ಬೆಂಗಳೂರಿಗೆ ಕಾದಿದೆಯಾ ಸೀಲ್ ಡೌನ್ ಗಂಡಾಂತರ?

ಬೆಂಗಳೂರು: ಚೀನಾದಿಂದ ಕುಖ್ಯಾತಿಗಾಗಿ ಪಯಣ ಆರಂಭಿಸಿದ್ದ ಕೊರೋನಾ ಇದೀಗ ಇಡೀ ಜಗತ್ತನ್ನೇ ಆಲಿಂಗಿಸಿಕೊಂಡಿದೆ. ಇಲ್ಲಿವರೆಗೆ ಬೀದಿಗೆ ಬರಬೇಡಿ ಎಂದು ಎಚ್ಚರಿಕೆಯ ಕರೆಕೊಟ್ಟರೂ ಜನ ಕೇಳಲಿಲ್ಲ. ಆದರೆ ಇದೀಗ ನೀ ಬರಬೇಡ ಅಂದರೂ ಕೊರೋನಾ ಹಿಂದೆ ಸರಿಯುತ್ತಿಲ್ಲ. ಜಗತ್ತಿನಾದ್ಯಂತ ಲಾಕ್ ಡೌನ್ ಪರಿಸ್ಥಿತಿ ನಡುವೆಯೂ ಕೋವಿಡ್-19 ಸೋಂಕು ವಿಸ್ತಾರವಾಗುತ್ತಲೇ ಇವೆ.

ಈ ವಿಚಾರದಲ್ಲಿ ಭಾರತವೂ ಹೊರತಾಗಿಲ್ಲ. ಅದರಲ್ಲೂ ಕಾರುನಾಡಿನಲ್ಲಿ ಕರುಣಾಜನಕ ಸ್ಥಿತಿ ನಿರ್ಮಾಣವಾಗಿದೆ. ದಿನೇದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇವೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಸೋಂಕು ಹೆಚ್ಚುತ್ತಿರುವ ವೇಗವನ್ನು ನೋಡಿದರೆ ಸಿಲಿಕಾನ್ ಸಿಟಿ ಜನ ಎಷ್ಟು ಸೇಫ್ ಎಂಬ ಆತಂಕ ಕಾಡುತ್ತಿದೆ.

ಇದನ್ನೂ ಓದಿ..  ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಮುಂಗಡ ಹಣ; ಇಪಿಎಫ್ ವ್ಯವಸ್ಥೆ

ಈ ವರೆಗಿನ ಅಂಕಿ ಅಂಶಗಳನ್ನು ಗಮನಿಸಿದರೆ ರಾಜ್ಯದಲ್ಲಿನ ಕೊರೋನಾ ಸೋಂಕಿನ ಲೆಕ್ಕದಲ್ಲಿ ಬೆಂಗಳೂರೇ ಮುಂಚೂಣಿಯಲ್ಲಿದೆ. ಈಗಾಗಲೇ ೩೦ ಹಾಟ್’ಸ್ಪಾಟ್’ಗಳನ್ನೂ ಗುರುತಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಆದರೂ ಕೊರೋನಾ ವೇಗಕ್ಕೆ ಬ್ರೇಕ್ ಹಾಕಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ಶುಕ್ರವಾರ ಒಂದೇ ದಿನ 10 ಕೊರೋನಾ ಪಾಸಿಟಿವ್ ಕೇಸ್’ಗಳು ದೃಢಪಟ್ಟಿರುವ ಸಂಗತಿ ಬೆಚ್ಚಿಬೀಳಿಸುವಂತಿದೆ.

ಈ ನಡುವೆ ಪ್ರಧಾನಿ ಕೊಟ್ಟಿರುವ ಡೆಡ್’ಲೈನ್ ದಿನ ಕ್ರಮಿಸುವ ಹಂತದಲ್ಲಿದ್ದು ಅದಾಗಲೇ ಆತಂಕಕಾರಿ ರೀತಿಯಲ್ಲಿ ವೈರಾಣು ರೌದ್ರಾವತಾರ ಗೊತ್ತಾಗುತ್ತಿದೆ. ಅಧಿಕಾರಿಗಳು ಹೇಳುವ ಪ್ರಕಾರ ಬೆಂಗಳೂರಿನಲ್ಲೂ ಪರಿಸ್ಥಿತಿ ಕಂಟ್ರೋಲ್’ಗೆ ಸಿಗುತ್ತಿಲ್ಲ. ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಸೀಲ್ ಡೌನ್ ಗಂಡಾಂತರ ಎದುರಾಗಬಹುದೇ ಎಂಬ ಆತಂಕ ಕಾಡಿದೆ.

ಇದನ್ನೂ ಓದಿ.. ಜನರಿಗಾಗಿ ವಿವಾಹವನ್ನೇ ಮರೆತ ಕನ್ನಡತಿ ಮಹಿಳಾ DYSP

Related posts