ಕರುನಾಡಲ್ಲಿ ಕೊರೋನಾ ತಲ್ಲಣ; ಸೋಂಕು ಹೆಚ್ಚಳದ ಆತಂಕ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ‌ ಸೋಂಕಿನ ಪ್ರಕರಣಗಳ ಹೆಚ್ಚಳ ಗಮನಿಸಿದರೆ ಮುಂದಿನ ದಿನಗಳ ಬಗ್ಗೆ ಆತಂಕ ಉಂಟಾಗುತ್ತದೆ. ಶುಕ್ರವಾರ ಮತೊಮ್ಮೆ ದಾಖಲೆ ಎಂಬಂತೆ ಹೊಸ ಸೋಂಕಿತರ ಸಂಖ್ಯೆ 5 ಸಾವಿರದ ದಾಟಿದ್ದು ಹೆಲ್ತ್ ಬುಲೆಟಿನ್’ನ ಮಾಹಿತಿ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ.

ಶುಕ್ರವಾರ ರಾಜ್ಯದಲ್ಲಿ 5007 ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 85,870ಕ್ಕೆ ಹೆಚ್ಚಳವಾಗಿದೆ. ಬೆಂಗಳೂರು ನಗರದಲ್ಲಿ 2267 ಪ್ರಕರಣಗಳು ಪತ್ತೆಯಾಗಿದ್ದು, ಉಡುಪಿಯಲ್ಲಿ 190, ಬಾಗಲಕೋಟೆಯಲ್ಲಿ 184, ದಕ್ಷಿಣ ಕನ್ನಡದಲ್ಲಿ 180, ಧಾರವಾಡದಲ್ಲಿ 174, ಕಲಬುರಗಿಯಲ್ಲಿ 159, ವಿಜಯಪುರದಲ್ಲಿ 158, ಬಳ್ಳಾರಿಯಲ್ಲಿ 136, ಹಾಸನದಲ್ಲಿ 118, ಬೆಳಗಾವಿಯಲ್ಲಿ 116, ಗದಗದಲ್ಲಿ 108, ರಾಯಚೂರಿನಲ್ಲಿ 107 ಹೊಸ ಸೋಂಕಿನ ಪ್ರಕರಣಗಳು ಬೆಳಕಿಗೆ ಬಂದಿವೆ.

110 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಇದರೊಂದಿಗೆ ಕೊರೋನಾಗೆ ಬಲಿಯಾದವರ ಸಂಖ್ಯೆ 1732 ಕ್ಕೆ ಹೆಚ್ಚಳವಾಗಿದೆ ಎಂದು ಹೆಲ್ತ್ ಬುಲೆಟಿನ್’ ಹೇಳಿದೆ.

 

Related posts