ಆಕ್ಷೇಪಾರ್ಹ ಪೋಸ್ಟ್ ವೈರಲ್; ಆರೋಪಿ ನಿಜಾಮ್‍’ಗೆ ಜೈಲ್

ಮಂಗಳೂರು: ಕೊರೋನಾ ವೈರಸ್ ಮರಣ ಮೃದಂಗ ಭಾರಿಸುತ್ತಿರುವ ಹಿನ್ನೆಲೆಯಲ್ಲಿ ಇಡೀ ದೇಶವೇ ಆಂತಂಕದ ಛಾಯೆಯಲ್ಲಿದೆ. ದೇಶವನ್ನು ಕೊರೋನಾ ಮುಕ್ತ ಮಾಡಬೇಕೆಂಬ ಉದ್ದೇಶದಿಂದ ರಾಷ್ಟ್ರವ್ಯಾಪಿ ಲಾಕ್ ಡೌನ್ ಜಾರಿಗಿಳಿಸಲಾಗಿದೆ. ಆದರೂ ಅನೇಕರು ಬೀದಿಗಿಳಿದು ಲಾಠಿ ತಿಂದಿದ್ದೂ ಆಯಿತು. ಇನ್ನೂ ಕೆಲವರು ಕ್ವಾರಂಟೈನ್’ಗೊಳಗಾಗಿದ್ದೂ ಉಂಟು. ಇದೀಗ ಇದೆ ಲಾಕ್ ಡೌನ್ ಜಾರಿ ಬಗ್ಗೆ ಟೀಕಾಸ್ತ್ರ ಪ್ರಯೋಗಿಸಿ ಪೊಲೀಸರ ಅತಿಥಿಯಾಗಿದ್ದಾನೆ.

ಕರೋನ ವೈರಸ್ ಸೋಂಕು ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅನಗತ್ಯ ಪೋಸ್ಟ್ ಮಾಡಿ ಅಪರಾಹಾರ ಮಾಡಿದ ಆರೋಪದ ಮೇಲೆ ಮಂಗಳೂರು ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ಇದು ನಮ್ಮ ಧ್ವನಿ ಎಂಬ ವೇದಿಕೆ ಹೆಸರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ವಿಷಯವನ್ನು ಹರಡಿದ ಆರೋಪದಲ್ಲಿ ನಿಜಾಮ್‍ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಧೀಶರೆದುರು ವಶಕ್ಕೆ ಒಪ್ಪಿಸಲಾಗಿದೆ. ಈ ಬಗ್ಗೆ ಮಂಗಳೂರು ನಗರ ಪೊಲೀಸ್‍ ಆಯುಕ್ತ ಡಾ.ಹರ್ಷ ಟ್ವೀಟ್ ಮಾಡಿದ್ದಾರೆ.

Related posts

Leave a Comment