ರಾಜ್ಯದಲ್ಲಿ ಕಡಿಮೆಯಾಗುತ್ತಿದೆ ಕೊರೋನಾ ಸೋಂಕಿನ ಪ್ರಮಾಣ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಆರೋಗ್ಯ ಸಚಿವ ಡಾ.ಸುಧಾಕರ್, ಬೆಂಗಳೂರಿನ ಕೋವಿಡ್-19 ಮರಣ ಪ್ರಮಾಣ ಶೇ.1.1% ರಷ್ಟಿದ್ದು, ದೇಶದ ಇತರೆ ಮಹಾನಗರಗಳಿಗೆ ಹೋಲಿಸಿದರೆ ಅತ್ಯಂತ ಕನಿಷ್ಠವಾಗಿದೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಈವರೆಗೂ 3,36,880 ಜನ ಗುಣಮುಖ ಹೊಂದಿದ್ದು, 17,707 ಸಕ್ರಿಯ ಪ್ರಕರಣಗಳಿವೆ. ನಗರದ ಚೇತರಿಕೆ ದರ ಶೇ.93.94% ರಷ್ಟಿದ್ದು, ಸಕ್ರಿಯ ದರ ಶೇ.4.93% ರಷ್ಟಿದೆ ಎಂದು ಸಚಿವ ಸುದ್ಧಾಕರ್ ತಿಳಿಸಿದ್ದಾರೆ.

Related posts