ಕೃಷಿ ಕಾಯ್ದೆ ವಿರುದ್ದದ ಹೋರಾಟ; ಮತ್ತೆ ಮೂವರು ರೈತರು ಬಲಿ

ದೆಹಲಿ: ಕೇಂದ್ರ ಸರ್ಕಾರ ರೂಪಿಸಿರುವ ಕೃಷಿ ಕಾಯ್ದೆ ವಿರೋಧಿಸಿ ರೈತರ ಹೋರಾಟ ೪೦ ದಿನಕ್ಕೆ ಕಾಲಿಡುತ್ತಿದ್ದಂತೆಯೇ ಮತ್ತೆ ಮೂವರು ಅನ್ನದಾತರು ಬಲಿಯಾಗಿದ್ದಾರೆ.

ದೆಹಲಿಯಲ್ಲಿ ಕೊರೆಯುವ ಚಳಿಯನ್ನೂ ಲೆಕ್ಕಿಸದೇ ಕೃಷಿ ಕಾನೂನು ವಿರೋಧಿಸಿ, ಹೋರಾಟ ಮುಂದುವರಿಸಿದ್ದು ಹೋರಾಟದಲ್ಲಿ ಭಾಗಿಯಾಗಿದ್ದ ಮೂವರು ಭಾನುವಾರ ರೈತರು ಮೃತಪಟ್ಟಿದ್ದಾರೆ.

ಓರ್ವ ರೈತ ಜ್ವರನ್ನು ಬಳಲಿ ಮೃತಪಟ್ಟಿದ್ದಾರೆ, ಮತ್ತೊಬ್ಬ ಅನ್ನದಾತ ಹೃದಯಸ್ತಂಭನದಿಂದ ಪ್ರಾಣ ಕಳೆದುಕೊಂಡಿದ್ದಾರೆನ್ನಲಾಗಿದೆ.

Related posts