ಕೊರೋನಾ ವೈರಸ್’ಗೆ ಈವರೆಗೆ 13 ಲಕ್ಷ ಮಂದಿ ಬಲಿ

ವಾಷಿಂಗ್ಟನ್: ಅಗೋಚರ ವೈರಾಣು ಕೊರೋನಾ ಜಗತ್ತಿನಾದ್ಯಂತ ಈಗಿನ್ನೂ ತಲ್ಲಣ ಸೃಷ್ಟಿಸುತ್ತಲೇ ಇದೆ. ಹೆಮ್ಮಾರಿ ಕೊರೋನಾ ವೈರಸ್ ವಿಶ್ವದಾದ್ಯಂತ 1,309,713 ಮಂದಿಯನ್ನು ಬಲಿತೆಗೆದುಕೊಂಡಿದೆ ಎಂಬ ಅಂಕಿಅಂಶ ಬಯಲಾಗಿದೆ.

ವೈರಾಣು ಸೋಂಕಿಗೆ ಬಲಿಯಾದವರ ಬಗ್ಗೆ ಮಾಹಿತಿ ಸಂಗ್ರಹಿಸಿರುವ ಪ್ರತಿಷ್ಠಿತ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ಈ ಬಗ್ಗೆ ಅಂಕಿ ಸಂಖ್ಯೆಗಳನ್ನು ಬಹಿರಂಗಪಡಿಸಿದೆ.

ಈ ನಡುವೆ ನವೆಂಬರ್ 14ರಂದು ಒಂದೇ ದಿನ ವಿವಿಧ ದೇಶಗಳಲ್ಲಿ ಸುಮಾರು 657,312 ಮನದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಜಗತ್ತಿನಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ 54,318,841ಕ್ಕೆ ಏರಿಕೆಯಾಗಿದೆ.

Related posts