ರಾಜ್ಯದಲ್ಲಿ ಹೆಚ್ಚಿದ ಕೊರೋನಾ ಆತಂಕ; ಸೋಂಕಿತರ ಸಾವಿನ ಸಂಖ್ಯೆ 2,897ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲಿದ್ದು, ಗುರುವಾರ ದಾಖಲೆ ಎಂಬಂತೆ ಸುಮಾರು 6,805 ಕೊರೋನಾ ಸೋಂಕು ಪತ್ತೆಯಾಗಿದೆ. ಅಷ್ಟೇ ಅಲ್ಲ ಗುರುವಾರ ಸಂಜೆಯ ವರದಿ ಪ್ರಕಾರ ಕರ್ನಾಟಕದಲ್ಲಿ ಒಂದೇ ದಿನ ಕೊರೋನಾಗೆ 93 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಾವಿನ ಸಂಖ್ಯೆ 2,897ಕ್ಕೆ ಏರಿಕೆಯಾಗಿದೆ.

ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ಪ್ರಕಾರ ಗುರುವಾರ ಬೆಂಗಳೂರಿನಲ್ಲಿ 2544, ಬಳ್ಳಾರಿಯಲ್ಲಿ 431, ಶಿವಮೊಗ್ಗದಲ್ಲಿ 292, ಬೆಳಗಾವಿಯಲ್ಲಿ 229, ಉಡುಪಿಯಲ್ಲಿ 217, ಧಾರವಾಡದಲ್ಲಿ 212 ಹೊಸ ಪ್ರಕರಣಗಳು ದಾಖಲಾಗಿವೆ.

ಈ ನಡುವೆ ರಾಜ್ಯದ ವಿವಿಧೆಡೆ ಸುಮಾರು 671 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

 

Related posts