ಕೊರೋನಾ ಹಾವಳಿ; ಇನ್ನೂ ದೂರವಾಗದ ಆತಂಕ

ಬೆಂಗಳೂರು : ರಾಜ್ಯದಲ್ಲಿ ವೈರಾಣು ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಭಾನುವಾರ ಕೂಡಾ ಒಂದೂವರೆ ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಈ ಕುರಿತಂತೆ ಆರೋಗ್ಯ ಸಚಿವ ಡಾ.ಸುಧಾಕರ್ ಅವರೇ ಟ್ವೀಟ್ ಮಾಡಿ ಮಾಹಿತಿ ಬಹಿರಂಗಪಡಿಸಿದ್ದಾರೆ. ಭಾನುವಾರ 1,565 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 2,363 ಜನ ಗುಣಮುಖ ಹೊಂದಿದ್ದಾರೆ. ರಾಜ್ಯದಲ್ಲಿ ಈವರೆಗೂ ಒಟ್ಟು 8,22,953 ಜನ ಗುಣಮುಖ ಹೊಂದಿದ್ದು ಪಾಸಿಟಿವಿಟಿ ದರ ಶೇ.1.57% ಮತ್ತು ಮರಣ ಪ್ರಮಾಣ ಶೇ.1.34%ರಷ್ಟಿದೆ. ಭಾನುವಾರ 99,606 ಟೆಸ್ಟ್ ನಡೆಸಲಾಗಿದ್ದು, ಅವುಗಳಲ್ಲಿ 82,531(82.85%) ಆರ್ ಟಿ-ಪಿಸಿಆರ್ ಟೆಸ್ಟ್ ಆಗಿವೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.

Related posts