ಕೊರೋನಾ ಸೋಂಕಿಗೆ ಲಸಿಕೆ ಕಂಡುಹಿಡಿಯುವಲ್ಲಿ ಭಾರತ ಯಶಸ್ವಿ

ದೆಹಲಿ: ಇಡೀ ಜಗತ್ತನ್ನು ತಲ್ಲಣಗೊಳಿಸಿರುವ ಕೊರೋನಾ ಸೋಂಕಿಗೆ ಲಸಿಕೆ ಕಂಡುಹಿಡಿಯುವಲ್ಲಿ ಭಾರತೀಯ ಸಂಶೋಧಕರು ಯಶಸ್ವಿಯಾಗಿದ್ದಾರೆ. ಆದರೆ ಮಾನವನಿಗೆ ಅದನ್ನು ಪ್ರಯೋಗಿಸುವ ಪ್ರಕ್ರಿಯೆಯಷ್ಟೇ ಬಾಕಿ ಇದೆ. ಅದಕ್ಕೂ ಇದೀಗ ಅನುಮೋದನೆ ಸಿಕ್ಕಿದೆ.

ಕೋವಿಡ್-19 ವಿರುದ್ಧದ ದೇಶದ ಮೊದಲ ಲಸಿಕೆ ‘ಕೊವಾಕ್ಸಿನ್ ‘ನ ಮಾನವ ಪ್ರಯೋಗಕ್ಕೆ ಹೈದರಾಬಾದ್ ಮೂಲದ ಲಸಿಕೆ ತಯಾರಿಕ ಕಂಪನಿ ಭಾರತ್ ಬಯೋಟೆಕ್’ಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮೋದನೆ ನೀಡಿದೆ. ಇದು ನಿಷ್ಕ್ರಿಯ ಲಸಿಕೆಯಾಗಿದ್ದು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಇದನ್ನು ಅಭಿವೃದ್ಧಿಪಡಿಸಿದೆ.


ಜುಲೈ ತಿಂಗಳಲ್ಲಿ ದೇಶಾದ್ಯಂತ ಈ ಲಸಿಕೆಯ ಮಾನವ ಪ್ರಯೋಗ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಕಂಪನಿ ಈ ಹಿಂದೆ ಪೋಲಿಯೋ, ಚಿಕಾನ್ ಗುನ್ಯಾ, ರೇಬಿಸ್, ರೊಟಾ ವೈರಸ್, ಜಿಂಕಾ ಸಹಿತ ಹಲವು ಕಾಯಿಲೆಗಳಿಗೆ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಹಾಗಾಗಿ ಇದೀಗ ಕೋವಿಡ್-೧೯ ಲಸಿಕೆ ವಿಚಾರದಲ್ಲೂ ಬಹಳಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

Related posts