ಖಾಕಿಗೂ ಕೊರೋನಾ ಕಂಟಕ; ಪೊಲೀಸರ ಆರೋಗ್ಯ ಕಾಳಜಿಯ ಐಜಿಪಿ ವೀಡಿಯೊ ಬಗ್ಗೆ ಸಕತ್ ಲೈಕ್

ಬೆಂಗಳೂರು: ದೇಶಾದ್ಯಂತ ಕೊರೋನಾ ವೈರಾಣು ಹಾವಳಿ ಮುಂದುವರಿದಿದ್ದು ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲೂ ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ದೃಢಪಡುತ್ತಿದೆ. ಅದರಲ್ಲೂ ಬೆಂಗಳೂರು ಮತ್ತು ಸುತ್ತಮುತ್ತ ಅತಿಯಾದ ವೇಗದಲ್ಲಿ ಸೋಂಕು ಹರಡುತ್ತಿದ್ದು ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ನಡುವೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಿತರಾಗಿರುವ ಪೊಲೀಸರಂತೂ ಕೊರೋನಾ ವೈರಸ್ ವಿಚಾರದಲ್ಲಿ ಸೇಫ್ ಅಲ್ಲ. ಈಗಾಗಲೇ ಕರ್ತವ್ಯ ನಿರತ ಪೊಲೀಸರನೇಕರು ಸೋಂಕಿಗೊಳಗಾಗಿ ಆಸ್ಪತ್ರೆಪಾಲಾಗಿದ್ದಾರೆ. ಅನೇಕ ಸಿಬ್ಬಂದಿ ಸೋಂಕಿಗೆ ಬಲಿಯಾದ ಪ್ರಕರಣಗಳೂ ವರದಿಯಾಗಿವೆ. ಈ ಕಾರಣದಿಂದಾಗಿ ಅನೇಕ ಪೊಲೀಸ್ ಠಾಣೆಗಳನ್ನೂ ಸೀಲ್’ಡೌನ್ ಮಾಡಲಾಗಿದ್ದು ಪೊಲೀಸರ ಕಾಯಕವೂ ದುಸ್ಸಾಹಸ ಎಂಬಂತಿದೆ. ಆದರೆ ಕೆಲಸ ಅನಿವಾರ್ಯವಾಗಿದೆ.

ಇಂತಹಾ ಸಂಧಿಕಾಲದಲ್ಲಿ ಪೊಲೀಸರ ಸುರಕ್ಷೆ ಬಗ್ಗೆ ಕೇಂದ್ರ ವಲಯ ಪೊಲೀಸ್ ಮಹಾ ನಿರೀಕ್ಷಕ ಸೀಮಂತ್ ಕುಮಾರ್ ಸಿಂಗ್ ವಹಿಸಿರುವ ಕಾಳಜಿಯು ಇಡೀ ರಾಜ್ಯದ ಗಮನಸೆಳೆದಿದೆ. ಪ್ರತೀ ದಿನ ಅವರು ತಮ್ಮ ವಲಯ ವ್ಯಾಪ್ತಿಯ ಪೊಲೀಸ್ ಠಾಣೆಗಳಿಂದ ಕೊರೋನಾ ಸೋಂಕಿತರ ಮಾಹಿತಿ ಸಂಗ್ರಹಿಸಿ ಅವರ ಆರೋಗ್ಯ ವಿಚಾರಿಸುತ್ತಿದ್ದಾರೆ. ಜೊತೆಗೆ ಆ ಸಿಬ್ಬಂದಿಗೆ ಯಾವುದರಲ್ಲೂ ಕೊರತೆಯಾಗದಂತೆ ತಾವೇ ಮುತುವರ್ಜಿ ವಹಿಸುತ್ತಿರುವ ಕುರಿತು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮೂಹ ತೃಪ್ತಿ ವ್ಯಕ್ತಪಡಿಸಿದೆ.

ಈ ನಡುವೆ ತಮ್ಮ ಕಚೇರಿಯಿಂದಲೇ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಅವರು ಪೊಲೀಸ್ ಸಿಬ್ಬಂದಿಯ ಆರೋಗ್ಯ ವಿಚಾರಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಭಾರೀ ಸುದ್ದಿಯಾಗುತ್ತಿದೆ. ಪ್ರತಿ ದಿನವೂ ಪೊಲೀಸರ ಸುರಕ್ಷೆಗಾಗಿ ಕೈಗೊಂಡಿರುವ ವ್ಯವಸ್ಥೆಗಳ ಪರಾಮರ್ಶೆಗೂ ಅವರು ಪ್ರಥಮ ಆದ್ಯತೆ ನೀಡುತ್ತಿದ್ದಾರೆ.

ಲಾಕ್’ಡೌನ್ ಜಾರಿಯಾದ ಆರಂಭದಲ್ಲಿ ಕರ್ನಾಟಕದಲ್ಲಿ ಅಸಹಾಯಕರಾಗಿದ್ದ ಉತ್ತರ ಭಾರತದ ಬಡಪಾಯಿ ಕೂಲಿ ಕಾರ್ಮಿಕರ ನೆರವಿಗೆ ಧಾವಿಸಿ ಊಟ-ತಿಂಡಿ-ಆಶ್ರಯ ಕಲ್ಪಿಸಿ ಸೀಮಂತ್ ಕುಮಾರ್ ಸಿಂಗ್ ಅವರು ದೇಶಾದ್ಯಂತ ಸುದ್ದಿಯಾಗಿದ್ದರು. ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಶಂಸೆಯ ಮಹಾಪೂರವೇ ಹರಿದುಬಂದಿತ್ತು. ಇದೀಗ ಕಾನೂನು ರಕ್ಷೆಯಲ್ಲಿ ತೊಡಗಿರುವ ಪೊಲೀಸರ ಸುರಕ್ಷೆ ವಿಚಾರದಲ್ಲಿನ ಈ ಐಜಿಪಿ ನಡೆ ಕೂಡಾ ಎಲ್ಲರ ಗಮನ ಕೇಂದ್ರೀಕರಿಸಿದೆ. ಅವರ ವಿಶಿಷ್ಟ ಕಾರ್ಯ ಶೈಲಿಯ ವೀಡಿಯೊ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಕತ್ ಲೈಕ್ ಗಿಟ್ಟಿಸಿಕೊಳ್ಳುತ್ತಿದೆ.

ಇದನ್ನೂ ಓದಿ.. ಅಸಹಾಯಕ ಉತ್ತರ ಭಾರತ ಮಂದಿಯ ನೆರವಿಗೆ ಧಾವಿಸಿದ ಐಜಿಪಿ ಸೀಮಂತ್ ಕುಮಾರ್ ಸಿಂಗ್ 

 

Related posts