ಭಾರತದಲ್ಲಿ 20 ಲಕ್ಷ ದಾಟಿದ ಕೊರೋನಾ ಕೇಸ್

ದೆಹಲಿ: ಭಾರತದಲ್ಲಿ ಕೊರೋನಾ ವೈರಾಣು ಹಾವಳಿಗೆ ಅಂಕುಶ ಬೀಳುತ್ತಿಲ್ಲ. ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಲೇ ಇದ್ದು, ಮಹಾರಾಷ್ಟ್ರದಲ್ಲಿ ಗುರುವಾರ 11 ಸಾವಿರದ 514 ಹೊಸ ಪಾಸಿಟಿವ್ ಕೇಸ್’ಗಳು ಪತ್ತೆಯಾಗಿವೆ.

ಪಶ್ಚಿಮ ಬಂಗಾಳದಲ್ಲಿ 2 ಸಾವಿರದ 954, ಪಂಜಾಬ್ ನಲ್ಲಿ ಸಾವಿರದ 49, ದೆಹಲಿಯಲ್ಲಿ ಸಾವಿರದ 299, ಉತ್ತರ ಪ್ರದೇಶದಲ್ಲಿ 4 ಸಾವಿರದ 658 ಹೊಸ ಕೇಸುಗಳು ದಾಖಲಾಗಿವೆ.

ಈ ಮೂಲಕ ಭಾರತದಲ್ಲಿ ಸೋಂಕಿತರ ಸಂಖ್ಯೆ 20 ಲಕ್ಷ ದಾಟಿದೆ. ಈ ಪೈಕಿ 13 ಲಕ್ಷದ 70 ಸಾವಿರ ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿವೆ.

Related posts