ರಾಜ್ಯದಲ್ಲಿ ಇನ್ನೂ ದೂರವಾಗಿಲ್ಲ ಕೊರೋನಾ ಆತಂಕ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಾಣು ಸೋಂಕಿನ ಪ್ರಮಾಣ ಕಡಿಮೆಯಾದಂತಿಲ್ಲ. ಶನಿವಾರ ರಾಜ್ಯದಲ್ಲಿ 1522 ಕೊರೋನಾವೈರಸ್ ಪ್ರಕರಣಗಳು ಪತ್ತೆಯಾಗಿವೆ.

ಬೆಂಗಳೂರು ನಗರವೊಂದರಲ್ಲೇ ೭೧೯ ಪಾಸಿಟಿವ್ ಕೇಸುಗಳು ಶನಿವಾರ ದೃಢಪಟ್ಟಿದೆ.  ಈ ನಡುವೆ ಒಟ್ಟು 24757 ಸಕ್ರಿಯ ಪ್ರಕರಣಗಳಿದ್ದು, 2133 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೇ ವೇಳೆ, ಸೋಂಕಿನಿಂದ ಶನಿವಾರ 12 ಮಂದಿ ಮೃತಪಟ್ಟಿದ್ದಾರೆ.

ಇಂದಿನವರೆಗೆ ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 11750. ಕೋವಿಡ್-19 ಖಚಿತ ಪ್ರಕರಣಗಳ ಸಂಖ್ಯೆ 882608. ಸೋಂಕಿನ ಶೇಕಡಾವಾರು ಪ್ರಮಾಣ ಶೇ. 1. 37 ಆದರೆ ಸೋಂಕಿನಿಂದ ಮೃತಪಟ್ಟವರ ಶೇಕಡಾವಾರು ಪ್ರಮಾಣ ಶೇ. 0.78.

ಈ ಕುರಿತಂತೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಆ.ಸುಧಾಕರ್, ರಾಜ್ಯದಲ್ಲಿ ಶನಿವಾರ 1,522 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 2,133 ಜನ ಗುಣಮುಖ ಹೊಂದಿದ್ದಾರೆ. ಶನಿವಾರ 1,10,724 ಟೆಸ್ಟ್ ನಡೆಸಲಾಗಿದ್ದು, ಅವುಗಳಲ್ಲಿ 97,724 (83.74%) RT-PCR ಟೆಸ್ಟ್ ಆಗಿವೆ. ಈವರೆಗೂ ರಾಜ್ಯದಲ್ಲಿ 8,46,082 ಜನ ಗುಣಮುಖರಾಗಿದ್ದು ಚೇತರಿಕೆ ದರ 95.86% ಮತ್ತು ಮರಣ ಪ್ರಮಾಣ 1.33% ರಷ್ಟಿದೆ ಎಂದು ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.

 

Related posts