ರಾಜ್ಯದಲ್ಲಿ ಮತ್ತೆ 445 ಹೊಸ ಕೇಸ್; ಸೋಂಕಿತರ ಸಂಖ್ಯೆ 11005ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಾಣು ಹಾವಳಿ ಸಾಮಾಜಿಕ ವ್ಯವಸ್ಥೆಗೆ ಸವಾಲಾಗಿದೆ. ಇಂದೂ ಕೂಡಾ ರಾಜ್ಯದಲ್ಲಿ ಆತಂಕಕಾರಿ ಸಂಖ್ಯೆಯಲ್ಲಿ ಸೋಂಕಿನ ವರದಿ ಬಹಿರಂಗಗೊಂಡಿದೆ.

ಆರೋಗ್ಯ ಇಲಾಖೆ ಇಂದು ಬಿಡುಗಡೆಗೊಳಿಸಿದ ಹೆಲ್ತ್ ಬುಲೆಟಿನ್ ರಾಜ್ಯದಲ್ಲಿ ಹೊಸದಾಗಿ 445 ಹೊಸ ಪಾಸಿಟಿವ್ ಕೇಸ್’ಗಳು ಪತ್ತೆಯಾಗಿದೆ ಎಂದು ಹೇಳಿದೆ. ಗುರುವಾರ ಸಂಜೆಯಿಂದ ಇಂದು ಸಂಜೆವರೆಗಿನ ವಿದ್ಯಮಾನಗಳನ್ನು ಉಲ್ಲೇಖಿಸಿ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದ್ದು, 445 ಹೊಸ ಕೇಸ್’ಗಳಿಂದಾಗಿ ರಾಜ್ಯದಲ್ಲಿ ಈವರೆಗಿನ ಸೋಂಕಿತರ ಸಂಖ್ಯೆ 11005 ಕ್ಕೆ ಏರಿಕೆಯಾಗಿದೆ.

ರಾಜಧಾನಿ ಬೆಂಗಳೂರಿನಲ್ಲೇ 144 ಹೊಸ ಸೋಂಕಿನ ಲೆಕ್ಕ ಸಿಕ್ಕಿದೆ. ಇನ್ನುಳಿದಂತೆ, ಬಳ್ಳಾರಿಯಲ್ಲಿ 47, ಕಲಬುರಗಿಯಲ್ಲಿ 42, ಕೊಪ್ಪಳದಲ್ಲಿ 36, ದಕ್ಷಿಣಕನ್ನಡದಲ್ಲಿ 33, ಧಾರವಾಡ 30, ರಾಯಚೂರಿನಲ್ಲಿ 14, ಗದಗ್’ನಲ್ಲಿ 12, ಚಾಮರಾಜನಗರದಲ್ಲಿ 11 ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಹೆಲ್ತ್ ಬುಲೆಟಿನ್ ಹೇಳಿದೆ.

Related posts