಿ 55 ಸಾವಿರ ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ.

ಈ ಕುರಿತಂತೆ ಮಾಹಿತಿ ಬಹಿರಂಗಪಡಿಸಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ , ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 16 ಲಕ್ಷದ 38 ಸಾವಿರ ದಾಟಿದೆ ಎಂದು ಹೇಳಿದೆ.

ಗುರುವಾರ 779 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದು, ದೇಶದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 35 ಸಾವಿರದ 747ಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಾರಾಷ್ಟ್ರರಾಜ್ಯವೊಂದರಲ್ಲೇ 14 ಸಾವಿರದ 729 ಮಂದಿ ಮೃತಪಟ್ಟಿದ್ದರೆ, ತಮಿಳುನಾಡಿನಲ್ಲಿ 3 ಸಾವಿರದ 838 ಮಂದಿ ಮೃತಪಟ್ಟಿದ್ದಾರೆ.

Related posts