ಕೊರೋನಾ ನರ್ತನ; ಗೌರೀಬಿದನೂರಿನಲ್ಲಿ ಕ್ವಾರೆಂಟೈನ್’ ನಲ್ಲಿದ್ದ ವೃದ್ದೆ ಬಲಿ

ಬೆಂಗಳೂರು: ಚೀನಾವನ್ನು ಸ್ಮಾಶಾವನ್ನಾಗಿಸಿರುವ ಕೊರೋನಾ ವೈರಾಣು ಇದೀಗ ಕರುನಾಡಿನಲ್ಲೂ ಸರಣಿ ಸಾವಿಗೆ ಕಾರಣವಾಗುತ್ತಿದೆ. ಕೆಲದಿನಗಳ ಹಿಂದಷ್ಟೇ ಕಲಬುರಗಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಕೋವಿಡ್ 19 ವೈರಸ್’ಗೆ ಬಲಿಯಾಗಿದ್ದರು. ಇದೀಗ ರಾಜಧಾನಿಯಿಂದ ಅನತಿ ದೂರದಲ್ಲಿರುವ ಗೌರಿಬಿದನೂರಿನಲ್ಲಿ ಕ್ವಾರೆಂಟೈನ್’ ನಲ್ಲಿದ್ದ ವೃದ್ಧೆಯೊಬ್ಬರು ಕೊರೋನಾ ವೈರಸ್ಸಿನಿಂದಾಗಿ ಮಾರಣವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.

ಆಂಧ್ರಪ್ರದೇಶ ಮೂಲದ 75 ವರ್ಷದ ಮಹಿಳೆ ಸಾವನ್ನಪ್ಪಿದ್ದು, ಇವರು ಮಾರ್ಚ್‌ 23ರಂದು ಮೆಕ್ಕಾದಿಂದ ವಾಪಸ್ಸಾಗಿ ಗೌರಿಬಿದನೂರಿನಲ್ಲಿರುವ ತನ್ನ ಮಗನ ಮನೆಯಲ್ಲಿದ್ದರು. ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಆದರೆ, ಈ ವೃದ್ದೆ ಕ್ವಾರೆಂಟೈನ್’ ನಲ್ಲಿದ್ದರೂ ಅವರು ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ತಕ್ಷಣಕ್ಕೆ ಘೋಷಿಸಲು ಸರ್ಕಾರ ನಿರಾಕರಿಸಿದೆ. ಸಾವಿನ ಕುರಿತ ಸಂಪೂರ್ಣ ವರದಿ ಕೈಸೇರುವ ತನಕ ಇದು ಕೊರೋನಾ ಸೋಂಕಿನಿಂದಲೇ ಉಂಟಾದ ಮರಣ ಎಂದು ದೃಢಪಡಿಸಲು ಸಾಧ್ಯವಿಲ್ಲ ಎಂದು ಆರೋಗ್ಯ ಇಲಾಖೆ ನಿರ್ದೇಶಕ‌ ಡಾ.ಪಾಟೀಲ್ ಓಂಪ್ರಕಾಶ್ ತಿಳಿಸಿದ್ದಾರೆ.

Related posts