ರಾಜ್ಯದಲ್ಲಿ ಕೊರೋನಾ‌ ಸೋಂಕಿಗೆ ಒಟ್ಟು 2230 ಮಂದಿ ಬಲಿ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ‌ ಅಟ್ಟಹಾಸ ಮುಂದುವರೆದಿದ್ದು, ಈ ವರೆಗೂ ಸೋಂಕಿಗೆ 2230 ಮಂದಿ ಬಲಿಯಾಗಿದ್ದಾರೆ. ಗುರುವಾರ ಒಂದೇ ದಿನ 83 ಮಂದಿ ಸಾವನ್ನಪ್ಪಿದ್ದು 6128 ಹೊಸ ಪ್ರಕರಣಗಳು ವರದಿಯಾಗುವ ಮೂಲಕ ಕರ್ನಾಟಕದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 1,18,632ಕ್ಕೇರಿಕೆಯಾಗಿದೆ.

ಈ ಕುರಿತು ಮಾಹಿತಿ ಬಹಿರಂಗಪಡಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರು ನಗರದಲ್ಲಿ ಗುರುವಾರ 2,233 ಹೊಸ ಪ್ರಕರಣಗಳು ವರದಿಯಾಗಿವೆಎಂದು ಹೇಳಿದೆ. ಮೈಸೂರಿನಲ್ಲಿ 430, ಬಳ್ಳಾರಿಯಲ್ಲಿ 343, ಉಡುಪಿಯಲ್ಲಿ 248, ಬೆಂಗಳೂರು ಗ್ರಾಮಾಂತರದಲ್ಲಿ 224, ಕಲಬುರಗಿಯಲ್ಲಿ 220, ಬೆಳಗಾವಿಯಲ್ಲಿ 202 ಹೊಸ ಕೇಸ್’ಗಳು ಪತ್ತೆಯಾಗಿವೆ.

ದಕ್ಷಿಣ ಕನ್ನಡದಲ್ಲಿ 198, ಧಾರವಾಡದಲ್ಲಿ 180, ರಾಯಚೂರಿನಲ್ಲಿ 166, ಶಿವಮೊಗ್ಗದಲ್ಲಿ 143, ಚಿಕ್ಕಮಗಳೂರಿನಲ್ಲಿ 126, ವಿಜಯಪುರದಲ್ಲಿ 124, ಉತ್ತರಕನ್ನಡದಲ್ಲಿ 120, ರಾಮನಗರದಲ್ಲಿ 106, ತುಮಕೂರಿನಲ್ಲಿ 104 ಹೊಸ ಸೋಂಕಿನ ಪ್ರಕರಣಗಳು ದೃಢಪಟ್ಟಿವೆ ಎಂದು ಹೆಲ್ತ್ ಬುಲೆಟಿನ್ ಹೇಳಿದೆ.

Related posts